ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ!
ಬೆಂಗಳೂರು, ಆಗಸ್ಟ್ 22: ಪೊಲೀಸರೆಂದರೆ ರಕ್ಷಣೆ, ಟ್ರಾಫಿಕ್ ನಿಯಂತ್ರಣ ಅಷ್ಟೇ ಅಲ್ಲದೆ ಅದರ ಹೊರತಾಗಿಯೂ ಉತ್ತಮ ಹವ್ಯಾಸಗಳಿರಬಹುದು ಎಂಬುದರ ಕುರಿತು ಯಾರಾದರೂ ಆಲೋಚಿಸಿದ್ದೀರಾ?
ಕೊಪ್ಪಳ ಜಿಲ್ಲೆಯ ಭಾರತೀಯ ಮೀಸಲು ಪಡೆಯ ಕಮಾಂಡೆಂಟ್ ನಿಶಾ ಜೈನ್ ಅವರು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ತುಂಬಿಸಲು ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಇಂಡಿಯನ್ ರಿಸರ್ವ್ ಬಟಾಲಿಯನ್ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮಕ್ಕಳಿಗಾಗಿ ಗ್ರಂಥಾಲಯ ಆರಂಭಿಸಲಾಗಿದೆ. ಪ್ರತಿಯೊಂದು ಮನೆಯಲ್ಲಿ ಮಕ್ಕಳಿಗೆ ಓದಲು ಪೂರಕವಾದ ವಾತಾವರಣವಿರುವುದಿಲ್ಲ ಹಾಗೂ ಪುಸ್ತಕ ಕೊರತೆ ಇರುವುದನ್ನು ಗಮನಿಸಿ ಈ ಗ್ರಂಥಾಲಯವನ್ನು ಆರಂಭಿಸಿದ್ದಾರೆ.

ಪ್ರಥಮ ಬುಕ್ಸ್ ಎನ್ನುವ ಸಂಸ್ಥೆ ನಡೆಸುತ್ತಿರುವ 'ಡೊನೇಟ್ ಎ ಬುಕ್' ಎನ್ನುವ ಆನ್‌ಲೈನ್ ವೆಬ್‌ಸೈಟ್ ಮೂಲಕ ಅಭಿಯಾನ ಆರಂಭಿಸಲಾಯಿತು. ಅಭಿಯಾನದಲ್ಲಿ ಮನವಿ ಮಾಡಿರುವ ಕಾರಣ 40ಸಾವಿರ ಪುಸ್ತಕಗಳು ದೊರೆತಿವೆ. ನಿಶಾ ಅವರು ಇದಕ್ಕೆ ತಮ್ಮ ಸ್ವಂತ ಹಣವನ್ನೂ ಬಳಸಿದ್ದಾರೆ ಜತೆಗೆ ಕೊಪ್ಪಳದ ಜಿಲ್ಲಾ ಗ್ರಂಥಾಲಯದ ಸಹಕಾರವನ್ನೂ ಪಡೆದಿದ್ದಾರೆ.
ಕಚೇರಿ ಕಟ್ಟಡದಲ್ಲೂ ಓದುವ ಕೋಣೆ ತೆರೆಯಲಾಗಿದೆ, ಇದರಲ್ಲಿ ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲ ಪುಸ್ತಕ ಓದುವ ಅಭಿರುಚಿ ಇರುವ ಹೊರಗಿನವರೂ ಕೂಡ ಬಂದು ಓದಬಹುದಾಗಿದೆ. ಪೊಲೀಸ್ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪುಸ್ತಕಗಳೂ ಲಭ್ಯವಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳಿವೆ.
ಮಕ್ಕಳು ಸಾಲೆಗೆ ಹೋಗುವ ಮುನ್ನ ಹಾಗೂ ಬಂದ ಬಳಿಕ ಶಾಲೆಯ ಪುಸ್ತಕಗಳ ಜಂಜಾಟ ಬಿಟ್ಟು ಇಲ್ಲಿರುವ ಕಥೆ-ಕವನ-ಕಾದಂಬರಿಗಳ ಓದುವಿಕೆ ರೂಢಿಸಿಕೊಂಡಿದ್ದಾರೆ. ಎಲ್ಲ ರೀತಿಯ ಪುಸ್ತಕಗಳು ಇಲ್ಲಿವೆ. ಇಲ್ಲಿಗೆ ಬರುವ ಮಕ್ಕಳು. ಇಲ್ಲಿ ಬಂದು ಪುಸ್ತಕ ಓದಬೇಕಂದ್ರೆ ಪ್ರವೇಶ ಶುಲ್ಕ ಎಷ್ಟಿದೆಯೋ ಏನೋ ಅಂತ ಗಾಬರಿಯಾಗಬೇಕಿಲ್ಲ. ಇಲ್ಲಿ ಬಂದು ಪುಸ್ತಕ ಓದಲು ಹಣ ನೀಡಬೇಕಾಗಿಲ್ಲ.
ಇದು ಇಲ್ಲಿನ ಐಆರ್ಬಿ ಕಮಾಂಡೆಂಟ್ ನಿಶಾ ಅವರ ಕನಸಿನ ಕೂಸು ಎಂದು ಸಿಬ್ಬಂದಿ ಹೇಳುತ್ತಾರೆ, ನಿಶಾ ಅವರ ಪುಸ್ತಕ ಪ್ರೀತಿಯಿಂದ ಸಾವಿರಾರು ಮಕ್ಕಳು ಓದುವ ಹವ್ಯಾಸ ಬೆಳಸಿಕೊಳ್ಳುವಂತಾಗಲಿ ಎನ್ನುವುದು ನಮ್ಮ ಕಳಕಳಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications