ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈವ್‌ ಬ್ಯಾಂಡ್‌ ರದ್ದು: ಹೈಕೋರ್ಟ್‌ ವಿಚಾರಣೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 26: ರಾಜಧಾನಿ ಬೆಂಗಳೂರಿನ ಬಣ್ಣಬಣ್ಣದ ರಾತ್ರಿಗಳಿಗೆ ಮೆರುಗು ನೀಡುವ ಲೈವ್‌ ಬ್ಯಾಂಡ್‌ ಮತ್ತೆ ಬೇಕೆ ಎನ್ನುವ ವಿವಾದ ಈಗ ಮತ್ತೆ ಸೃಷ್ಟಿಯಾಗಿದೆ.

ಬೆಂಗಳೂರು ಮಹಾನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಅವರು ಇತ್ತೀಚೆಗೆ ಲೈವ್‌ ಬ್ಯಾಂಡ್‌ ಕುರಿತು ಹೊರಡಿಸಿದ್ದ ಆಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮಂಗಳವಾರ ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಕುರಿತು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಮಾದಕ ವ್ಯಸನಿಗಳಾಗಬೇಡಿ, ಆರೋಗ್ಯವಂತರಾಗಿ:ಪರಮೇಶ್ವರ್ ಮಾದಕ ವ್ಯಸನಿಗಳಾಗಬೇಡಿ, ಆರೋಗ್ಯವಂತರಾಗಿ:ಪರಮೇಶ್ವರ್

90ರ ದಶಕದಲ್ಲಿ ಬೆಂಗಳೂರಿನ ಲೈವ್‌ ಬ್ಯಾಂಡ್‌ ದೇಶಾಸ್ಯಂತ ಗಮನಸೆಳೆದಿತ್ತು. ಬೆಂಗಳೂರಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಲೈವ್‌ ಬ್ಯಾಂಡ್‌ಗಳ ಪಾತ್ರವೂ ತುಂಬಾ ಚರ್ಚೆಯ ವಿಷಯವಾಗಿತ್ತು. ಈ ಹಿನ್ನೆಲೆಯಲ್ಲಿ ದಶಕಗಳ ಕಾಲ ಭಾರಿ ಚರ್ಚೆಯಲ್ಲಿದ್ದ ಲೈವ್‌ಬ್ಯಾಂಡ್‌ ಏಕಾಏಕಿ 2006ರಲ್ಲಿ ರದ್ದಾಗಿತ್ತು.

Live band ban; HC issues notice to state govt

ಅದಾದ ಬಳಿಕ ಲೈವ್‌ಬ್ಯಾಂಡ್‌ಗೆ ಹಲವಾರು ರೀತಿಯ ನಿರ್ಬಂಧಗಳನ್ನು ವಿಧಿಸಿ ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಕೆಲವು ಮಾರ್ಗಸೂಚಿಗಳನ್ನು ಮಾಡಲಾಗಿತ್ತು.

ಈ ಮಾರ್ಗಸೂಚಿಗಳ ಅನ್ವಯವೇ ಕಳೆದ ಕೆಲವು ವರ್ಷಗಳಿಂದ ಲೈವ್‌ಬ್ಯಾಂಡ್‌ ನಡೆಸಲಾಗುತ್ತಿತ್ತು. ಆದರೆ ಬೆಂಗಳೂರು ಪೊಲೀಸ್‌ ಆಯುಕ್ತರು ಇತ್ತೀಚೆಗೆ ಲೈವ್‌ಬ್ಯಾಂಡ್‌ ಸಂಪೂರ್ಣ ನಿಷೇಧಿಸಿದ್ದರಿಂದ ವರ್ತಕ ವಲಯದಲ್ಲಿ ಭಾರಿ ಅಸಮಧಾನ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಲೈವ್‌ಬ್ಯಾಂಡ್‌ ರದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಹೈಕೋರ್ಟ್‌ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದರಿಂದ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು, ರಾಜ್ಯ ಸರ್ಕಾರದ ಅಭಿಪ್ರಾಯ ಆಧರಿಸಿ ಮುಂದಿನ ವಿಚಾರಣೆ ವೇಳೆ ಲೈವ್‌ಬ್ಯಾಂಡ್‌ನ ಭವಿಷ್ಯ ನಿರ್ಧಾರವಾಗಲಿದೆ.

English summary
Karnataka high on Tuesday issued notice to the state government regarding imposed ban on live bands in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X