ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾದ ಮೀಸಲು ವಿವಾದ

|
Google Oneindia Kannada News

Recommended Video

ಸಮ್ಮಿಶ್ರ ಸರ್ಕಾರಕ್ಕೆ ಮೀಸಲು ವಿವಾದ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ಯಾ? | Oneindia Kannada

ಬೆಂಗಳೂರು, ನವೆಂಬರ್ 19: ಮೀಸಲು ವಿವಾದ ಇದೀಗ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಸ್‌ಸಿ, ಎಸ್ಟಿ ಹಾಗೂ ಒಬಿಸಿ ಅಭ್ಯರ್ಥಿಗಳು ಮೆರಿಟ್ ಆಧಾರದ ಮೇಲೆ ಸಾಮಾನ್ಯ ವರ್ಗದಲ್ಲಿ ಹುದ್ದೆ ಪಡೆಯುವಂತಿಲ್ಲ ಎಂಬ ಹೊಸ ಮಾನದಂಡ ಮೈತ್ರಿ ಸರ್ಕಾರದಲ್ಲಿ ಗೊಂದಲ ಸೃಷ್ಟಿಸಿದೆ.

ಸಂಪುಟ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಗುವ ನಿರೀಕ್ಷೆ ಇದೆ. ಮೀಸಲು ಅವಕಾಶವಿರುವ ಪರಿಶಿಷ್ಟ ಒಬಿಸಿ ಅಭ್ಯರ್ಥಿಗಳಿಗೆ ಮೆರಿಟ್ ಇದ್ದರೂ ಸಾಮಾನ್ಯ ವರ್ಗದ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಿಲ್ಲ, ಮೀಸಲು ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ. ರಾಜ್ಯ ಸರ್ಕಾರ ಎಸ್‌ಸಿಗೆ ನೀಡಿರುವ ಆದೇಶ ಗೊಂದಲ ಸೃಷ್ಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ನಿರ್ದೇಶನ ನೀಡಲಾಗಿದೆ ಎಂಬುದು ಮುಖ್ಯ ಕಾರ್ಯದರ್ಶಿ ಅವರ ಮಾತು.

ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಸುಪ್ರೀಂ ಐತಿಹಾಸಿಕ ತೀರ್ಪು

ಆದರೆ ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ , ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಸೇರಿ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೋಮವಾರ ಮಧ್ಯಾಹ್ನ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ.

KPSC reservation controversy will be the new headache for CM

ಬಡ್ತಿ ಮೀಸಲಾತಿ ಕಾಯ್ದೆ: ಎಸ್ಸಿ-ಎಸ್ಟಿ ನೌಕಕರ ಅಂತಿಮ ಹೋರಾಟ ಬಡ್ತಿ ಮೀಸಲಾತಿ ಕಾಯ್ದೆ: ಎಸ್ಸಿ-ಎಸ್ಟಿ ನೌಕಕರ ಅಂತಿಮ ಹೋರಾಟ

ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಸಚಿವರು ಒಟ್ಟಾಗಿ ಈ ವಿಚಾರದಲ್ಲಿ ಒತ್ತಾಯ ಮಾಡುವ ಸಾಧ್ಯತೆ ಇದೆ ಈ ಹಿಂದೆ ಬಡ್ತಿ ಮೀಸಲು ವಿಚಾರದಲ್ಲಿ ಪರಿಶಿಷ್ಟ ನೌಕರವರ್ಗದ ಹಿತಾಸಕ್ತಿಗಾಗಿ ಪ್ರಿಯಾಂಕ್ ಖರ್ಗೆ ಸಂಪುಟದಲ್ಲಿ ವಾದಕ್ಕಿಳಿದಿದ್ದರು. ರಾಜಿನಾಮೆ ನೀಡುವುದಾಗಿ ಕೂಡ ಹೇಳಿದ್ದರು.

English summary
KPSC reservation controversy will be the new headache for the karnataka coalition government. This issue will be raised in today cabinet too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X