ಬ್ಯಾಂಕಿನಲ್ಲಿ ಕೆಲಸ: ಜೂ. ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಏ.10: ಲಕ್ಷ್ಮಿ ವಿಲಾಸ್ ಬ್ಯಾಂಕ್ ನಲ್ಲಿ ಸಹಾಯಕ ಅಧಿಕಾರಿ ಹುದ್ದೆಗಳು ಖಾಲಿಯಿದೆ. ಭಾರತದ ಹಲವೆಡೆ ಈ ಹುದ್ದೆಯನ್ನು ಭರ್ತಿ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು 25/0/2015ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆ ಹೆಸರು: ಜ್ಯೂನಿಯರ್ ಆಫೀಸರ್
ವಯೋಮಿತಿ: ಕನಿಷ್ಠ 20 ರಿಂದ ಗರಿಷ್ಠ 27 ವರ್ಷ. 02/03/1988ರಿಂದ 01/03/1995ರೊಳಗೆ ಜನಿಸಿದವರಾಗಿರಬೇಕು.
ವಿದ್ಯಾರ್ಹತೆ: ಪದವಿ ಕನಿಷ್ಠ ಶೇ 50. ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದುಕೊಂಡಿರುವ ಯಾವುದೇ ಕಾಲೇಜಿನಿಂದ ಪದವಿ ಹೊಂದಿರಬೇಕು. (10+2+3 ರೆಗ್ಯುಲರ್ ಕಾಲೇಜ್). ಕಂಪ್ಯೂಟರ್ ಜ್ಞಾನ ಪಡೆದಿರಬೇಕು.
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನವಿರುತ್ತದೆ.
ಅರ್ಜಿ ಶುಲ್ಕ: ಆನ್ ಲೈನ್ ಮೂಲಕ 600 ರು ಶುಲ್ಕ ಕಟ್ಟಬೇಕು. ಈ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?:
* ಅರ್ಹ ಅಭ್ಯರ್ಥಿಗಳು www.lvbank.com ವೆಬ್ ಸೈಟ್ ಮೂಲಕ 01/04/2015 ರಿಂದ 25/04/2015ರೊಳಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು.
* ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ Career ಕ್ಲಿಕ್ ಮಾಡಿ.
* ಆನ್ ಲೈನ್ ಅರ್ಜಿ ಸಲ್ಲಿಸುವ ಬಟನ್ ಕ್ಲಿಕ್ ಮಾಡಿ
* ನಿಯಮಗಳನ್ನು ಓದಿಕೊಂಡು ನಂತರ ಅರ್ಜಿ ತುಂಬಿ
* ಅರ್ಜಿ ಸಲ್ಲಿಸಿದ ಮೇಲೆ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು:
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25/04/2015.
* ಕಾಲ್ ಲೆಟರ್ ಡೌನ್ ಲೋಡ್: ಪರೀಕ್ಷೆಗೂ ಒಂದು ವಾರ ಮೊದಲು.
* ಆನ್ ಲೈನ್ ಪರೀಕ್ಷೆ ದಿನಾಂಕ (ಅಂದಾಜು) : ಮೇ 2015.
ಸಹಾಯವಾಣಿ: +91 90195 83229
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಕ್ಷ್ಮಿ ವಿಲಾಸ್ ಬ್ಯಾಂಕಿನ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications