ಕುವೆಂಪು ವಿಚಾರ ಕ್ರಾಂತಿ - ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ
ರಾಷ್ಟ್ರಕವಿ ಕುವೆಂಪು ಅವರ 112 ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ಕುವೆಂಪು ಫೇಸ್ಬುಕ್ ಪುಟದ ವತಿಯಿಂದ "ಕುವೆಂಪು ವಿಚಾರ ಕ್ರಾಂತಿ" ಎಂಬ ಹೆಸರಿನಲ್ಲಿ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತಿದೆ.
ಬೆಂಗಳೂರು, ಡಿಸೆಂಬರ್ 21: ರಾಷ್ಟ್ರಕವಿ ಕುವೆಂಪು ಅವರ 112 ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ಕುವೆಂಪು ಫೇಸ್ಬುಕ್ ಪುಟದ ವತಿಯಿಂದ "ಕುವೆಂಪು ವಿಚಾರ ಕ್ರಾಂತಿ" ಎಂಬ ಹೆಸರಿನಲ್ಲಿ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತಿದೆ.
ಈ ರಸಪ್ರಶ್ನೆ ಕಾರ್ಯಕ್ರಮವು ದಿನಾಂಕ 28-12-2016, ಬುಧವಾರ ಸಂಜೆ 4 ರಿಂದ 5 ರವರೆಗೆ ನಡೆಯಲಿದೆ.
ಕುವೆಂಪುರವರ ವಿಚಾರಗಳು ಮತ್ತು ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ರಸಪ್ರಶ್ನೆ ಒಳಗೊಂಡಿದ್ದು ಕುವೆಂಪುರವರ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೆಲವು ಪುಸ್ತಕಗಳ ಆಯ್ದ ಅಧ್ಯಾಯಗಳಿಂದ ಆರಿಸಿಕೊಳ್ಳುವುದಾಗಿ ಅಡ್ಮಿನ್ ತಂಡದವರು ತಿಳಿಸಿದ್ದಾರೆ.
ರಸಪ್ರಶ್ನೆಯ ವಿಷಯ:
ಈ ಕೆಳಗಿನ ಅಧ್ಯಾಯಗಳಿಂದ ರಸಪ್ರಶ್ನೆಗೆ ಪ್ರಶ್ನೆಗಳನ್ನು ಆರಿಸಿಕೊಳ್ಳಲಾಗುವುದು ಮತ್ತು ಇದರ ಜೊತೆಗೆ ಕುವೆಂಪು ಅವರ ಜೀವನದ ಬಗ್ಗೆ ಕೆಲವು ಪ್ರಶ್ನೆಗಳು ಇರುತ್ತವೆ.
1. ಕಾಡಿನಲ್ಲಿ ಕಳೆದ ಒಂದಿರುಳು (ಪುಸ್ತಕ: ಮಲೆನಾಡಿನ ಚಿತ್ರಗಳು)
2. ಬಹುಜಿಹ್ವಾಭಾರತಿಗೆ ಐಕ್ಯತೆಯ ಆರತಿ (ಪುಸ್ತಕ: ಮನುಜ ಮತ ವಿಶ್ವ ಪಥ)
3. ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೆ ಸಾರ್ವಭೌಮ ಭಾಷೆ (ಪುಸ್ತಕ: ಮನುಜ ಮತ ವಿಶ್ವ ಪಥ)
4. ಮಲೆನಾಡಿನ ಯುವಕರಲ್ಲಿ (ಪುಸ್ತಕ:ಆತ್ಮಶ್ರಿಗಾಗಿ ನಿರಂಕುಶಮತಿಗಳಾಗಿ)
5. ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ (ಪುಸ್ತಕ:ವಿಚಾರ ಕ್ರಾಂತಿಗೆ ಆಹ್ವಾನ)
6. ಕರ್ನಾಟಕ: ಇಟ್ಟ ಹೆಸರು ಕೊಟ್ಟ ಮಂತ್ರ (ಪುಸ್ತಕ:ವಿಚಾರ ಕ್ರಾಂತಿಗೆ ಆಹ್ವಾನ)

ಬಹುಮಾನಗಳು:
ರಸಪ್ರಶ್ನೆಯಲ್ಲಿ ಗೆದ್ದವರಿಗೆ ಕುವೆಂಪುರವರ ಪ್ರಸಿದ್ಧ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
1ನೇ ಬಹುಮಾನ: ನೆನಪಿನ ದೋಣಿಯಲಿ
2ನೇ ಬಹುಮಾನ: ಮಲೆಗಳಲ್ಲಿ ಮದುಮಗಳ
3ನೇ ಬಹುಮಾನ: ಕಾನೂರು ಹೆಗ್ಗಡತಿ
ಐದು ಸಮಾಧಾನಕರ ಬಹುಮಾನಗಳು: ಕುವೆಂಪು ಕ್ಯಾಲೆಂಡರ್/ಫೋಟೋ
ರಸಪ್ರಶ್ನೆಯಲ್ಲಿ ಭಾಗವಹಿಸುವುದು ಹೇಗೆ?
