Get Updates
Get notified of breaking news, exclusive insights, and must-see stories!

Lok Sabha Election 2024: ಬೆಂಗಳೂರು ಉತ್ತರದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ! ಶೋಭಾ ಎದುರು ‘ಕೈ’ ಅಸ್ತ್ರ ವರ್ಕೌಟ್‌ ಆಗುತ್ತಾ?

ಬೆಂಗಳೂರು, ಮಾರ್ಚ್‌ 28: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತದಾರರನ್ನು ಹೊಂದಿರುವುದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಈಗ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 2004 ರಿಂದ ಬಿಜೆಪಿಗೆ ಸಿಕ್ಕ ಮೊದಲ ಗೆಲುವಾಗಿದ್ದು, ಈವರೆಗೂ ಹಿಂದಿರುಗದಂತೆ ಮಾಡಿದೆ.. ಹೊರಗಿನಿಂದ ಬಂದ ಸದಾನಂದಗೌಡರನ್ನ ಎರಡು ಬಾರಿ ಗೆಲ್ಲಿಸಿದ್ದು, ಈ ಬಾರಿ ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋ ಕುತೂಹಲ ಕೆರಳಿಸಿದೆ.

Lok Sabha Election 2024 Bengaluru North Lok Sabha Constituency Round Up

ಬಿಜೆಪಿ, ಕಾಂಗ್ರೆಸ್ ಪಕ್ಷದ ನಡುವೆ ನೇರ ಹಣಾಹಣಿ ಇದ್ದು, ಈ ಬಾರಿ ಎರಡೂ ಪಕ್ಷಗಳಿಂದ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯೋ ಎಲ್ಲಾ ಲಕ್ಷಣಗಳು ಕಂಡು ಬರ್ತಿವೆ.. ಹಾಗಾದ್ರೆ ಈ ಬಾರಿ ಚುನಾವಣಾ ಕಣ ಹೇಗಿರಲಿದೆ, ಜನ ಯಾರನ್ನ ಆರಿಸಿ ಲೋಕಸಭೆ ಪ್ರವೇಶಿಸುವಂತೆ ಮಾಡ್ತಾರೆ ಕುತೂಹಲ ಕೆರಳಿಸಿದೆ. 1951ರಿಂದ ಲೋಕಸಭಾ ಚುನಾವಣೆ ಆರಂಭವಾಗಿದ್ದು, ಈವರೆಗೂ 17 ಬಾರಿ ಚುನಾವಣೆ ನಡೆದಿದೆ. ಈ ಕ್ಷೇತ್ರದಲ್ಲಿ 2004ರ ವರೆಗೂ ಕಾಂಗ್ರೆಸ್ ಅಭ್ಯರ್ಥಿ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಒಂದು ಬಾರಿ ಮಾತ್ರ ಜೆಡಿಎಸ್ ಅಭ್ಯರ್ಥಿ ಗೆಲುವನ್ನ ಸಾಧಿಸಿದ್ದಾರೆ.

2004ರಿಂದ ಸತತವಾಗಿ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅತಿ ಹೆಚ್ಚು ಬಾರಿ ಕಾಂಗ್ರೆಸ್ ನಿಂದ ದಿವಂಗತ ಮಾಜಿ ಸಚಿವ ಸಿ.ಕೆ ಜಾಫರ್ ಷರೀಫ್ ಪ್ರತಿನಿಧಿಸಿದ್ದು, ಅತಿ ಹೆಚ್ಚು ಬಾರಿ ಗೆಲುವನ್ನ ಸಾಧಿಸಿದ್ರು.. 2004ರಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಹೆಚ್.ಟಿ ಸಾಂಗ್ಲಿಯಾನ ಒಮ್ಮೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಮೊದಲ ಗೆಲುವು ಸಾಧಿಸಿದರು. ಬಳಿಕ ಡಿ.ಬಿ ಚಂದ್ರೇಗೌಡ ಒಂದು ಬಾರಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಎರಡು ಬಾರಿ ಗೆಲುವನ್ನ ಸಾಧಿಸಿದ್ದಾರೆ.

ಹಾಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಸದಾನಂದಗೌಡರು ಈಗಾಗಲೇ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ರೂ ಕೂಡ, ಮತ್ತೆ ಚುನಾವಣೆ ಸ್ಪರ್ಧೆ ಮಾಡುವ ಕುರಿತು ಇಂಗಿತ ವ್ಯಕ್ತಪಡಿಸಿದರು. ಆದರೆ, ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ ನಿಂದ ಪ್ರೋ. ರಾಜೀವ್‌ ಗೌಡ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಇನ್ನೂ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಇನ್ನು ನಾಲ್ಕು ಬಾರಿ ಕಾಂಗ್ರೆಸ್‌ನಿಂದಲೂ ಪ್ರಭಲ ವ್ಯಕ್ತಿಯನ್ನೇ ಕಣಕ್ಕಿಳಿಸಿದ್ರು, ಲಕ್ಷಾಂತರ ಲೀಡ್‌ನಲ್ಲೇ ಸೋತಿದ್ದಾರೆ. ಇದೀಗ ಪ್ರೋ. ರಾಜೀವ್‌ ಗೌಡ ಅವರನ್ನ ಕಣಕ್ಕಿಳಿಸಿರುವ ಕಾಂಗ್ರೆಸ್‌ ಪಡೆ ಹಲವು ತಂತ್ರಗಾರಿಕೆಯನ್ನ ನಡೆಸಿದೆ.

