ಪೀಣ್ಯದ ಬಸವೇಶ್ವರ ನಿಲ್ದಾಣ ಮೆಜೆಸ್ಟಿಕ್‌ಗೆ ಸ್ಥಳಾಂತರ

ಬೆಂಗಳೂರು, ಮಾ.2 : ಉತ್ತರ ಕರ್ನಾಟಕ ಭಾಗದ ಬಸ್ಸುಗಳನ್ನು ಹತ್ತಲು ಜನರು ಇನ್ನು ಮುಂದೆ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಹೋಗಬೇಕಾಗಿಲ್ಲ. ಹೌದು ಪೀಣ್ಯದ ಬಸ್ ನಿಲ್ದಾಣವನ್ನು ಮಾರ್ಚ್‌ 1ರಿಂದಲೇ ಜಾರಿಗೆ ಬರುವಂತೆ ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲಾಗಿದೆ.

ಪೀಣ್ಯದಿಂದ ಸಂಚಾರ ನಡೆಸುತ್ತಿದ್ದ 298 ವೇಗದೂತ ಬಸ್ಸುಗಳು ಭಾನುವಾರದಿಂದಲೇ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಂಡಿವೆ. ಪೀಣ್ಯ ನಿಲ್ದಾಣದಲ್ಲಿನ ನಿಗದಿತ ಸಮಯಕ್ಕಿಂತ 30 ನಿಮಿಷ ಮೊದಲು ಮೆಜೆಸ್ಟಿಕ್‌ನಿಂದ ಬಸ್ಸುಗಳು ಸಂಚಾರ ಆರಂಭಿಸಲಿವೆ. [ಪೀಣ್ಯ ನಿಲ್ದಾಣ ಸ್ಥಳಾಂತರ : ಸಚಿವರು ಹೇಳುವುದೇನು?]

ಬಸವೇಶ್ವರ ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ, ಮೆಜೆಸ್ಟಿಕ್‌ಗೆ ನಿಲ್ದಾಣ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಕೆಲವು ದಿನಗಳಿಂದ ನಡೆದಿತ್ತು. ಸದ್ಯ, ಮಾರ್ಚ್ 1ರಿಂದಲೇ ಅನ್ವಯವಾಗುವಂತೆ ನಿಲ್ದಾಣವನ್ನು ಪುನಃ ಸ್ಥಳಾಂತರ ಮಾಡಲಾಗಿದೆ. [ಸಚಿವರೇ ಜನರ ದುಡ್ಡಂದ್ರೆ ಜೆರಾಕ್ಸ್ ಪೇಪರಾ?]

ಮೆಜೆಸ್ಟಿಕ್‌ನಿಂದ ಹೊರಡುವ ಎಲ್ಲಾ ವೇಗದೂತ ಬಸ್ಸುಗಳು ಪೀಣ್ಯ ನಿಲ್ದಾಣಕ್ಕೆ ಹೋಗಿ ನಂತರ ಮುಂದೆ ಸಾಗಲಿವೆ. ಕೆಎಸ್ಆರ್‌ಟಿಸಿ ಮೆಜೆಸ್ಟಿಕ್-ಪೀಣ್ಯ ನಡುವೆ ಓಡಿಸುತ್ತಿದ್ದ ಸಂಪರ್ಕ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿದೆ. ಮೆಜೆಸ್ಟಿಕ್-ಪೀಣ್ಯ ನಡುವಿನ ಪ್ರಮುಖ ಸ್ಥಳಗಳಲ್ಲಿ ಬಸ್ ಪಿಕಪ್ ಪಾಯಿಂಟ್‌ಗಳಿವೆ. 2014ರ ಸೆಪ್ಟೆಂಬರ್‌ನಲ್ಲಿ ಪೀಣ್ಯ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿತ್ತು.

ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣ ಸ್ಥಳಾಂತರ

ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣ ಸ್ಥಳಾಂತರ

ಮಾರ್ಚ್ 1ರಿಂದಲೇ ಅನ್ವಯವಾಗುವಂತೆ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲಾಗಿದೆ. ಭಾನುವಾರದಿಂದಲೇ ಪೀಣ್ಯದಿಂದ ಸಂಚಾರ ನಡೆಸುತ್ತಿದ್ದ 298 ವೇಗದೂತ ಬಸ್ಸುಗಳು ಮೆಜೆಸ್ಟಿಕ್‌ ನಿಂದ ಸಂಚಾರ ನಡೆಸುತ್ತಿವೆ.

ಅರ್ಧತಾಸು ಮೊದಲು ಪ್ರಯಾಣ

ಅರ್ಧತಾಸು ಮೊದಲು ಪ್ರಯಾಣ

ಪೀಣ್ಯ ನಿಲ್ದಾಣದಿಂದ ಬಸ್ಸುಗಳು ಹೊರಡುತ್ತಿದ್ದ ಸಮಯಕ್ಕಿಂತ ಅರ್ಧತಾಸು ಮೊಲದು ಮೆಜೆಸ್ಟಿಕ್‌ನಿಂದ ಬಸ್ಸುಗಳು ಸಂಚಾರ ಆರಂಭಿಸಲಿದ್ದು, ಪೀಣ್ಯದ ನಿಲ್ದಾಣಕ್ಕೆ ಹೋಗಿ ನಂತರ ಮುಂದೆ ಸಾಗಲಿವೆ. ಮೆಜೆಸ್ಟಿಕ್-ಪೀಣ್ಯ ನಡುವಿನ ಪ್ರಮುಖ ಸ್ಥಳಗಳಲ್ಲಿ ಬಸ್ ಪಿಕಪ್ ಪಾಯಿಂಟ್‌ಗಳಿವೆ.

