KSRTC Student Bus Pass: ಇಂದಿನಿಂದ ಶಾಲಾ-ಕಾಲೇಜು ಆರಂಭ: ಬಸ್ ಪಾಸ್ ಅವಧಿ ಜೂನ್ 15ರವರೆಗೆ ವಿಸ್ತರಿಸಿದ KSRTC

ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ, ಕಾಲೇಜುಗಳು ಆರಂಭವಾಗಿವೆ. ಬೇಸಿಗೆ ರಜೆ ಮುಗಿಸಿರುವ ವಿದ್ಯಾರ್ಥಿಗಳು ಮರಳಿ ಪ್ರಸಕ್ತ ಶೈಕ್ಷಣಿಕ ಸಂಸ್ಥೆಗಳತ್ತ ಮುಖ ಮಾಡಿದ್ದಾರೆ. ಅವರಿಗೆ ಅನಾನುಕೂಲವಾಗದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸುತ್ತೋಲೆಯನ್ನು ಹೊರಡಿಸುವ ಮೂಲಕ ಸಿಹಿ ಸುದ್ದಿ ನೀಡಿದೆ.

ರಾಜ್ಯ ಎಲ್ಲ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಶೈಕ್ಷಣಿಕ ತರಗತಿಗೆ ಹಾಜರಾಗಲು ಅನುಕೂಲವಾಗುವಂತೆ KSRTC ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ಜೂನ್ 15 ರವರೆಗೂ ವಿಸ್ತರಿಸಿ ಕೆಎಸ್ಆರ್ ಟಿಸಿ ಬುಧವಾರ ಆದೇಶ ಹೊರಡಿಸಿದೆ. ಇದು ಶಾಲಾ ಮತ್ತು ಕಾಲೇಜುಗಳಿಗೆ ಅನ್ವಯವಾಗುತ್ತದೆ.

KSRTC Student Bus Pass timing Extended Till June 15, after Online Application For Bus Pass Will Start

ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಈ ಹಿಂದಿನ ವರ್ಷದ ಪಾಸ್ ಅಥವಾ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್ಸುಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ ಎಂದು ನಿಗಮ ಸುತ್ತೋಲೆಯಲ್ಲಿ ತಿಳಿಸಿದೆ.

ಇನ್ನೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಪ್ರತಿ 2023-24 ನೇ ಸಾಲಿನ ವಿದ್ಯಾರ್ಥಿ ಉಚಿತ ಅಥವಾ ರಿಯಾಯಿತಿ ಬಸ್ಸುಗಳನ್ನು ಇಡಿಸಿಎಸ್ ಎಲಾಖೆಯ ಸೇವಾಸಿಂಧು ತಂತ್ರಜ್ಞಾನದ ಮುಖಾಂತರ ಸಂಪೂರ್ಣ ಯಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮ ವಹಿಸಿದೆ. ಈ ಸಂಬಂಧ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

KSRTC Student Bus Pass timing Extended Till June 15, after Online Application For Bus Pass Will Start

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಬಸ್‌ಪಾಸ್‌ಗಳಿಗಾಗಿ ಅರ್ಜಿ ಸಲ್ಲಿಸಲು ಹಾಗೂ ಪಾಸು ಪಡೆಯಲು ಕಾಲಾವಕಾಶ ನೀಡಬೇಕಿದೆ. ಸದ್ಯ ಅಲ್ಲಿಯವರೆಗೆ ಜೂನ್ 1ರಿಂದ ಆರಂಭವಾದ ತರಗತಿಗಳಿಗೆ ಮಕ್ಕಳು ಹಾಜರಾಗಲು ತೊಂದರೆಯಾಗದಂತೆ ಕ್ರಮ ವಹಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುತ್ತೋಲೆ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+