1) ನೋಂದಣಿ ಮಾಡಿಕೊಳ್ಳಿ:
ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬಹುದು ಅಥವಾ 9986468550 / 9743159250 ಸಂಖ್ಯೆಗೆ ನೇರವಾಗಿ ಕರೆಮಾಡಿ / ವಾಟ್ಸಪ್ ಮೆಸೇಜ್ ಕಳುಹಿಸುವುದರ ಮೂಲಕವು ನೋಂದಣಿ ಮಾಡಿಕೊಳ್ಳಬಹುದು.
ಸೂಚನೆ: ರಸಪ್ರಶ್ನೆಯ ಬಗ್ಗೆ ಸೂಚನೆಗಳನ್ನು ಕೊಡಲು ವಾಟ್ಸಪ್ ಗುಂಪನ್ನು ರಚಿಸಿ ರಸಪ್ರಶ್ನೆಗೆ ಸಂಬಂಧಿಸಿದ ವಿಷಯಗಳನ್ನು ಈ ಗುಂಪಿನಲ್ಲಿ ಹಂಚಿಕೊಳ್ಳಲಾಗುವುದು.
*ನೋಂದಣಿ ಮಾಡಿಕೊಳ್ಳದವರೂ* ಸಹ ರಸಪ್ರಶ್ನೆ ನಡೆಯುವ ದಿನದಂದು ಕುವೆಂಪು ಫೇಸ್ಬುಕ್ ಪುಟದಲ್ಲಿ (www.fb.com/kvputtappa) ನಾವು ಹಾಕುವ ಲಿಂಕ್ ಬಳಸಿಕೊಂಡು ರಸಪ್ರಶ್ನೆಯಲ್ಲಿ ಭಾಗವಹಿಸಲು ಅವಕಾಶವಿದೆ.
* ರಿಜಿಸ್ಟರ್ ಮಾಡಿಕೊಳ್ಳಲು 27-12-2016 ರ ಸಂಜೆಯವರೆಗೂ ಅವಕಾಶವಿದೆ*
2) 28-12-2016 ನೇ ಬುಧವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಫೇಸ್ಬುಕ್ ಪುಟದಲ್ಲಿ (www.fb.com/kvputtappa) ಕ್ವಿಜ್ ಲಿಂಕ್ ಹಾಕಲಾಗುತ್ತದೆ. ಸಂಜೆ 4 ಗಂಟೆಗೆ ಸರಿಯಾಗಿ ಲಿಂಕ್ ಆಕ್ಟಿವೇಟ್ ಆಗುತ್ತದೆ ಮತ್ತು 5 ಗಂಟೆವರೆಗೆ ರಸಪ್ರಶ್ನೆ ತೆಗೆದುಕೊಳ್ಳಲು ಅವಕಾಶವಿರುತ್ತದೆ ನಂತರ ಲಿಂಕನ್ನು ತೆಗೆದುಹಾಕಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ವಾಟ್ಸಪ್ ಸಂಖ್ಯೆ: 9986468550 / 9743159250
ಮಿಂಚಂಚೆ: [email protected]
ಪೇಜ್: www.fb.com/kvputtappa
ರಸಪ್ರಶ್ನೆಯಲ್ಲಿ ಭಾಗವಹಿಸಲು ರಿಜಿಸ್ಟರ್ ಮಾಡಿಕೊಳ್ಳವ ಲಿಂಕ್
(ಒನ್ಇಂಡಿಯಾ ಸುದ್ದಿ)












Click it and Unblock the Notifications