KSRTC Tour Package: ಬೆಂಗಳೂರಿನಿಂದ ಇಲ್ಲಿಗೆ ಪ್ರವಾಸ ಪ್ಯಾಕೇಜ್ ಘೋಷಣೆ: ಟಿಕೆಟ್ ದರ-ವೇಳಾಪಟ್ಟಿ
ಬೆಂಗಳೂರು, ಮೇ 29: ರಾಜ್ಯಾದ್ಯಂತ ತನ್ನ ಉಪಕ್ರ, ಹೊಸ ಬಸ್, ಆರಾಮದಾಯಕ ಸೇವೆಗಳಿಂದಲೇ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ರವಾಸದ ಬಸ್ ಬೆಂಗಳೂರಿನಿಂದ ಹೊರಡಲಿದೆ. ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಹೊರತುಪಡಿಸಿ ನಿಗದಿತ ಶುಲ್ಕದಲ್ಲಿ ಪ್ರವಾಸಕ್ಕೆ ಕರೆದೊಯ್ಯಲಿದೆ. ಯಾವೆಲ್ಲ ಪ್ರವಾಸಿ ಸ್ಥಳಗಳಿಗೆ ನೀವು ಈ ವಿಶೇಷ ಬಸ್‌ಗಳಲ್ಲಿ ತೆರಳಬಹುದು ಎಂಬ ಮಾಹಿತಿ ಇಲ್ಲಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಕೇಂದ್ರ ವಿಭಾಗವು, ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ದಿನಾಂಕ: 31-05-2025 ರಿಂದ ಬೇರೆ ರೀತಿಯಲ್ಲಿ ಹೇಳದ ಹೊರತು, 'ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ' ಮಾರ್ಗದಲ್ಲಿ ಕರ್ನಾಟಕ ಸಾರಿಗೆಯನ್ನು ಪ್ರಾರಂಭಿಸುತ್ತಿದೆ. ಆಸಕ್ತ ಪ್ರಯಾಣಿಕರು ಈ ಟೂರ್ ಪ್ಯಾಕೇಜ್ ಸೌಲಭ್ಯ ಪಡೆಯಬಹುದಾಗಿದೆ.

'ಬೆಂಗಳೂರು-ಶ್ರೀ ಅಗಾಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ' ಪ್ಯಾಕೇಜ್ ಟೂರ್ ಬಸ್ ಒಟ್ಟು 350 ಕಿಲೋ ಮೀಟರ್ ಸಂಚರಿಸಲಿದೆ. ಹಾಗಾದರೆ ಮುಂಗಡ ಬುಕ್ಕಿಂಗ್‌ಗೆ ಹಣ ಎಷ್ಟು? ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ನಿರ್ಗಮನ ಸಮಯ: ಭೇಟಿ ನೀಡುವ ಸ್ಥಳ ಪಟ್ಟಿ
* ಬೆಂಗಳೂರಿನಿಂದ - ನಿಮಿಷಾಂಬ ದೇವಸ್ಥಾನಕ್ಕೆ ಮೈಸೂರು ಎಕ್ಸ್‌ಪ್ರೆಸ್ ಹೈವೆ ಮೂಲಕ ಬಸ್ ಸಾಗಲಿದೆ. ಬೆಳಗ್ಗೆ
06.30ಗಂಟೆಗೆ ಬೆಂಗಳೂರು ಬಿಟ್ಟು 08.30ಕ್ಕೆ ದೇವಸ್ಥಾನ ತಲುಪಲಿದೆ.
* ನಿಮಿಷಾಂಬ ದೇವಸ್ಥಾನದ ಭೇಟಿ / ಊಟದ ಸಮಯ : 08.30ಗಂಟೆಯಿಂದ 09.30ರವರೆಗೆ.
* ಶ್ರೀ ರಂಗನಾಥ (ಆದಿ ರಂಗ) ದೇವಸ್ಥಾನ ಶ್ರೀರಂಗಪಟ್ಟಣಕ್ಕೆ ಭೇಟಿ: 09.30 ರಿಂದ 11.30ಗಂಟೆವರೆಗೆ.
* ಭೂವರಾಹ ಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ ಭೇಟಿ ಜೊತೆಗೆ ಊಟದ ಸಮಯ: 11.30 ಗಂಟೆಯಿಂದ ಮಧ್ಯಾಹ್ನ 14.30 ರವರೆಗೆ.
* ನಂತರ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಭೇಟಿ, ತಂಗಿ ಕೊಳ, ಅಕ್ಕ ಕೊಳ, ರಾಯ ಗೋಪುರ ಮಾಡುವುದು: ಸಮಯ ಸಂಜೆ 14.30 ರಿಂದ 17.00 ಗಂಟೆವರೆಗೆ.
ಪ್ಯಾಕೇಜ್ ಪ್ರವಾಸ ಸಾರಿಗೆ ಪ್ರಯಾಣ ಶುಲ್ಕ
* ವಯಸ್ಕರಿಗೆ : ಮುಂಗಡ ಬುಕಿಂಗ್ ಸೇರಿ 670 ರೂಪಾಯಿ.
* ಮಕ್ಕಳು (6 ರಿಂದ 12 ವರ್ಷಗಳು): ಮುಂಗಡ ಬುಕಿಂಗ್ ಸೇರಿ 500 ರೂಪಾಯಿ.
ಈ ವೀಶೇಷ ಟೂರ್ ಪ್ಯಾಕೇಜ್ ನಡಿ ನೀವು ಏಕದಿನದ ಪ್ರವಾಸ ಮಾಡಲು ಬಯಸಿದರೆ ಮುಂಗಡವಾಗಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಬಳಸಬೇಕಾದ ವೆಬ್‌ಸೈಟ್ https://www.ksrtc.in/ ಹಾಗೂ http://www.ksrtc.karnataka.gov.in/ ಗೆ ಭೇಟಿ ನೀಡಬೇಕು. ಇಲ್ಲವೇ ದೂರವಾಣಿ ಸಂಖ್ಯೆ: 080-26252625 /7760990100 /7760990560/ 7760990287ಗೆ ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ...












Click it and Unblock the Notifications