Property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಜಾಗ, ಫ್ಲಾಟ್ ಸಿಗುವ ಪ್ರದೇಶಗಳ ವಿವರ
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಾಕಷ್ಟು ಅಭಿವೃದ್ಧಿಯಾಗಿದೆ. ಬೆಂಗಳೂರಿನಲ್ಲಿ ಪ್ರಾಪರ್ಟಿ ಕೈಗೆಟುಕುವ ಬೆಲೆಯಲ್ಲಿ ಕೆಲವೇ ಕೆಲವು ಭಾಗದಲ್ಲಿ ಮಾತ್ರ ಸಿಗುತ್ತದೆ. ಬೆಂಗಳೂರಿನಲ್ಲಿ ಪ್ರಾಪರ್ಟಿ ಹಾಗೂ ಜಾಗದ ಬೆಲೆಯ ಕೇಳಿಯೇ ಮಧ್ಯಮ ವರ್ಗದವರು ಸುಸ್ತಾಗುವುದು ಇದೆ. ನಾವೆಲ್ಲ ಈ ಜನ್ಮದಲ್ಲಿ ಬೆಂಗಳೂರಲ್ಲಿ ಪ್ರಾಪರ್ಟಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪ್ರಾರ್ಪಟಿ, ಮನೆ ಹಾಗೂ ಫ್ಲಾಟ್ ಎನ್ನುವುದೆಲ್ಲ ಶ್ರೀಮಂತರಿಗೆ ಮಾತ್ರ ಎನ್ನುವ ಮನೋಭಾವನೆ ಇದೆ. ಆದರೆ ಬೆಂಗಳೂರಿನಲ್ಲಿ ಒಂದು ಕೋಟಿ ರೂಪಾಯಿಯ ಒಳಗಡೆ ಹಾಗೂ ಕಡಿಮೆ ಬೆಲೆಗೆ ಜಾಗ ಸಿಗುವ ಪ್ರದೇಶಗಳು ಸಹ ಇವೆ. ಆ ಪ್ರದೇಶಗಳ ವಿವರ ಇಲ್ಲಿದೆ..
ಮನೆ ಕಟ್ಟಬೇಕು.. ಒಂದು ಜಾಗ ತೆಗೆದುಕೊಳ್ಳಬೇಕು ಎನ್ನುವುದು ತುಂಬಾ ಜನರ ಕನಸು. ಆದರೆ ಬೆಂಗಳೂರಿನಲ್ಲಿ ಆಸ್ತಿ ಬೆಲೆ ಕೇಳಿದರೆನೇ ಸುಸ್ತಾಗುವಷ್ಟಿದೆ. ಇನ್ನು ಒಂದು ಜಾಗ ತೆಗೆದುಕೊಂಡು ಅದರಲ್ಲಿ ಮನೆ ಕಟ್ಟುವುದು ಎನ್ನುವುದು ಸಿಕ್ಕಾಪಟ್ಟೆ ರಿಸ್ಕಿ. ಒಂದು ಜೀವಮಾನವೆಲ್ಲವನ್ನ ನಾವು ಮನೆ ಕಟ್ಟುವುದಕ್ಕೆ ಮಾಡುವ ಸಾಲದಲ್ಲೇ ಕಳೆಯಬೇಕು ಎನ್ನುವ ಪರಿಸ್ಥಿತಿ ಇದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ನಿಮಗೆ ಕಡಿಮೆ ಬೆಲೆಗೆ ಆಸ್ತಿ ಸಿಗದೆ ಇರಬಹುದು. ಆದರೆ ಬೆಂಗಳೂರಿನಲ್ಲಿ ಇಂದಿಗೂ ಕಡಿಮೆ ಬೆಲೆಗೆ ಆಸ್ತಿ ಸಿಗುವ ಪ್ರದೇಶಗಳು ಇವೆ. ಹಾಗಾದರೆ ಎಲ್ಲೆಲ್ಲಿ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಆಸ್ತಿ ಹಾಗೂ ಮನೆ ಸಿಗುತ್ತದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುವ ಪ್ರದೇಶ: ಇನ್ನು ಬೆಂಗಳೂರಿನಲ್ಲಿ ಕೋಟಿ ರೂಪಾಯಿಗಿಂತ ಕಡಿಮೆ ಬೆಲೆಗೆ ಆಸ್ತಿ ಸಿಗುವ ಜಾಗಗಳು ಸಹ ಇವೆ. ಇನ್ನು ಬೆಂಗಳೂರಿನ ವೈಟ್‌ಫೀಲ್ಡ್, ಪೂರ್ವ, ಉತ್ತರ ಹಾಗೂ ಹೊರವಲಯದ ಪ್ರದೇಶಗಳಲ್ಲಿ ಒಂದು ಕೋಟಿಗಿಂತ ಕಡಿಮೆ ಮೊತ್ತಕ್ಕೆ ನಿಮಗೆ ಜಾಗ ಸಿಗಲಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಇಂದಿಗೂ ಒಂದು ಕೋಟಿಗೂ ಕಡಿಮೆ ಬೆಲೆಯಲ್ಲಿ ಹಾಗೂ ಕಡಿಮೆ ಬಜೆಟ್‌ನಲ್ಲಿ ಮನೆಗಳು ಸಿಗುವ ಪ್ರದೇಶಗಳು ಇವೆ ಎನ್ನುತ್ತದೆ ನೈಟ್ ಫ್ರಾಂಕ್ ವರದಿ.
ಬೆಂಗಳೂರಿನ ನಗರ ಕೇಂದ್ರ ಭಾಗಕ್ಕೆ ಸಮೀಪದಲ್ಲೇ ಇರುವಂತಹ ಕಾಕ್ಸ್ ಟೌನ್, ಲಿಂಗರಾಜಪುರಂ ಹಾಗೂ ಫ್ರೇಜರ್ ಟೌನ್ ಸೇರಿದಂತೆ ವಿವಿಧ ಭಾಗದಲ್ಲಿ 1 ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಯ ಹೊಸ ಹಾಗೂ ಸಣ್ಣ ಅಪಾರ್ಟ್‌ಮೆಂಟ್‌ಗಳು ಸಿಗಲಿವೆ.

ಉತ್ತರ ಬೆಂಗಳೂರಿನಲ್ಲಿ ಕಡಿಮೆ ಬೆಲೆ: ಇನ್ನು ಬೆಂಗಳೂರಿನ ಉತ್ತರ ಭಾಗದಲ್ಲಿ ಭೂಮಿಗೆ ಬೆಲೆ ಕಡಿಮೆ ಇದೆ. ಹೌದು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಬೆಂಗಳೂರು ಉತ್ತರ ಭಾಗದಲ್ಲಿ ಭೂಮಿ ಬೆಲೆ, ಫ್ಲಾಟ್ ಹಾಗೂ ಅಪಾರ್ಟ್ಮೆಂಟ್‌ನ ಬೆಲೆ ಉಳಿದ ಭಾಗಕ್ಕೆ ಹೋಲಿಕೆ ಮಾಡಿದರೆ ಒಳ್ಳೆಯ ಬೆಲೆ ಇದೆ. ಈ ಭಾಗದಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಾನ್ಯತಾ ಟೆಕ್ ಪಾರ್ಕ್ ನಿರ್ಮಾಣವಾದ ಮೇಲೆ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇಲ್ಲಿನ ಹೆಬ್ಬಾಳ, ಯಲಹಂಕ ಹಾಗೂ ಥಣಿಸಂದ್ರ ಭೂಮಿ ಖರೀದಿಗೆ ಬೇಡಿಕೆ ಇದೆ. ಇನ್ನು ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶ ಹಾಗೂ ಹೊರವಲಯದಲ್ಲಿ 1 ಕೋಟಿ ರೂಪಾಯಿಗೂ ಕಡಿಮೆ ಮೊತ್ತದಲ್ಲಿ ಜಾಗ ಸಿಗುತ್ತಿವೆ.












Click it and Unblock the Notifications