• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧಿಕಾರಕ್ಕೆ ಬಂದ್ರೆ ವಿಪ್ರರಿಗೆ ನೂರು ಕೋಟಿ : ಕುಮಾರಸ್ವಾಮಿ

By Prasad
|

ಬೆಂಗಳೂರು ಫೆಬ್ರವರಿ 24 : ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮಾಜದ ಅಭಿವೃದ್ದಿಗೆ ನೂರು ಕೋಟಿ ರೂಪಾಯಿಗಳ ವಿಪ್ರ ನಿಧಿ ಘೋಷಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ಮಹಾನಗರ ಸಂಘಟನೆಯ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಬೆಂಗಳೂರು ಮಹಾನಗರ ವಿಪ್ರ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ಭದ್ರಕೋಟೆ ಬಸವನಗುಡಿಗೆ ಲಗ್ಗೆ ಹಾಕುವವರು ಯಾರು?

ರಾಜ್ಯದ ಅಭಿವೃದ್ದಿಗೆ ಯಾವುದೇ ಸರಕಾರಗಳು ನೀಡಿರುವ ಕೊಡುಗೆಗಳಿಗಿಂತಾ ಬ್ರಾಹ್ಮಣ ಸುಮುದಾಯ ನೀಡಿರುವ ಕೊಡುಗೆ ಅಪಾರ. ಇದುವರೆಗೂ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಆದರೆ ಈ ಕಾರ್ಯಕ್ರಮದಿಂದ ದೊರೆತ ಖುಷಿ ಎಲ್ಲೂ ಸಿಕ್ಕಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಬ್ರಾಹ್ಮಣರಿಗಾಗಿ ಪ್ರತ್ಯೇಕ ನಿಗಮವನ್ನು ರಚಿಸುವುದು ವಿಪ್ರ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ. ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಸರಕಾರ ಈ ಬಗ್ಗೆ ಚರ್ಚೆ ಪ್ರಾರಂಭಿಸಿತ್ತು. ಆದರೆ, ಕೊನೆಗೆ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕುಮಾರಸ್ವಾಮಿ ಅವರು ವಿಷಾದ ವ್ಯಕ್ತಪಡಿಸಿದರು.

ಹಿರಿಯರ ಆಶೀರ್ವಾದ ಸಿಕ್ಕರೆ ನೂರು ಕೋಟಿ

ಹಿರಿಯರ ಆಶೀರ್ವಾದ ಸಿಕ್ಕರೆ ನೂರು ಕೋಟಿ

ಹಿರಿಯರ ಆಶೀರ್ವಾದದೊಂದಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಇನ್ನೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆಯೇ ಇಲ್ಲ ಎಂದು ಅವರು ಭರವಸೆ ನೀಡಿದರು. ಇದಕ್ಕೆ ಸ್ಥಳದಲ್ಲೇ ನೂರು ಕೋಟಿ ರೂಪಾಯಿಗಳ ವಿಪ್ರ ನಿಧಿ ಕಾರ್ಯಕ್ರಮದ ಘೋಷಣೆ ಮಾಡುವುದಾಗಿ ಭರವಸೆ ನೀಡಿದರು.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!

ಅಧಿಕಾರಿಗಳನ್ನು ಹೊರತುಪಡಿಸಿದ ಆಡಳಿತ

ಅಧಿಕಾರಿಗಳನ್ನು ಹೊರತುಪಡಿಸಿದ ಆಡಳಿತ

20 ತಿಂಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ನನಗೆ ಯಾವುದೇ ಅನುಭವವಿರಲಿಲ್ಲಾ. ಆದರೆ ಮುಂದಿನ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಅಧಿಕಾರಿಗಳನ್ನು ಹೊರತುಪಡಿಸಿದ ಆಡಳಿತ ನೀಡುವುದಾಗಿ ಹೇಳಿ ಕುಮಾರಸ್ವಾಮಿ ಅವರು ಭರ್ಜರಿ ಚಪ್ಪಾಳೆ ಗಿಟ್ಟಿಸಿದರು.

ಉತ್ತರ ಕರ್ನಾಟಕದಲ್ಲಿ ಎಚ್ಡಿಕೆ ಪ್ರವಾಸ

ಉತ್ತರ ಕರ್ನಾಟಕದಲ್ಲಿ ಎಚ್ಡಿಕೆ ಪ್ರವಾಸ

ಇಂದಿನಿಂದ ಚುನಾವಣಾ ಪ್ರವಾಸ ಕೈಗೊಳ್ಳುತ್ತಿದ್ದು ಒಂದು ತಿಂಗಳುಗಳ ಕಾಲ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಡಳಿತ ಪಕ್ಷ ತಮ್ಮ ಚುನಾವಣಾ ಪ್ರವಾಸದ ಕುರಿತು ಜಾಹೀರಾತುಗಳನ್ನು ನೀಡುವ ಬದಲು ಅದೇ ಹಣದಲ್ಲಿ ರಾಜ್ಯದ ಜನತೆಗೆ ಹಲವಾರು ಅಭಿವೃದ್ದಿಗಳನ್ನು ಕೈಗೊಳ್ಳಬಹುದಿತ್ತು ಟೀಕಿಸಿದರು.

ಸುಭುದೇಂದ್ರತೀರ್ಥ ಶ್ರೀಪಾದರು ಭಾಗಿ

ಸುಭುದೇಂದ್ರತೀರ್ಥ ಶ್ರೀಪಾದರು ಭಾಗಿ

ಕಾರ್ಯಕ್ರಮದಲ್ಲಿ ರಾಘವೇಂದ್ರಸ್ವಾಮಿ ಮಠದ ಸುಭುದೇಂದ್ರತೀರ್ಥ ಶ್ರೀಪಾದಂಗಳವರು, ಕಣ್ವಮಠ ಮೂಲ ಮಹಾಸಂಸ್ಥಾನದ 1008 ಶ್ರೀ ವಿದ್ಯಾವಾರಿಧಿತೀರ್ಥ ಶ್ರೀಪಾದಂಗಳವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್ ವೆಂಕಟನಾರಾಯಣ, ಶಾಸಕರಾದ ಆರ್ ವಿ ದೇವರಾಜ್, ಕೆ ಗೋಪಾಲಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former chief minister of Karnataka H D Kumaraswamy has assures Rs 100 crores to Brahmins if his party JDS comes to power in Karnataka Assembly Elections 2018. HDK inaugurated 2 days conference of Vipras at Basavanagudi ground in Bengaluru on 24th February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more