ಹುಡುಗಿ ಮನೆಯವರು ಬೆದರಿಸಿದ್ದಕ್ಕೆ ಹುಡುಗ ಆತ್ಮಹತ್ಯೆ
ಬೆಂಗಳೂರು, ಫೆಬ್ರವರಿ 8: ಪ್ರೇಮದಲ್ಲಿ ವಿಫಲನಾಗಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.
ಹೂಡಿಯ ದರ್ಶನ್ ಎಚ್ (25) ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಪಿಟಿಸಿಎಲ್‌ನಲ್ಲಿ ಲೈನ್ ಆಪರೇಟರ್ ಆಗಿದ್ದ ದರ್ಶನ್ ಹೆಣ್ಣೂರಿನ ಲಾಡ್ಜ್ ಒಂದರಲ್ಲಿ ಪ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಒಂದು ವರ್ಷದಿಂದ ದರ್ಶನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತಂತೆ. ಆದರೂ ಯುಕವ ಯುವತಿಯನ್ನು ಭೇಟಿಯಾಗಲು ಹೋದಾಗ ಯುವತಿಯ ಪೋಷಕರು ಸಾಯಿಸುವ ಬೆದರಿಕೆ ಹಾಕಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದರ್ಶನ್ ಕುಟುಂಬದವರು ಹೆಣ್ಣೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಯುವಕನ ಪೋಷಕರು ಯುವತಿ ಹಾಗೂ ಯುವತಿಯ ಕುಟುಂಬದವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.












Click it and Unblock the Notifications