Namma Clinics: ತಡವಾಗಿ ಆರಂಭವಾದ ನಮ್ಮ ಕ್ಲಿನಿಕ್‌ಗಳು, ಆದರೂ ಸಿಬ್ಬಂದಿ ಕೊರತೆ
ನಮ್ಮ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಮಂದಿ ಬರುತ್ತಿದ್ದು, ಇಲ್ಲಿ ಗ್ರೂಪ್ ಡಿ ಸಿಬ್ಬಂದಿಯನ್ನು ನೇಮಿಸಿಲ್ಲ
ಬೆಂಗಳೂರು, ಫೆಬ್ರವರಿ. 12: ಸಿಲಿಕಾನ್ ಸಿಟಿಯಲ್ಲಿ ನಮ್ಮ ಕ್ಲಿನಿಕ್‌ಗಳ ಉದ್ಘಾಟನೆ ಈಗಾಗಲೇ ಹೇಳಿದ ಸಮಯಕ್ಕಿಂತ ಹೆಚ್ಚು ವಿಳಂಬವಾಗಿ ನಡೆದಿದೆ. ಆದರೂ ಅದರ ಸೌಕರ್ಕಗಳಲ್ಲಿಯೂ ಅನೇಕ ಕೊರತೆಗಳು ಎದ್ದು ಕಾಣುತ್ತಿವೆ. ಸಂಪೂರ್ಣ ಸಿದ್ಧತೆಯಿಂದ ಕ್ಲಿನಿಕ್ ಸಾರ್ವಜನಿಕರಿಗಾಗಿ ತೆರೆಯಲಾಗಿದೆ ಎಂದು ಹೇಳಿದ್ದರೂ ಕೂಡ ಹಲವು ಕ್ಲಿನಿಕ್‌ಗಳು ಸಾಕಷ್ಟು ಸಿಬ್ಬಂದಿ ಕೊರತೆ ಸೇರಿದಂತೆ ಕೆಲವು ಸಮಸ್ಯೆಗಳಿಂದ ಪರದಾಡುತ್ತಿವೆ.
ನಮ್ಮ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಮಂದಿ ಬರುತ್ತಿದ್ದು, ಇಲ್ಲಿ ಗ್ರೂಪ್ ಡಿ ಸಿಬ್ಬಂದಿಯನ್ನು ನೇಮಿಸಿಲ್ಲ, ಇದರಿಂದ ಕೆಲಸ ಮಾಡಲು ಸಾಕಷ್ಟು ತೊಂದರೆಯಾಗಿದೆ ಎಂದು ವೈದ್ಯಾಧಿಕಾರಿಗಳು ದೂರಿದ್ದರೆ. ಇನ್ನು ಕೆಲವೆಡೆ ಸ್ಟಾಫ್ ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನಿಷಿಯನ್ಸ್‌ಗಳು ಬಂದಿಲ್ಲ.
ಶಾಂತಲಾ ನಗರದ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಯೊಬ್ಬರು, ತಮ್ಮ ಕ್ಲಿನಿಕ್‌ಗೆ ಇನ್ನೂ ಸ್ಟಾಫ್ ನರ್ಸ್ ಇಲ್ಲ ಎಂದಿದ್ದಾರೆ. ಜೀವನ್ ಭೀಮಾ ನಗರದಲ್ಲಿರುವ ಕ್ಲಿನಿಕ್‌ನ ಮತ್ತೊಬ್ಬ ವೈದ್ಯಾಧಿಕಾರಿ, ಆವರಣವನ್ನು ಸ್ವಚ್ಛವಾಗಿಡಲು ಗ್ರೂಪ್ ಡಿ ಉದ್ಯೋಗಿಯನ್ನು ನೇಮಿಸಲಾಗಿಲ್ಲ ಇದರಿಂದ ಸ್ವಚ್ಛತೆ ಮಾಯವಾಗಿದೆ ಎಂದು ದೂರಿದ್ದಾರೆ.

ನಮ್ಮ ಕ್ಲಿನಿಕ್‌ಗಳಲ್ಲಿ ಕೆವಲ ಮಾನವ ಸಂಪನ್ಮೂಲದ ಕೊರತೆಯಷ್ಟೇಯಲ್ಲ, ಈಗ ತಾನೇ ಉದ್ಘಾಟನೆಯಾಗಿರುವ ಈ ಚಿಕಿತ್ಸಾಲಯಗಳಲ್ಲಿ ಸಮರ್ಪಕವಾದ ಸೌಲಭ್ಯಗಳೂ ಇಲ್ಲ. ಕೆಲವು ಕೇಂದ್ರಗಳಲ್ಲಿ ವೈದ್ಯರ ಪರೀಕ್ಷಾ ಕೊಠಡಿಗಳಲ್ಲಿ ಹಾಸಿಗೆಗಳು ಮಾಯಾವಾಗಿವೆ. ಆದರೆ ವೈದ್ಯಾಧಿಕಾರಿಗಳು ಮೇಜಿನ ಮೇಲೆ ಬೆಡ್ ಸ್ಪ್ರೆಡ್‌ಗಳನ್ನು ಹಾಕುವ ಮೂಲಕ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೆ ಈ ಆರೋಪಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ನಿರಾಕರಿಸಿದ್ದಾರೆ. ವೈದ್ಯರ ಪರೀಕ್ಷಾ ಕೊಠಡಿಗಳಲ್ಲಿ ಟೇಬಲ್‌ಗೆ ಹಾಸಿಗೆಗಳಿಲ್ಲ ಎಂಬುದನ್ನು ಅಲ್ಲಗೆಲೆದು, ಎಲ್ಲಾ ಚಿಕಿತ್ಸಾಲಯಗಳು ಸುಸಜ್ಜಿತವಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎನ್.ಬಾಲಸುಂದರ್ ಮಾತನಾಡಿ, ಬೆಂಗಳೂರಿನಲ್ಲಿ ಎಲ್ಲಾ 108 ಕ್ಲಿನಿಕ್‌ಗಳನ್ನು ಉದ್ಘಾಟಿಸಲು ಕೇವಲ ಮೂರು ದಿನಗಳ ನೋಟಿಸ್ ನೀಡಲಾಗಿದೆ. ಇತರ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕ್ಲಿನಿಕ್‌ಗಳನ್ನು ಸಿದ್ಧಪಡಿಸಲಾಗಿದ್ದರೂ, ಉದ್ಘಾಟನೆಗೆ ಮುನ್ನ ವೆಚ್ಚವನ್ನು ತಪ್ಪಿಸಲು ಗ್ರೂಪ್ ಡಿ ಉದ್ಯೋಗಿಗಳನ್ನು ನೇಮಿಸಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಗ್ರೂಪ್ ಡಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಗುತ್ತಿಗೆದಾರರು ಸಿಬ್ಬಂದಿಯನ್ನು ಗುರುತಿಸಿ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕ್ಲಿನಿಕ್‌ಗಳು ಉದ್ಘಾಟನೆಗೊಂಡಿರುವುದರಿಂದ ಈ ಸಮಸ್ಯೆಗಳು ತಾತ್ಕಾಲಿಕವಾಗಿವೆ. ಕೆಲವೇ ವಾರಗಳಲ್ಲಿ, ಎಲ್ಲಾ ಕ್ಲಿನಿಕ್‌ಗಳು ಸುಗಮವಾಗಿ ನಡೆಯುತ್ತವೆ. ವಿಶೇಷವಾಗಿ ಬಡ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಕ್ಲಿನಿಕ್‌ಗಳು ಉತ್ತಮ ಯೋಜನೆ ಎಂದು ಹಲವಾರು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಕ್ಲಿನಿಕ್‌ಗಳಲ್ಲಿ ಗರ್ಭಧಾರಣೆ, ಪ್ರಸವಪೂರ್ವ ಆರೈಕೆ, ನವಜಾತ ಶಿಶುಗಳ ಆರೈಕೆ, ಬಾಲ್ಯ ಮತ್ತು ಹದಿಹರೆಯದವರ ಆರೈಕೆ, ಸಾರ್ವತ್ರಿಕ ರೋಗನಿರೋಧಕ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕಗಳು, ಸಾಂಕ್ರಾಮಿಕ ರೋಗ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಕಾಯಿಲೆಗಳ ಆರೈಕೆ, ಮಧುಮೇಹ, ರಕ್ತದೊತ್ತಡ , ದೀರ್ಘಕಾಲದ ಕಾಯಿಲೆಗಳು ಮತ್ತು ಬಾಯಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಉಚಿತವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ.
-
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
ರಾಶಿಯಷ್ಟೇ ಅಲ್ಲ, ದಿಕ್ಕು ಕೂಡಾ ಮುಖ್ಯ: ರಾಶಿಗನುಗುಣವಾಗಿ ನಿಮ್ಮ ಅದೃಷ್ಟ ದಿಕ್ಕು ಯಾವುದು ಗೊತ್ತಾ? -
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications