ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ಬೆಂಗಳೂರು, ಮೇ 26: ಲಿಂಗಾಯಿತ ಶ್ರೀಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ. ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶ್ರೀಗಳು ಚೆಕ್ ನೀಡಿದ್ದಾರೆ.
ಕೂಡಲ ಸಂಗಮದ ಬಸವ ಜಯ ಮೃತ್ಯಂಜಯ ಸ್ವಾಮೀಜಿ, ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ತಮ್ಮ ಮಠಗಳಿಂದ ಕೊರೊನಾ ಹೋರಾಟಕ್ಕೆ ಸಹಾಯ ಆಗುವಂತೆ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
ಈಗಾಗಲೇ ಅನೇಕ ಮಠಗಳು ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಮೂಲಕ ಸರ್ಕಾರ ಜೊತೆಗೆ ಕೈಜೋಡಿಸಿವೆ. ಶ್ರೀ ಸಿದ್ಧಗಂಗಾ ಮಠದಿಂದ 50 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಕೂಡ 50 ಲಕ್ಷ ರೂಪಾಯಿ ಪರಿಹಾರ ನಿಧಿಗೆ ನೀಡಿದೆ. ಸುತ್ತೂರು ಮಠವೂ 50 ಲಕ್ಷವನ್ನು ದೇಣಿಗೆ ಕೊಟ್ಟಿದೆ.

ಉಳಿದಂತೆ, ಮೂರು ಸಾವಿರ ಮಠ, ಶ್ರವಣಬೆಳಗೊಳ ಜೈನ ಮಠ ಹೀಗೆ ಸಾಕಷ್ಟು ಮಠಗಳು ಪರಿಹಾರ ನಿಧಿಗೆ ಹಣ ನೀಡಿವೆ.
ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು 2000 ಗಡಿ ದಾಟಿವೆ. ನಿನ್ನೆ ಒಂದೇ ದಿನ 93 ಮಂದಿಗೆ ಕೊರೊನಾ ಸೋಂಕು ತಗುಲಿದೆ . ಭಾರತದಲ್ಲಿ ಒಟ್ಟು 1,38,845 ಕೊರೊನಾ ಸೋಂಕಿತ ಪ್ರಕರಣಗಳಾಗಿವೆ.












Click it and Unblock the Notifications