KSRTC: ಬೆಂಗಳೂರು-ಜೋಗಕ್ಕೆ ಟೂರ್ ಪ್ಯಾಕೇಜ್ ಘೋಷಣೆ, ಕಣ್ಣೂರಿಗೂ ಹೊಸದಾಗಿ ಸೇವೆ ಶುರು, ವೇಳಾಪಟ್ಟಿ ಇಲ್ಲಿದೆ

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಸುಂದರ ತಾಣಕ್ಕೆ ಬೆಂಗಳೂರಿನಿಂದ ತೆರಳುವವರಿಗೆ KSRTC ಗುಡ್‌ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ಜೊತೆಗೆ ಬೆಂಗಳೂರಿನಿಂದ ಕಣ್ಣೂರಿಗೆ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಪರಿಚಯಿಸಿದೆ. ಈ ಎರಡು ಮಾರ್ಗದ ಸಮಯ, ವೇಳಾಪಟ್ಟಿ, ಟಿಕೆಟ್ ದರ, ನಿಲುಗಡೆ ಮಾಹಿತಿ ಇಲ್ಲಿದೆ.

ಇದೇ ಆಗಸ್ಟ್ 8ರಿಂದ ಶಿವಮೊಗ್ಗ, ಸಾಗರ ಮಾರ್ಗವಾಗಿ (840 ಕಿಲೋ ಮೀಟರ್) 'ಬೆಂಗಳೂರು-ಜೋಗ ಜಲಪಾತ' ನಾನ್ ಎಸಿ ಸ್ಲೀಪರ್ ಬಸ್ ಸೇವೆ ನೀಡಲಾಗಿದೆ. ವಾರಾಂತ್ಯದ ದಿನಗಳ (ಶುಕ್ರವಾರ ಮತ್ತು ಶನಿವಾರ) ವಿಶೇಷ ಟೂರ್ ಪ್ಯಾಕೇಜ್‌ ಆಗಿದೆ. ಇದರಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಮತ್ತು ರಾತ್ರಿ ಊಟ ಸಹಿತ ಸೇವೆ ನೀಡಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

KSRTC

ಬೆಂಗಳೂರು-ಜೋಗ ಪ್ಯಾಕೇಜ್ ವೇಳಾಪಟ್ಟಿ

ರಾಜಧಾನಿ ಬೆಂಗಳೂರಿನಿಂದ ರಾತ್ರಿ 22:30ಕ್ಕೆ ಪ್ರಯಾಣ ಆರಂಭಿಸಿ ಬೆಳಗ್ಗೆ 05;30ಕ್ಕೆ ಸಾಗರ ತಲುಪುತ್ತದೆ. ಅಲ್ಲಿನ ಹೋಟೆಲ್‌ನಲ್ಲಿ ಫ್ರೆಶ್‌ ಅಪ್ ಗೆ ( ಬೆಳಗ್ಗೆ 05;30-7) ವ್ಯವಸ್ಥೆ ಇರಲಿದೆ. ಬಳಿಕ ಉಪಹಾರ ಮುಗಿಸಿ ಸಾಗರದಿಂದ-ವರದಹಳ್ಳಿ (07:15-07;30 ಗಂಟೆ), ವರದಹಳ್ಳಿಯಿಂದ ವರದಮೂಲ (08;30-09 ಗಂಟೆ), ವರದಮೂಲದಿಂದ ಇಕ್ಕೇರಿ (09;15-09;30ಗಂಟೆ), ಇಕ್ಕೇರಿಯಿಂದ ಕೆಳದಿ (10;30-11;00 ಗಂಟೆ), ಕೆಳದಿಯಿಂದ ಸಾಗರ (12;00-12;30 ಗಂಟೆ) ನಂತರ ಮಧ್ಯಾಹ್ನದ ಊಟ ಸಮಯ (12;45-13;15ಗಂಟೆ), ಬಳಿಕ ಸಾಗರದಿಂದ ಜೋಗ (13;30-14;15ಗಂಟೆ) ಪ್ರಯಾಣ ಮುಂದುವಿರಯಲಿದೆ.

ಬಳಿಕ ಜೋಗದಿಂದ ಸಾಗರಕ್ಕೆ (18:15-19:00ಗಂಟೆ) ಹಿಂತಿರುಗಿ ಶಾಪಿಂಗ್ ಗೆ (19;00-20;00 ಗಂಟೆ) ಅವಕಾಶ ನೀಡಲಾಗುತ್ತದೆ. ಬಳಿಕ ರಾತ್ರಿ ಊಟ (20:30-20:45) ಮುಗಿಸಿಕೊಂಡು ಅಲ್ಲಿಂದ ಮರಳಿ ಬೆಂಗಳೂರಿಗೆ (22;00-05;00 ಗಂಟೆಗೆ) ಹೊರಡುತ್ತದೆ.

ಟೂಟ್ ಪ್ಯಾಕೇಜ್: ಟಿಕೆಟ್ ದರ ವಿವರ

ವಯಸ್ಕರಿಗೆ ತಲಾ 3,300 ರೂಪಾಯಿ ಮತ್ತು ಮಕ್ಕಳಿಗೆ (6 ರಿಂದ 12 ವರ್ಷ) ತಲಾ ಒಬ್ಬರಿಗೆ 3,000 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. (ಇದರಲ್ಲಿ ಜಿಎಸ್‌ಟಿ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಮತ್ತು ರಾತ್ರಿ ಊಟ, ಗೈಡ್ ಶುಲ್ಕ, ಜೋಗ್ ಫಾಲ್ಸ್ ಪ್ರವೇಶ ಶುಲ್ಕ, ಟೋಲ್ ಫೀ ಹಾಗೂ ಮುಂಗಡ ಶುಲ್ಕ ಎಲ್ಲವು ಒಳಗೊಂಡಿರುತ್ತದೆ)

ಬೆಂಗಳೂರು-ಕಣ್ಣೂರು ನಾನ್ ಎಸಿ ಸ್ಲೀಪರ್ ಬಸ್ ಸೇವೆ

KSRTC ವತಿಯಿಂದ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಪರಿಚಯಿಸಲಾಗಿದೆ. ಈ ಸೇವೆ ಆಗಸ್ಟ್ 7ರಿಂದ ಲಭ್ಯವಾಗಲಿದೆ. ಈ ಬಸ್ ಬೆಂಗಳೂರಿನ ಮಡಿವಾಳದಿಂದ ಹೊರಟು ಶಾಂತಿನಗರ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟ್ ಲೈಟ್ ಬಸ್ ನಿಲ್ದಾಣ ಹಾಗೂ ಕೆಂಗೇರಿ ಬಸ್ ನಿಲ್ದಾಣದ ಮೂಲಕ ಮೈಸೂರು, ವಿರಾಜಪೇಟೆ, ಇರಿಟ್ಟಿ, ತಲಸ್ಸೇರಿ ಮಾರ್ಗವಾಗಿ ಸಾಗಿ ಕಣ್ಣೂರು ತಲುಪಲಿದೆ.

ಟಿಕೆಟ್ ದರ, ಟಿಕೆಟ್ ಬುಕಿಂಗ್ ಲಿಂಕ್

ಬೆಂಗಳೂರಿನಿಂದ ಕಣ್ಣೂರಿಗೆ ಪ್ರತಿ ಪ್ರಯಾಣಿಕರಿಗೆ 850 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಜೋಗಕ್ಕೆ ತೆರಳುವ ಹಾಗೂ ಕಣ್ಣೂರು ಪ್ರಯಾಣಿಕರು ಟಿಕೆಟ್ ಬುಕಿಂಗ್‌ಗೆ ಅಧಿಕೃತ ವೆಬ್‌ಸೈಟ್ www.ksrtc.in ಮತ್ತ www.ksrtc.karnataka.gov.in ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-26252625 ಮೊಬೈಲ್ ಸಂಖ್ಯೆ 7760990100 /7760990560/7760990287 ಗೆ ಸಂಪರ್ಕಿಸುವಂತೆ KSRTC ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+