ಬಿಜೆಪಿಗೆ, ರಾಜ್ಯಕ್ಕೆ ನನ್ನ ದೋಸ್ತ ಎನ್ನುತ್ತಿದ್ದ ದಿ.ಅನಂತಕುಮಾರ್ ಅಗತ್ಯವಿತ್ತು: ಬೊಮ್ಮಾಯಿ
ಬೆಂಗಳೂರು, ಸೆಪ್ಟಂಬರ್ 22: ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕ ರಾಜ್ಯದ ವಿಚಾರಕ್ಕೆ ಬಂದಾಗ ದಿವಂಗತ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನಂತ ನಮನ 64 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅನಂತಕುಮಾರ್ ಅವರು ಅನಂತವಾದ ಬದುಕನ್ನು ಅಲ್ಪ ಸಮಯದಲ್ಲಿ ಇದ್ದು ಯಶಸ್ಸು ಸಾಧನೆಗಳನ್ನು ಮಾಡಿ ಅತಿ ಚಿಕ್ಕ ವಯಸಿನಲ್ಲಿ ಬಿಟ್ಟು ಹೋಗಿದ್ದಾರೆ.

ದಿ.ಅನಂತಕುಮಾರ್ ಅವರು ಮತ್ತು ನಾನು ಕ್ಲಾಸ್ ಮೇಟ್. ನಾನು ಏನಾದರು ತಪ್ಪು ಮಾಡಿದ್ದರೆ ಅವರು ಕರೆಕ್ಷನ್ ಮಾಡುತ್ತಿದ್ದರು. ಅವರು ನಮ್ಮ ಬೆಂಚ್ ಮೆಟ್ ಆಗಿದ್ದರು. ಹೀಗಾಗಿಯೇ ಅವರು ನನ್ನನ್ನು 'ದೋಸ್ತ' ಎಂದು ಕರೆಯುತ್ತಿದ್ದರು ಎಂದು ಬೊಮ್ಮಾಯಿ ಸ್ಮರಿಸಿದರು.
ತಂದೆ-ತಾಯಿಯಿಂದ ಶಿಸ್ತು, ಹೋರಾಟ ಛಲ, ದೇಶಭಕ್ತಿ ಅನುಸರಣೆ
ಅವರಿಗೆ ಬಹಳ ಉತ್ಸಾಹಿ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವದ ಗುಣ ಇತ್ತು. ನಾವು ಕಾಲೇಜಿನಲ್ಲಿ ಕ್ಯಾಂಟೀನ್ ನಲ್ಲಿ ಟಿ ಕುಡಿಯುವಾಗ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ವಿರುದ್ಧ ಪ್ರತಿಭಟನೆ ಮಾಡೋಣ ಎಂದು ಹೇಳಿದ್ದರು. ಅವರನ್ನು ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆಟರಿ ಮಾಡಿದ್ದೇವು.
ಅವರು ಪ್ರತಿಭಟನೆಯಲ್ಲಿ ಆರೆಸ್ಟ್ ಆಗಿ ನಾಲ್ಕು ತಿಂಗಳು ಜೈಲಿಗೆ ಹೋಗಿದ್ದರು. ಆದರೆ, ಸದಾ ಕಾಲ ಉತ್ಸಾಹ ಕಡಿಮೆಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಎಂಟಿಎಸ್ ಕಾಲೋನಿ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರಲ್ಲಿ ದೇಶ ಭಕ್ತಿ ಮತ್ತು ಹೋರಾಟದ ಛಲ ಇತ್ತು. ಅವರ ತಂದೆ ಶಿಸ್ತಿನ ವ್ಯಕ್ತಿ, ಅವರಿಬ್ಬರ ಗುಣಗಳು ಅನಂತಕುಮಾರ್ ಅವರಿಗೆ ಬಳುವಳಿಯಾಗಿ ಬಂದಿತ್ತು ಎಂದು ವಿವರಿಸಿದರು.

