ಪ್ರಯಾಣಿಕರಿಗೆ ಸಿಹಿ ಸುದ್ದಿ: ದೀಪಾವಳಿಗಾಗಿ KSRTC ಯಿಂದ ಬಂಪರ್ ಆಫರ್
ಬೆಂಗಳೂರು, ಅಕ್ಟೋಬರ್ 18: ದೀಪಾವಳಿಗೆಂದು ತಮ್ಮ ತಮ್ಮ ಊರಿಗೆ ಹೊರಟಿರುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭರ್ಜರಿ ಆಫರ್ ನೀಡಿದೆ.
ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ತೆರಳುವವರಿಗೆ ಹೆಚ್ಚುವರಿ ಬಸ್ ಸೌಲಭ್ಯ ನೀದಿದ್ದು, ಬೆಳಕಿನ ಹಬ್ಬವನ್ನು ಕುಟುಂಬದ ಜನರೊಮದಿಗೆ ಆಚರಿಸುವವರಿಗೆ ಕೆಎಸ್ ಆರ್ ಟಿಸಿ ಸಿಹಿ ಸುದ್ದಿ ನೀಡಿದೆ.
ಅಕ್ಟೋಬರ್ 26, 27, 28 ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ 1600 ಬಸ್ಸುಗಳು ಸಂಚರಿಸಲಿವೆ. ಪ್ರಯಾಣಿಕರು ಬಸ್ಸಿನ ಕೊರತೆ ಎದುರಿಸಬಾರದು ಎಂಬ ಕಾರಣಕ್ಕೆ ಕೆಎಸ್ ಆರ್ ಟಿಸಿ ಮುಂಚಿತವಾಗಿಯೇ ಹೆಚ್ಚುವರಿ ಬಸ್ ನೀಡಿದ್ದು, ಕೈಗೆಟುಕುವ ದರದಲ್ಲಿ ಟಿಕೆಟ್ ದರವನ್ನು ನಿಗದಿಪಡಿಸಿದೆ. ಜೊತೆಗೆ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವವರಿಗೆ ರಿಯಾಯಿತಿಯನ್ನೂ ನೀಡಿದೆ.

ಹಬ್ಬದ ಸಮಯದಲ್ಲಿ ಬಸ್ಸುಗಳಿಗೆ ಹೆಚ್ಚುವ ಬೇದಿಕೆಯಿಂದಾಗಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಏರಿಸುವ ಖಾಸಗೀ ಬಸ್ಸುಗಳ ಉಪಟಳದಿಂದ ಪ್ರಯಾಣಿಕರನ್ನು ಪಾರುಮಾಡುವ ಸಲುವಾಗಿ ಕೆಎಸ್ ಆರ್ ಟಸಿ ಈ ನಿರ್ಧಾರ ತೆಗೆದುಕೊಂಡಿದೆ.












Click it and Unblock the Notifications