ಸದನದಲ್ಲಿ ಗದ್ದಲ ಎಬ್ಬಿಸಿದ KSRTC ಬಸ್ ಚಾಲಕನ ಆತ್ಮಹತ್ಯೆ ಯತ್ನ ಕೇಸ್
ಬೆಂಗಳೂರು, ಜಲೈ 06: ಸೋಮವಾರದಿಂದ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನವು ನಾಲ್ಕೇ ದಿನದಲ್ಲಿ ಪ್ರತಿಭಟನೆ ಮತ್ತಿತರ ಕೆಲವು ವಿಚಾರಗಳಿಗಾಗಿ ಗದ್ದಲಗಳಿಗೆ ಸಾಕ್ಷಿಯಾಗಿದೆ. ಇದೀಗ ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕರು ಸೇರಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಆತ್ಮಹತ್ಯೆ ವಿಚಾರವಾಗಿ ಸಚಿವರ ರಾಜೀನಾಮೆ ಒಕ್ಕೋರಲಿನಿಂದ ಆಗ್ರಹಿಸಿವೆ.
ಗುರುವಾರ ಎಂದಿನಂತೆ ಸದನ ಆರಂಭವಾಯಿತು. ಮಧ್ಯಾಹ್ನದ ಹೊತ್ತಿಗೆ ಮಂಡ್ಯದ ನಾಗಮಂಗಲದಲ್ಲಿ KSRTC ಬಸ್ ಚಾಲಕರೊಬ್ಬರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಮುಂದಾಗಿದ್ದರು. ಇದಕ್ಕೆ ಸ್ವಕ್ಷೇತ್ರದ ಕೃಷಿ ಸಚಿವ ಎನ್. ಚಲುವನಾರಾಯಣ ಸ್ವಾಮಿ ಹೊಣೆಯನ್ನಾಗಿ ಜೆಡಿಎಸ್ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದರು.

ಈ ಹಿಂದೆ ರಾಜ್ಯ ಸರ್ಕಾರದದಲ್ಲಿ ವರ್ಗಾವಣೆ ವಿಚಾರದಲ್ಲಿ ಭಾರಿ ಹಣ ಕೊಡಬೇಕಿದೆ ಎಂದು ವೈಎಸ್‌ಟಿ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಇಂದು ಶಕ್ತಿ ಯೋಜನೆ ಅವಾಸ್ತವಿಕವಾದದ್ದು, ಇದರಿಂದ ksrtc ಬಸ್ ಚಾಲಕ ಮತ್ತು ನಿರ್ವಾಹಕರು ಬಸವಳಿದಿದ್ದಾರೆ. ಹೀಗಾಗಿ ಇಂತಹ ಆತ್ಮಹತ್ಯೆ ಘಟನೆ ನಡೆದಿದೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಮಾಜಿ ಸಿಎಂಗಳ ಪ್ರಸ್ತಾಪದಿಂದ ಕಲಾಪದಲ್ಲಿ ಗದ್ದಲ
KSRTC ಬಸ್ ಚಾಲಕ ಜಗದೀಶ್ ಎಂಬುವವರನ್ನು ಸಚಿವ ಚಲುವನಾರಾಯಣಸ್ವಾಮಿ ಸೂಚನೆ ಮೇರೆಗೆ ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶಿಸಿದ್ದರು. ಇದರಿಂದ ಬೇಸತ್ತು ಆದೇಶ ಮರಳಿ ಪಡೆಯದೇ ಚಾಲಕ ನಾಗಮಂಗಲ ಡಿಪೋದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಚಾರವನ್ನು ಎಚ್‌ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಇಬ್ಬರು ಕಲಾಪದಲ್ಲಿ ಪ್ರಸ್ತಾಪಿಸಿದ್ದು ಭಾರೀ ಗದ್ದಲಕ್ಕೆ ಎಡೆ ಮಾಡಿಕೊಟ್ಟಿತು.
ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ವಿಚಾರ ಪ್ರಕರಣವನ್ನು ನಿಯಮ 60ರ ಅಡಿ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಸಭಾಧ್ಯಕ್ಷರಿಗೆ ಮನವಿ ಪತ್ರ ನೀಡಲಾಗಿತ್ತು. ಪ್ರಕರಣದ ಹಿಂದೆ ಚಲುವನಾರಾಯನಸ್ವಾಮಿ ಅವರ ಕೈವಾಡ ಇದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಕಲಾಪದಲ್ಲಿ ಈಗಲೇ ಪ್ರಕರಣದ ಚರ್ಚೆ ಅವಕಾಶ ಮಾಡಿ ಕೊಡಿ. ಮತ್ಯಾವಾಗ ಚರ್ಚೆಗೆ ಅವಕಾಶ ನೀಡುತ್ತೀರಿ, ವ್ಯಕ್ತಿ ಸತ್ತಮೆಲೆ ಅವಕಾಶ ಮಾಡುತ್ತಿಕೊತ್ತೀರಾ ಎಂದು ಕುಮಾರಸ್ವಾಮಿ ಗರಂ ಆದರು. ಪ್ರಕರಣ ಬಗ್ಗೆ ಕೇಳಿದಾಗಿ FIR ಆಗಿಲ್ಲ ಎಂದು ಹೇಳಿದರು.
ಪ್ರಕರಣ ಬಗ್ಗೆ ವಿವರಿಸಿದ ಎಚ್‌ಡಿಕೆ: ಚಾರ್ಜ್ ಗರಂ
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಬಸ್ ಚಾಲಕ ಜಗದೀಶ್ ವರ್ಗಾವಣೆ ವಿಚಾರವಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆಗ ಅಧಿಕಾರಿಗಳು ಸಾರಿಗೆ ಸಚಿವರ ಸೂಚನೆ ಮತ್ತು ನಾಗಮಂಗಲದ ಶಾಸಕ ಸೂಚನೆ ಮೇರೆಗೆ ವರ್ಗಾವಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಮಹಿಳಾ ಸಿಬ್ಬಂದಿ ಜತೆಗೆ ನೀವು ಅಸಭ್ಯವರ್ತನೆ ಮಾಡಿದ್ದೀರಿ ಎಂದು ದೂರು ಬಂದಿದ್ದು, ಆ ಹಿನ್ನೆಲೆ ವರ್ಗ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ವಿವರಿಸಿದರು.
ಕಲಾಪದಲ್ಲಿ ಇದೇ ವಿಚಾರವಾಗಿ ಮಳ್ಳವಳ್ಳಿ ಕ್ಷೇತ್ರದ ಶಾಸಕ ಪಿಎಂ ನರೇಂದ್ರಸ್ವಾಮಿ ಪಿಐ ನಂದೀಶ್ ಅವರು ಪ್ರಕರಣ ಪಸ್ತಾಪಿಸಿದಾ ನೀವು ಮಾತನಾಡಬೇಕಿತ್ತು ಎಂದಿದ್ದಕ್ಕೆ ಕುಮಾರಸ್ವಾಮಿ ಮತ್ತಷ್ಟು ಗರಂ ಆದರು. ಹೀಗೆ ಕಲಾಪದಲ್ಲಿ ಕೆಲವು ಪ್ರಕರಣಗಳ ಹೆಸರು ಹೇಳುತ್ತಲೇ ಸಭಾಧ್ಯಕ್ಷ ಯುಟಿ ಖಾದರ್, ಸಚಿವ ಕೆಜೆ ಜಾರ್ಜ್ ಸಹ ಕೋಪಗೊಂಡರು.
ನೀವು ಯಾವ ಪ್ರಕರಣದಲ್ಲಾದರೂ ಸಚಿವರು, ನಾಯಕರು ಹೆಸರು ಉಲ್ಳೇಖಿಸಬಹುದೇ, ಆರೋಪಿಸಬಹುದೇ. ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದೀರಿ. ನೆನ್ನೆ ಪೆನ್ ಡ್ರೈವ್ ಇದೆ ಎಂದು ಹೇಳುತ್ತೀರಿ. ಅವೆಲ್ಲಗಳನ್ನು ದಾಖಲಿಸಿ ಎಂದು ಜಾರ್ಜ್ ಹೇಳಿದರು.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications