Bengaluru KWIN City: ಕ್ವಿನ್ ಸಿಟಿ ಎಂದರೇನು, ಇಲ್ಲಿ ಏನೇನು ಇರುತ್ತೆ! ವಿವರಣೆ
ಬೆಂಗಳೂರು, ಸೆಪ್ಟಂಬರ್ 26: ಬೆಂಗಳೂರಿನ ಹೊರ ವಲಯದಲ್ಲಿ ಬಹುಕೋಟಿ ವೆಚ್ಚದಲ್ಲಿ ಜ್ಞಾನ, ಆರೋಗ್ಯ ಮತ್ತು ಸಂಶೋಧನೆ ನಗರ (ಕ್ವಿನ್ ಸಿಟಿ-Knowledge, Wellbeing, and Innovation City- KWIN City ) ಸ್ಥಾಫಿಸಲಾಗುತ್ತಿದೆ. ಇದು ಕರ್ನಾಟಕ ರಾಜ್ಯದ ಆರ್ಥಿಕ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡಲಿದೆ. ಕರ್ನಾಟಕದ ಮಟ್ಟಿಗೆ ಇದೊಂದು ವಿಶಿಷ್ಟ ಹೆಗ್ಗುರುತು ಆಗಲಿರುವ ವಿನೂತನ 'ಕ್ವಿನ್ ಸಿಟಿ' ಎಂದರೇನು? ಅಲ್ಲಿ ಏನೆಲ್ಲ ಇರಲಿದೆ? ಅದರ ಮಾಹಿತಿ ತಿಳಿಯುವುದು ಎಲ್ಲಿ? ಎಂಬ ಪ್ರಶ್ನೆಗೆ ಇಲ್ಲಿದೆ ವಿವರ.
ಕರ್ನಾಟಕ ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಪೂರ್ಣ ವಿವರಣೆ ಕೊಟ್ಟಿದ್ದಾರೆ. ಈ ಮೂಲಕ ಜನಸಾಮಾನ್ಯರ ಪ್ರಶ್ನೆಗಳಿಗೆ ಸರ್ಕಾರದಿಂದಲೇ ಅಧಿಕೃತ ಮಾಹಿತಿ ಸಿಕ್ಕಂತಾಗಿದೆ.

ಕರ್ನಾಟಕ ಸೇರಿದಂತೆ ದೇಶದ ಭವಿಷ್ಯದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ, ಪ್ರತಿಯೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕ್ವಿನ್ ಸಿಟಿ ವಿಶೇಷ ವಿನ್ಯಾಸ ಮಾಡಲಾಗುತ್ತದೆ. ಸುಸ್ಥಿರತೆ, ಮನೆ, ಕೆಲಸದ ಸ್ಥಳ ಮತ್ತು ಅತ್ಯಾಧುನಿಕ ನಗರ ಸೇರಿದಂತೆ ಬದುಕಿನ ವಿವಿಧ ಸಂಗತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ದಕ್ಷತೆ ಹಾಗೂ ಅನುಕೂಲತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸುಧಾರಿಸುವ 'ಸ್ಮಾರ್ಟ್ ಲಿವಿಂಗ್'ʼ ಪರಿಕಲ್ಪನೆ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಇಂಥದ್ದೊಂದು ವಿನೂತನ ನಗರ (ಕ್ವಿನ್ ಸಿಟಿ) ಬೆಂಗಳೂರು ಹೊರ ವಲಯದ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ಅಸ್ತಿತ್ವಕ್ಕೆ ಬರಲಿದೆ ಎಂದು ಸಚಿವರು ವಿವರಿಸಿದರು.
'ಕ್ವಿನ್ ಸಿಟಿ' ಎಂದರೆ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ. ಇವುಗಳ ನಡುವಣ ಸಮನ್ವಯತೆಯು ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜೊತೆಗೆ ವಿವಿಧ ವಲಯಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ, ಪ್ರಗತಿ ಹೊಂದುವ ಗುರಿ ಇದೆ. ಕ್ವಿನ್ ಸಿಟಿಯು ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಪರಿಸರ ಸ್ನೇಹಿ ಮೂಲಸೌಲಭ್ಯಗಳ ನೆರವಿನಿಂದ ಹೊಸ-ಯುಗದ, ಸುಸ್ಥಿರ ಜೀವನಶೈಲಿ ಒದಗಿಸಲಿದೆ.
ಇಲ್ಲಿನ ಅಗತ್ಯ ಮೂಲಸೌಕರ್ಯಗಳಾದ ಕುಡಿಯಲು ನೀರು ಮತ್ತು ವಿದ್ಯುತ್ ಸೌಲಭ್ಯಗಳ ಲಭ್ಯತೆಯು ಭವಿಷ್ಯದ ಬೇರಾವುದೇ ಉದ್ದೇಶಿ ಸ್ಮಾರ್ಟ್ ನಗರಗಳಿಗೆ ಆದರ್ಶಪ್ರಾಯವಾಗಿರಲಿದೆ ಎಂದು ತಿಳಿಸಿದರು.
'ಕ್ವಿನ್ ಸಿಟಿ'ಯ ದೂರದೃಷ್ಟಿ, ಪ್ರಯೋಜನಗಳ ಮಾಹಿತಿ
ಜ್ಞಾನ ಜಿಲ್ಲೆ: ಪ್ರತ್ಯೇಕ ಜ್ಞಾನ ಕೇಂದ್ರದೊಂದಿಗೆ, ಕ್ವಿನ್ ಸಿಟಿ-ಯು ಆಧುನಿಕ ಪಠ್ಯಕ್ರಮ ಮತ್ತು ಉನ್ನತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ ಸ್ಥಾಪನೆ ಆಗಲಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮ ಆಧರಿಸಿ ಕ್ಯಾಂಪಸ್‌ಗಳನ್ನು ನಿರ್ವಹಿಸಲು 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸುವ ಗುರಿ ಈ ನಗರ ಹೊಂದಿದೆ. ಇದು ಕರ್ನಾಟಕವನ್ನು ಜಾಗತಿಕ ಶಿಕ್ಷಣದ ಕ್ಷೇತ್ರದ ಮುಂಚೂಣಿಗೆ ಕೊಂಡೊಯ್ಯುವ ಶೈಕ್ಷಣಿಕ ವಲಯ ಹಾಗೂ ಉದ್ಯಮದ ಪಾಲುದಾರಿಕೆ ಪ್ರೋತ್ಸಾಹಿಸಲಿದೆ.
ಆರೋಗ್ಯ ಜಿಲ್ಲೆ: ಜೀವ ವಿಜ್ಞಾನ (ಲೈಫ್ ಸೈನ್ಸಸ್) ಪಾರ್ಕ್ ಒಳಗೊಂಡಿರುವ ಕ್ವಿನ್ ಸಿಟಿಯು ಏಷ್ಯಾದ ಪ್ರಮುಖ ಶೈಕ್ಷಣಿಕ ವೈದ್ಯಕೀಯ ಕೇಂದ್ರವಾಗಿ ಬೆಳೆಯಲಿದೆ. ರಾಷ್ಟ್ರೀಯ ಮತ್ತು ಅಂತಾರರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳನ್ನು ಆಕರ್ಷಿಸುವ ಮೂಲಕ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸಲಿದೆ. ಈ ಉಪಕ್ರಮವು ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನಮಾನವನ್ನು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿಸಲಿದೆ.
ನಾವೀನ್ಯತಾ ಜಿಲ್ಲೆ: ಕ್ವಿನ್ ಸಿಟಿಯು ಜೀವ ವಿಜ್ಞಾನ, ಭವಿಷ್ಯದ ಸಂಚಾರ, ಸೆಮಿಕಂಡಕ್ಟರ್, ಸುಧಾರಿತ ಪರಿಕರ, ಆಧುನಿಕ ತಯಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ ವಲಯಗಳ ಅಗತ್ಯತೆ ಪೂರೈಸಲಿದೆ.
ಇನ್ನೂ ಜಾಗತಿಕ ಬದಲಾವಣೆಗಳು ಮತ್ತು ಮಾರುಕಟ್ಟೆ ಬೇಡಿಕೆಗಳಿಗೆ ಹೊಂದಿಕೊಳ್ಳುವ ಮೂಲಕ, ಕ್ವಿನ್ ಸಿಟಿಯು ವಿಶಾಲವಾದ ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಪಾತ್ರವನ್ನು ಹೆಚ್ಚಿಸುವ ಗುರಿ ಹೊಂದಿದೆ, ನಿರಂತರವಾದ ನಾವೀನ್ಯತೆಯ ವಾತಾವರಣ ಉತ್ತೇಜಿಸಲಿದೆ.
ಸಂಶೋಧನಾ ಜಿಲ್ಲೆ: ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಹೆಚ್ಚಿಸಲು ಮೀಸಲಾಗಿರುವ ಕ್ವಿನ್ ಸಿಟಿಯು ಕ್ಲಿನಿಕಲ್ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಲಿದೆ. ಇದು ಜಾಗತಿಕ ಜ್ಞಾನ ಆಧಾರಿತ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುವ, ಪ್ರಕಾಶನ, ಸೆಮಿನಾರ್ ಮತ್ತು ಸಾರ್ವಜನಿಕ ಉಪನ್ಯಾಸಗಳ ಸಹಿತ ಸಂಶೋಧನೆಗೆ ಉತ್ತೇಜನ ನೀಡಲಿದೆ.
ಕ್ವಿನ್ ಸಿಟಿ ಇದು ಭವಿಷ್ಯದತ್ತ ಒಂದು ದೂರದೃಷ್ಟಿಯ ಮಹತ್ವದ ಹಾಗೂ ದಿಟ್ಟ ಹೆಜ್ಜೆಯಾಗಿದೆ. ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ವಿಶ್ವ ದರ್ಜೆಯ ಕೇಂದ್ರ ನಿರ್ಮಿಸುವ ಮೂಲಕ ವಿಶ್ವವು ಕರ್ನಾಟಕ ಮತ್ತು ಬೆಂಗಳೂರಿನ ಕಡೆಗೆ ತಿರುಗಿ ನೋಡುವಂತಾಗುತ್ತದೆ..
ಹೆಚ್ಚಿನ ಮಾಹಿತಿ ತಿಳಿಯಲು ನೀವು kwincity.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದಾಗಿದೆ..
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ












Click it and Unblock the Notifications