KSRTC: ಚಾಲಕ ಕಂ ನಿರ್ವಾಹಕ ನೇಮಕಾತಿ, ಹೊಸ ಬಸ್ ಖರೀದಿ ಬಳಿಕ ಹೆಚ್ಚಿನ ಸೌಲಭ್ಯ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯಾಪ್ತಿಯಲ್ಲಿ ಹೊಸ ಹೊಸ ಬಸ್‌ಗಳು ಖರೀದಿ ಹಿನ್ನೆಲೆಯಲ್ಲಿ ಕೆಲವು ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಆಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ವಿಚಾರ ಇತ್ತೀಚೆಗೆ ಸದನದಲ್ಲಿ ಮಾರ್ದನಿಸಿತು.
ಈ ವೇಳೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮಾತನಾಡಿ ಸೂಕ್ತ ಭರವಸೆ ನೀಡಿದರು. ಕೆಎಸ್‌ಆರ್‌ಟಿಸಿಗೆ ಎರಡು ಸಾವಿರ ಚಾಲಕ ಕಂ ನಿರ್ವಾಹಕರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಲ್ಲದೇ ಹೊಸ ಬಸ್ ಖರೀದಿಗೂ ಚಿಂತನೆ ಇದೆ. ಇದೆಲ್ಲ ಒಂದೊಂದಾಗೆ ಆಗುತ್ತಿದ್ದಂತೆ ಕ್ರಮೇಣ ಸಾರಿಗೆ ಸೌಲಭ್ಯ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪುತ್ತೂರು ವಿಭಾಗದಲ್ಲಿ ನಿಗಮದಲ್ಲಿ ಚಾಲಕ, ನಿರ್ವಾಹಕರ ಕೊರತೆ ಕಂಡು ಬಂದಿದೆ. ಬಸ್ ಗಳು ಒಡಿಸಲು ಸಿಬ್ಬಂದಿ ಇಲ್ಲದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ ಆಗಿದೆ. ಈ ಕಾರಣದಿಂದ ತ್ವರಿತವಾಗಿ ತೊಂದರೆ ಬಗೆಹರಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ಕೇಳಿಕೊಂಡಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ನಿಗಮದಲ್ಲಿ ನೇರ ನೇಮಕಾತಿ ನಡೆಯುತ್ತಿದೆ. ಇದರೊಂದಿಗೆ ಹೊಸ ಮಾದರಿಯ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಇವೆಲ್ಲ ಆಗುತ್ತಿದ್ದಂತೆ ಕ್ರಮೇಣ ಪುತ್ತೂರು ನಿಗಮದ ಸಮಸ್ಯೆ ತಿಳಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನೆರೆಪೀಡಿದ ಪ್ರದೇಶವೆಂದು ಪರಿಗಣಿಸಲು ಒತ್ತಯ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪ್ರಸಕ್ತ ಸಾಲಿನಲ್ಲಿ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಾಕಷ್ಟು ಹಾನಿ ಆಗಿದೆ. ಹೀಗಾಗಿ ನೆರೆಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಅನುದಾನ ನೀಡುವಂತೆ ಅವರು ಮನವಿ ಮಾಡಿದರು. ಇದಕ್ಕೆ ಸಚಿವ ಕೃಷ್ಣ ಬೈರೆಗೌಡ ಅವರು ಉತ್ತರಿಸಿ, ಸರ್ಕಾರದ ನಿಯಮಗಳಡಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಶಿರಾಡಿ ಘಾಟಿನಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ಮಂಗಳೂರಿನಿಂದ ಅರ್ಧದಷ್ಟು ಪ್ರಿಮಿಯಂ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಸಾಮಾನ್ಯ ಸಾರಿಗೆ ಬಸ್‌ಗಳು ಮಂಗಳೂರು ಹಾಗೂ ಪುತ್ತೂರು ವಿಭಾಗದಿಂದ ಸೇವೆಯಲ್ಲಿ ನಿರತವಾಗಿದ್ದವು.
ಸದ್ಯ ಮಳೆ ಕಡಿಮೆ ಆಗಿದ್ದು, ಮಂಗಳೂರು ಮತ್ತು ಪುತ್ತೂರಿನಿಂದ ಬೆಂಗಳೂರಿನ ಮಾರ್ಗ ಸರಾಗವಾಗುವ ನಿರೀಕ್ಷೆಯಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಇದ್ದಾರೆ. ಈ ಮಾರ್ಗದಲ್ಲಿ ಮಾತ್ರವಲ್ಲದೇ ಆಗುಂಬೆ, ಕೊಡಗು, ಮಡಿಕೇರಿ ಭಾಗದಲ್ಲಿ ಸಹ ಪ್ರತಿವರ್ಷ ಮಳೆ ಆದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಿರುತ್ತದೆ.












Click it and Unblock the Notifications