ನಷ್ಟದ ನೆಪ ಹೇಳಿದ್ದಕ್ಕೆ ಸ್ಥಳಾಂತರ

ನಷ್ಟದ ನೆಪ ಹೇಳಿದ್ದಕ್ಕೆ ಸ್ಥಳಾಂತರ

ವೇಗದೂತ ಬಸ್ಸುಗಳು ಪೀಣ್ಯದಿಂದ ಸಂಚಾರ ನಡೆಸುವುದಿಂದ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಿಗೆ ಮೂರು ತಿಂಗಳಿನಲ್ಲಿ ಸುಮಾರು 11 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಪೀಣ್ಯ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು.

ಯಾವ ಬಸ್ಸುಗಳು ಸ್ಥಳಾಂತರ

ಯಾವ ಬಸ್ಸುಗಳು ಸ್ಥಳಾಂತರ

ಹುಬ್ಬಳ್ಳಿ ವಲಯದ 146, ಹೊಸಪೇಟೆ ವಲಯದ 61, ಬಳ್ಳಾರಿ ವಲಯದ 91 ಬಸ್ಸುಗಳು ಸೇರಿ 298 ಬಸ್ಸುಗಳು ಮೆಜೆಸ್ಟಿಕ್‌ನಿಂದ ಕಾರ್ಯನಿರ್ವಹಿಸುತ್ತಿವೆ. ತುಮಕೂರು ರಸ್ತೆಯಲ್ಲಿ ಸಾಗುವ ಎಲ್ಲಾ ಬಸ್ಸುಗಳು ಮೆಜೆಸ್ಟಿಕ್‌ನಿಂದ ಹೊರಟು ಪೀಣ್ಯ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮುಂದೆ ಸಾಗಲಿವೆ.

ಸಂಪರ್ಕ ಸಾರಿಗೆ ಬಸ್ ರದ್ದು

ಸಂಪರ್ಕ ಸಾರಿಗೆ ಬಸ್ ರದ್ದು

ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ಓಡಿಸುತ್ತಿದ್ದ ಸಂಪರ್ಕ ಸಾರಿಗೆ ಬಸ್ಸುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಮೆಜೆಸ್ಟಿಕ್‌ನಿಂದ ಯಾವುದೇ ಸಂಪರ್ಕ ಸಾರಿಗೆ ಬಸ್ಸುಗಳು ಸದ್ಯ ಸಂಚಾರ ನಡೆಸುತ್ತಿಲ್ಲ.

ಮೊದಲ ದಿನ ಗೊಂದಲವೋ, ಗೊಂದಲ

ಮೊದಲ ದಿನ ಗೊಂದಲವೋ, ಗೊಂದಲ

ಭಾನುವಾರ ನಿಲ್ದಾಣ ಸ್ಥಳಾಂತರಗೊಂಡ ವಿಷಯ ತಿಳಿಯದ ಸಾರ್ವಜನಿಕರು ಪೀಣ್ಯಕ್ಕೆ ಹೋಗಿದ್ದಾರೆ. ಅಲ್ಲಿ ಬಸ್ ಇರದ ಕಾರಣ ಮೆಜೆಸ್ಟಿಕ್‌ಗೆ ವಾಪಸ್ ಬಂದಿದ್ದಾರೆ. ಪೀಣ್ಯಕ್ಕೆ ಹೋದ ಜನರು ಅಲ್ಲೇ ಇದ್ದರೆ ಬಸ್ ಲಭ್ಯವಾಗಲಿದೆ, ವಾಪಸ್ ಮೆಜೆಸ್ಟಿಕ್‌ಗೆ ಬರುವುದು ಬೇಡ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐದು ತಿಂಗಳಿಗೆ ನಿಲ್ದಾಣ ಸ್ಥಳಾಂತರ

ಐದು ತಿಂಗಳಿಗೆ ನಿಲ್ದಾಣ ಸ್ಥಳಾಂತರ

ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸುಮಾರು 40 ಕೋಟಿ ರೂ.ವೆಚ್ಚದಲ್ಲಿ ಪೀಣ್ಯದಲ್ಲಿ ಬಸವೇಶ್ವರ ಬಸ್‌ ನಿಲ್ದಾಣ ನಿರ್ಮಿಸಲಾಗಿತ್ತು. ಸೆಪ್ಟೆಂಬರ್‌ 10 ರಿಂದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯರಂಭ ಮಾಡಿತ್ತು. ಫೆ.28ಕ್ಕೆ ನಿಲ್ದಾಣ ಪುನಃ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+