ಚಿರತೆ ಭೀತಿ: ಬೆಂಗಳೂರಿನ 135 ಶಾಲೆಗಳಿಗೆ ರಜೆ

ಬೆಂಗಳೂರು, ಫೆಬ್ರವರಿ, 11: ಚಿರತೆ ವದಂತಿ ಬೆಂಗಳೂರು ಪೂರ್ವ ಭಾಗವನ್ನು ಬೆಚ್ಚಿ ಬೀಳಿಸಿದೆ. ಮತ್ತೆರಡು ಚಿರತೆಗಳು ದಾಳಿ ಇಟ್ಟಿವೆ ಎಂಬ ವದಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಪೂರ್ವ ವಲಯದ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 135 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಗುರುವಾರ ಒಂದು ದಿನ ರಜೆ ಘೋಷಿಸಿದೆ. ಚಿರತೆಗಳ ಇರುವಿಕೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯದಿದ್ದರೆ ಶುಕ್ರವಾರವೂ ರಜೆ ಮುಂದುವರಿಯಲಿದೆ. ಪ್ರದೇಶದಲ್ಲಿ ಆತಂಕ ಮನೆಮಾಡಿದ್ದು ಜನರು ಹೊರಗೆ ಓಡಾಡಲು ಭಯಭೀತರಾಗಿದ್ದಾರೆ.[ಶಾಲೆಗೆ ಮತ್ತೆ ಬಂದ ಚಿರತೆ, ಮೂವರ ಮೇಲೆ ದಾಳಿ]

Leopard panic grips: 135 Bengaluru schools shut down

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿಬ್ ಗಯಾರ್ ಶಾಲೆ ಬಳಿ ಇರುವ ಸ್ಥಳೀಯರು ಎರಡು ಚಿರತೆಗಳನ್ನು ಕಂಡು ಕಿರುಚಾಡಿದ್ದು, ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಹತ್ತಿರದ ನೀಲಗೀರಿ ತೋಪಿಗೆ ಜನರು ಬೆಂಕಿ ಇಟ್ಟ ಸಂಗತಿಯೂ ವರದಿಯಾಗಿತ್ತು.[ಶಾಲೆಗೆ ಮತ್ತೆ ಬಂದ ಚಿರತೆ, ಮೂವರ ಮೇಲೆ ದಾಳಿ]

ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಹೆಚ್ಚು ಮರ ಹಾಗೂ ಪೊದೆಗಳಿರುವ ಕಾರಣ ಚಿರತೆ ಪತ್ತೆ ಕಾರ್ಯ ವಿಳಂಬವಾಗಿದೆ. ಭಾನುವಾರ ಸೀದಾ ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಯನ್ನು ಹರಸಾಹಸ ಪಟ್ಟು ಹಿಡಿಯಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಿರತೆಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+