ಗಿರಿನಗರ ಬಡಾವಣೆ ನಿರ್ಮಾತೃ ಕೃಷ್ಣಭಟ್ ಇನ್ನಿಲ್ಲ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದೆನಿಸಿರುವ ಗಿರಿನಗರ ಬಡಾವಣೆಯ ವಿನ್ಯಾಸಗಾರ, ನಿರ್ಮಾತೃ ಬಿ ಕೃಷ್ಣಭಟ್ ಅವರು ಗುರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು, ಮಾರ್ಚ್ 10: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದೆನಿಸಿರುವ ಗಿರಿನಗರ ಬಡಾವಣೆಯ ವಿನ್ಯಾಸಗಾರ, ನಿರ್ಮಾತೃ ಬಿ ಕೃಷ್ಣಭಟ್ ಅವರು ಗುರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಕೃಷ್ಣಭಟ್ ಅವರು ನಿಧನರಾಗಿದಾರೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.


ಮೃತರ ಅಂತ್ಯಕ್ರಿಯೆಯನ್ನು ದೊಡ್ಡಬಳ್ಳಾಪುರ ಸಮೀಪದ ಕಲ್ಲದೇವನಹಳ್ಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಶುಕ್ರವಾರ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.[2011: ಹೈಕೋರ್ಟಿಗೆ ಗಾಲಿಕುರ್ಚಿ ಮೂಲಕ ಕೃಷ್ಣ ಭಟ್ ಹಾಜರು]

ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬೋಳುಬೈಲಿನವರಾದ ಕೃಷ್ಣಭಟ್ ಅವರು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಸಮಾಜ ಸೇವಕ, ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+