Lok Sabha Election 2024 Bengaluru North Lok Sabha Constituency Round Up

ಇನ್ನೂ ಕೆ.ಆರ್ ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿ ನಗರ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವೂ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ಒಂದಾಗಿದೆ. ಈ ಕ್ಷೇತ್ರ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿಕೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಐದು ಬಿಜೆಪಿ, ಮೂರು ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಆದರೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌ ಟಿ ಸೋಮಶೇಖರ್, ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸ್ತಿದ್ದು ಇದು ಬಿಜೆಪಿ ಪಕ್ಷಕ್ಕೆ ತೀವ್ರ ಮೂಜುಗರ ಉಂಟು ಮಾಡಿದೆ.

ಎಸ್‌ ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ, ಬಿಜೆಪಿಗೆ ಹೆಚ್ಚು ಮತಗಳು ಕೊಟ್ಟಿರೋದ್ರಿಂದ ಸೋಮಶೇಖರ್ ಲೆಕ್ಕಾಚಾರಕ್ಕೂ ಪೆಟ್ಟು ಕೊಡುವ ಸಾಧ್ಯತೆ ಇದೆ. ಇನ್ನು ಒಂದುವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದು, ಮೋದಿ ಆಡಳಿತ ವೈಖರಿ ಈ ಕ್ಷೇತ್ರದಲ್ಲಿ ಮತ್ತೊಂದು ಗೆಲುವಿಗೆ ಕಾರಣವಾಗುತ್ತಾ, ಅಥವಾ ಕಾಂಗ್ರೆಸ್‌ ನ ಹಲವು ತಂತ್ರಗಾರಿಕೆ ಬದಲಾವಣೆಗೆ ಕಾರಣವಾಗುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಒಟ್ನಲಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದು, ದಲಿತರು ಕೂಡ ಹೆಚ್ಚು ಕಡಿಮೆ ಪೈಪೋಟಿ ನೀಡುವಷ್ಟಿದೆ. ಆದರೆ, ಲಿಂಗಾಯತ ಮತ್ತು ಕುರುಬರ ಸಂಖ್ಯೆಯೂ ಕೂಡ ನಿರ್ಣಯಕ ಪಾತ್ರ ವಹಿಸಲಿದ್ದು, ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಹೆಚ್ಚಿರುವುದು ಒಕ್ಕಲಿಗ ಅಭ್ಯರ್ಥಿಗೆ ಜನ ಮಣೆ ಹಾಕುವ ಸಾಧ್ಯತೆ ಇದೆ. ಈಗಾಗಲೇ ಎರಡು ಪಕ್ಷದಲ್ಲೂ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರೀ ಮತದಾರ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನ ಕಾದುನೋಡ್ಬೇಕಾಗಿದೆ.

Lok Sabha Election 2024 Bengaluru North Lok Sabha Constituency Round Up

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಮತದಾರರ ಸಂಖ್ಯೆ

ಒಟ್ಟು ಮತದಾರರ ಸಂಖ್ಯೆ - 31,14,249

ಪುರುಷ ಮತದಾರರ ಸಂಖ್ಯೆ - 16,03,410

ಮಹಿಳಾ ಮತದಾರರ ಸಂಖ್ಯೆ - 15,17,255

ಇತರೆ ಮತದಾರರ ಸಂಖ್ಯೆ -584

ಜಾತಿವಾರು ಮತದಾರರ ಲೆಕ್ಕಾಚಾರ

ಒಕ್ಕಲಿಗರು- 12 ಲಕ್ಷ 65 ಸಾವಿರ

ದಲಿತರು - 8 ಲಕ್ಷ 70ಸಾವಿರ

ಲಿಂಗಾಯತರು- 4 ಲಕ್ಷ 20 ಸಾವಿರ

ಕುರುಬರು- 4 ಲಕ್ಷ 70 ಸಾವಿರ

ಮುಸ್ಲಿಮ್​​ - 1 ಲಕ್ಷ 30 ಸಾವಿರ

ಕ್ರೈಸ್ತ - 52 ಸಾವಿರ

ಇತರೆ - 1.5 ಲಕ್ಷ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+