ಬ್ಯಾಗ್ ಮರೆತು ವಿಮಾನ ಏರಿದ, ಬ್ಯಾಗ್ ಏನೋ ಸಿಕ್ತು ಆದ್ರೆ ಅದ್ರಲ್ಲೇನಿತ್ತು
ಬೆಂಗಳೂರು, ಜು.10: ದಿನನಿತ್ಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೂರಾರು ಏರ್‌ಪೋರ್ಟ್ ಬಸ್‌ಗಳು ಓಡಾಡುತ್ತಿರುತ್ತದೆ. ಆದರೆ ಈ ಬಸ್‌ಗಳಲ್ಲೂ ಕಳ್ಳತನವಾಗುತ್ತದೆ ಎಚ್ಚರವಿರಲಿ.
ವಿಮಾನಕ್ಕೆ ಹತ್ತಲು ಹೋಗುವ ಬಸ್‌ನಲ್ಲಿ ಮರೆತುಹೋಗಿದ್ದ ಬ್ಯಾಂಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಈ ಕುರಿತು ವಿಭೂತಿಪುರದ ನಿವಾಸಿ ವಿಶಾಲ್ ಕಾಳೆ ಎಂಬುವರು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೂ.30ರಂದು ವಿಶಾಲ್, ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿಮಾನದಲ್ಲಿ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದರು. ಈ ಮೊದಲು ಅವರು ವಿಮಾನ ನಿಲ್ದಾಣ ಒಳಗೆ ವಿಮಾನದ ಹತ್ತರಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯುವ ಬಸ್‌ನಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವ ಬಸ್‌ನಲ್ಲಿ ಪ್ರಯಾಣಿಸಿದ್ದರು. ಆದರೆ ಬಸ್ ಇಳಿಯುವಾಗ ಬ್ಯಾಗ್ ಮರೆತು ಹೋಗಿದ್ದರು.

ನಂತರ ಅವರಿಗೆ ಬ್ಯಾಗ್ ನೆನಪಾಗಿ ಏರ್‌ಲೈನ್ಸ್ ಸಿಬ್ಬಂದಿಗೆ ತಿಳಿಸಿದಾಗ ಕಾಲ ಮಿಂಚಿತ್ತು, ಬ್ಯಾಗ್ ಏನೋ ಸಿಕ್ಕಿದೆ ಆದರೆ ಅದರಲ್ಲಿದ್ದ 2 ನೆಕ್ಲೇಸ್, 3 ಜೊತೆ ಕಿವಿಯೋಲೆ, 2 ಬಳೆ, 2 ಸರ ಮತ್ತು 1 ಸೊಂಟದ ಪಟ್ಟಿ ಜತೆಗೆ ಮೂಗುತಿ ಇದ್ದ ಬಾಕ್ಸ್ ಕಳವಾಗಿತ್ತು, ಬೇಡದಿರುವ ವಸ್ತುಗಳು ಮಾತ್ರ ಅದರಲ್ಲಿತ್ತು. ಇದೀಗ ಬೆಂಗಳೂರಿಗೆ ಹಿಂದಿರುಗಿದ ಮೇಲೆ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications