ಬೆಂಗಳೂರು ಸೆಂಟ್ರಲ್ : ಪ್ರಕಾಶ್ ರಾಜ್‌ಗೆ ಭಾರಿ ಹಿನ್ನಡೆ
ಬೆಂಗಳೂರು, ಮೇ 23 : ನಟ, ನಿರ್ದೇಶಕ ಪ್ರಕಾಶ್ ರಾಜ್ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಪಿ.ಸಿ.ಮೋಹನ್ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
ಲೋಕಸಭಾ ಚುನಾವಣೆ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರು ಜಯಗಳಿಸಿದ್ದಾರೆ. 70,988 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಪ್ರಕಾಶ್ ರಾಜ್ ಅವರು 28,906 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಪ್ರಕಾಶ್ ರಾಜ್ ಅವರು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಬಿಜೆಪಿಯ ಪಿ.ಸಿ.ಮೋಹನ್ ಅವರು 602853, ಕಾಂಗ್ರೆಸ್-ಜೆಡಿಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು 5,31,885 ಮತಗಳನ್ನು ಪಡೆದಿದ್ದಾರೆ. ಪ್ರಕಾಶ್ ರಾಜ್ 28,906 ಮತಗಳನ್ನು ಪಡೆದಿದ್ದಾರೆ.
ಪಿ.ಸಿ.ಮೋಹನ್ ಮತ್ತು ರಿಜ್ವಾನ್ ಅರ್ಷದ್ ಅವರು 2014ರ ಚುನಾವಣೆಯಲ್ಲಿಯೂ ಎದುರಾಳಿಯಾಗಿದ್ದರು. 1,37,500 ಮತಗಳಿಂದ ಪಿ.ಸಿ.ಮೋಹನ್ ಅವರು ಜಯಗಳಿಸಿದ್ದರು.
ಲೋಕಸಭಾ ಚುನಾವಣೆ ಫಲಿತಾಂಶದಿಂದ ನನಗೆ ಕಪಾಳ ಮೋಕ್ಷವಾಗಿದೆ. ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ನಿಂದನೆ ಎದುರಿಸಬೇಕಿದೆ. ನಾನು ಎಲ್ಲವನ್ನೂ ಎದುರಿಸುತ್ತೇನೆ. ಜಾತ್ಯಾತೀತ ತತ್ವದ ಉಳಿವಿಗಾಗಿ ಹೋರಾಟ ಮುಂದುವರೆಸುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.












Click it and Unblock the Notifications