ಶಾಸಕ ಹರತಾಳು ಹಾಲಪ್ಪ ಪ್ರತಿಭಟನೆಯಿಂದ ಎಚ್ಚೆತ್ತ ಕೆಪಿಎಲ್‌ಸಿ

ಬೆಂಗಳೂರು, ನವೆಂಬರ್ 15: ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ಇಂದು ನಡೆಸಿದ ಪ್ರತಿಭಟನೆಯಿಂದ ಕೂಡಲೇ ಎಚ್ಚೆತ್ತ ಕೆಪಿಎಲ್‌ಸಿ (ಕರ್ನಾಟಕ ಸಾರ್ವಜನಿಕ ಭೂ ನಿಗಮ) ಹಾಲಪ್ಪ ಅವರ ಆಗ್ರಹಕ್ಕೆ ಶೀಘ್ರ ಪ್ರತಿಕ್ರಿಯೆ ನೀಡಿದೆ.

ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಿಗಂದೂರು ಸೇತುವೆ ನಿರ್ಮಾಣದ ಕುರಿತು ಕರ್ನಾಟಕ ವಿದ್ಯುತ್ ನಿರಪೇಕ್ಷಣಾ ಪತ್ರ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ವಿರುದ್ಧ ಪ್ರತಿಭಟನೆ ಮಾಡಿದ್ದರು.

ನಗರದ ಶಕ್ತಿಸೌಧದ ವಿರುದ್ಧ ಹಾಲಪ್ಪ ಮಾಡಿದ ಒಂಟಿ ಪ್ರತಿಭಟನೆಗೆ ಹೆದರಿದ ಕೆಪಿಎಲ್‌ಸಿ ಸಂಜೆ ವೇಳೆಗೆ ಸಿಗಂದೂರು ಸೇತುವೆ ನಿರ್ಮಾಣ ಕುರಿತ ಎನ್‌ಒಸಿ (ನಿರಪೇಕ್ಷಣಾ ಪತ್ರ)ವನ್ನು ನೀಡಿದೆ.

KPLC awaken by Harathalu halappa protest gave NOC to Sigandhur bridge

ಕೆಪಿಎಲ್‌ಸಿ ನೀಡಿರುವ ನಿರಪೇಕ್ಷಣಾ ಪತ್ರವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿರುವ ಶಾಸಕ, ಎನ್‌ಓಸಿ ನೀಡಲು 45 ದಿನಗಳಿಂದ ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳು , KPCL ಕಚೇರಿ ಎದುರು ಧರಣಿ ಕೂತ ವಿಷಯ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ , ಕೆಲವೇ ಗಂಟೆಗಳಲ್ಲಿ N.O.C ನೀಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಚಾಲನೆ ನೀಡಿದ್ದರು. ಈ ಸೇತುವೆ ನಿರ್ಮಾಣಕ್ಕೆ 7 ಸಾವಿರ ಕೋಟಿ ವೆಚ್ಚವಾಗುತ್ತದೆ.ಸೇತುವೆ ಹೇಗಿರುತ್ತದೆ, ಪ್ಲಾನಿಂಗ್ ಏನು: ಅಂಬಾರಗೋಡ್ಲು-ಕಳಸವಳ್ಳಿ ಮಧ್ಯೆ 2.16 ಕಿ,ಮೀ ಉದ್ದದ ಸೇತುವೆ ನಿರ್ಮಾಣವಾಗಲಿದೆ. ಆದರೆ ಇದಕ್ಕೆ ಕೆಪಿಎಲ್‌ಸಿ ನಿರಪೇಕ್ಷಣಾ ಪತ್ರ ನೀಡಿಲ್ಲ ಎಂದು ಅವರು ಆಕ್ರೋಶಗೊಂಡಿದ್ದರು.

ತಮ್ಮ ಪ್ರತಿಭಟನೆಯ ಸುದ್ದಿಯನ್ನು ಬಿತ್ತರ ಮಾಡಿದ ಸುದ್ದಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+