Ejipura: ಕೊನೆಗೂ ವೇಗ ಪಡೆದುಕೊಂಡ ಈಜಿಪುರ- ಇಬ್ಬಲೂರು ಲಿಂಕ್ ರೋಡ್ ಪ್ರಾಜೆಕ್ಟ್

ಬೆಂಗಳೂರು, ಮಾರ್ಚ್ 05: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಈಜಿಪುರದಿಂದ ಇಬ್ಬಲೂರು ಲಿಂಕ್ ರಸ್ತೆ ಯೋಜನೆಯು ಕೊನೆಗೂ ವೇಗವನ್ನು ಪಡೆಯುತ್ತಿದೆ. ಈ ಯೋಜನೆಯು ಬೆಂಗಳೂರಿನ ನಿವಾಸಿಗಳಿಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ಭರವಸೆ ನೀಡುತ್ತದೆ.

ರಾಜ್ಯ ಸರ್ಕಾರವು ಒಳ ಮತ್ತು ಹೊರ ವರ್ತುಲ ರಸ್ತೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯನ್ನು ಹೈ‌ಲೈಟ್ ಮಾಡಿದೆ. ಈಜಿಪುರದಿಂದ ಇಬ್ಬಲೂರು ಲಿಂಕ್ ರಸ್ತೆ ಯೋಜನೆಯು ಪೂರ್ವ ಬೆಂಗಳೂರಿನಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಮಾಡಲಾಗುತ್ತಿದೆ.

Long awaited Ejipura to Iblur link road project is finally gaining momentum

2015 ರಲ್ಲಿ ಮಾಡಲಾಗಿದ್ದ ಈ ಮಾಸ್ಟರ್ ಪ್ಲಾನ್ ಈಜಿಪುರ ಸಿಗ್ನಲ್ ಮತ್ತು ಅಗರ ಲೇಕ್ ಜಂಕ್ಷನ್ ಮೂಲಕ ಹೊರ ವರ್ತುಲ ರಸ್ತೆ (ORR) ಮತ್ತು ಎಚ್‌ಎಸ್‌ಆರ್ ಲೇಔಟ್‌ನೊಂದಿಗೆ ಪೂರ್ವ ಬೆಂಗಳೂರನ್ನು ಸಂಪರ್ಕಿಸುವ ಮಾರ್ಗದ ಅಗತ್ಯವನ್ನು ಎತ್ತಿ ತೋರಿಸಿದೆ. 30 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ಆಗಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಪ್ರಸ್ತಾಪ ಮಾಡಲಾಗಿತ್ತು.

ಈ ಯೋಜನೆ ಆರಂಭಿಕ ಪ್ರಸ್ತಾವನೆಯು ಅಪೂರ್ಣ ಭೂಸ್ವಾಧೀನದಿಂದಾಗಿ ಸ್ಥಗಿತಗೊಂಡಿತು. ಬಿಜೆಪಿ ಸರ್ಕಾರದ ಅಡಿಯಲ್ಲಿ ಈ ಯೋಜನೆಗೆ ಹಣ ಮರುಹಂಚಿಕೆಯು ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು. ಅದೇನೇ ಇದ್ದರೂ, ಬಿಟಿಎಂ ಕ್ಷೇತ್ರದ ಪ್ರತಿನಿಧಿಯ ಪ್ರಸ್ತುತ ಪ್ರಯತ್ನಗಳು, ವಿವಿಧ ಅಧಿಕಾರಿಗಳ ತಂಡಗಳು ನಡೆಸಿದ ಜಂಟಿ ಸಮೀಕ್ಷೆಯ ಬೆಂಬಲದೊಂದಿಗೆ ಈ ಯೋಜನೆಯು ವೇಗ ಪಡೆಯುತ್ತಿದೆ.

ಪ್ರಸ್ತಾವಿತ ಈ 6.9 ಕಿಮೀ ಮಾರ್ಗವು ಇಂದಿರಾನಗರ, ದೊಮ್ಮಲೂರು, ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣದಂತಹ ಪ್ರದೇಶಗಳಿಂದ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ನೀಡುತ್ತದೆ. ಈ ಮೂಲಕ ಕೋರಮಂಗಲವನ್ನು ಕಾಡುತ್ತಿರುವ ಟ್ರಾಫಿಕ್ ಜಾಮ್ ಕಡಿಮೆಯಾಗುವ ಗುರಿಯನ್ನು ಹೊಂದಿದೆ.

Long awaited Ejipura to Iblur link road project is finally gaining momentum

ಈ ಬೇಡಿಕೆಯ ಸಂಪರ್ಕವು ಟ್ರಾಫಿಕ್ ದಟ್ಟಣೆಯ ಈಜಿಪುರ ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ಗೆ ಟ್ರಾಫಿಕ್ ಅನ್ನು ತಿರುಗಿಸುವ ನಿರೀಕ್ಷೆಯಿದೆ. ಅಂದಾಜು 20 ನಿಮಿಷಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ನಿರ್ದಿಷ್ಟ ಭೂಪ್ರದೇಶದ ಸವಾಲುಗಳನ್ನು ನ್ಯಾವಿಗೇಟ್ ಮಾಡಲು ಫ್ಲೈಓವರ್ ಕೂಡ ಇರಲಿದೆ.

ಟ್ರಾಫಿಕ್ ಜಾಮ್ ಕಡಿಮೆ ಮಾಡಿ: ಒತ್ತಾಯ

ಪೂರ್ವ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಕಡಿಮೆ ಮಾಡುವಂತೆ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಉತ್ತಮ ಸುಧಾರಿತ ಮೂಲಸೌಕರ್ಯಗಳು ನೀಡಬೇಕು ಎಂಬ ಅಗತ್ಯವನ್ನು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಈಜಿಪುರದಿಂದ ಇಬ್ಬಲೂರು ಲಿಂಕ್ ರಸ್ತೆ ಯೋಜನೆಯು ದಿನನಿತ್ಯದ ಪ್ರಯಾಣವನ್ನು ಸರಾಗಗೊಳಿಸುವ ಭರವಸೆ ನೀಡುವುದಲ್ಲದೆ, ಅನೇಕರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಬಿಬಿಎಂಪಿಯು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+