ತೇಜಸ್ವಿನಿ ಅನಂತಕುಮಾರ್ ಅವರು ಅನಂತಕುಮಾರ್ ಅವರಿಗೆ ಬೆಂಬಲವಾಗಿ ನಿಂತರು. ಅನಂತಕುಮಾರ್ ಅವರು ಕರ್ನಾಟಕಕ್ಕೆ ಅಪಾದ್ಬಾಂದವರು, ಕೇಂದ್ರದ ಯಾವುದೇ ವಿಚಾರ ಬಂದಾಗ ನಾವು ಅನಂತ ಕುಮಾರ್ ಮೇಲೆ ಹಾಕುತ್ತಿದ್ದೆವು. ಮೊನ್ನೆಯ ಕಾವೇರಿ ವಿಚಾರವಾಗಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಅವರನ್ನು ಎಲ್ಲರೂ ನೆನೆಸಿಕೊಂಡರು ಎಂದರು.
ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಒಂದು ಆತಂಕ ಎದುರಾಗಿತ್ತು. ಆಂದ್ರ ತೆಲಂಗಾಣಕ್ಕೆ ಪ್ರತ್ಯೇಕವಾಗಿ ನೀರು ಹಂಚಿಕೆಗೆ ಮಾಡುವಂತೆ ಆಗ್ರಹಿಸಿದ್ದರು. ಆಗ ನಾನು ಅನಂತಕುಮಾರ್ ಅವರಿಗೆ ಇದರ ಕುರಿತು ತಿಳಿಸಿದ್ದೆ. ಅವರು ತಕ್ಷಣ ಲಾ ಸೆಕ್ರೆಟರಿಗೆ ಕರೆದು ರಾಜ್ಯ ಸರ್ಕಾರದ ಪರ ಬರೆಯುವಂತೆ ಹೇಳಿದ್ದು, ಆದರೆ ಅವರು ನಿರಾಕರಿಸಿದರು. ಆದರೆ, ಅನಂತಕುಮಾರ್ ಅವರು ಲಾ ಸೆಕ್ರೆಟರಿಯನ್ನೇ ಬದಲಾಯಿಸುವುದಾಗಿ ಹೇಳಿದರು.
ಬಿಜೆಪಿ ಬರಲು ಒತ್ತಾಯಿಸಿದ್ದೆ ಅವರು
ಅನಂತ್ ಕುಮಾರ್ ಅವರು ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನಾನು ಬೇರೆ ಬೇರೆ ಪಕ್ಷದಲ್ಲಿ ಇದ್ದೆವು, ನನಗೆ ಯಾವಾಗಲೂ ದೋಸ್ತ ಅಂತ ಕರೆಯುತ್ತಿದ್ದರು. ಅವರು ಬಿಜೆಪಿಗೆ ಬರುವಂತೆ ಒತ್ತಾಯ ಮಾಡಿದರು.
ನೀನು ಬಂದರೆ ನಮಗೂ ಅನುಕೂಲ ನಿನಗೂ ಗೌರವ ಸಿಗುತ್ತದೆ ಅಂತ ಅನಂತಕುಮಾರ್ ಹೇಳಿದರು. ಅನಂತಕುಮಾರ್ ಒತ್ತಾಯಕ್ಕೆ ಬಿಜೆಪಿ ಬಂದೆ. ನನ್ನನ್ನು ಗೌರವದಿಂದ ನೋಡಿಕೊಂಡರು ಎಂದು ಹಳೆಯ ಅವರು ನೆನಪುಗಳನ್ನು ಮೆಲುಕು ಹಾಕಿದರು.
ಅನಂತ್‌ಕುಮಾರ್ ಅವರಿಗೆ ಅದಮ್ಯ ಚೇತನದ ಬಗ್ಗೆ ಬಹಳ ಪ್ರೀತಿ ಆಸಕ್ತಿ ಇತ್ತು. ತೇಜಸ್ವಿಯವರು ಅದನ್ನು ಅತ್ಯಂತ ಶ್ರದ್ದೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಅದಮ್ಯ ಚೆತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ.ಕೃಷ್ಣಭಟ್ ಹಾಜರಿದ್ದರು.












Click it and Unblock the Notifications