ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಎಸಿಬಿಗೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು, ಮೇ 24: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರಳಿಧರ ರಾವ್, ವಿಜಯೇಂದ್ರ ಅವರುಗಳ ವಿರುದ್ಧ ಕರ್ನಾಟಕ ಕಾಂಗ್ರೆಸ್‌ನ ಕಾನೂನು ವಿಭಾಗ ಎಸಿಬಿಗೆ ದೂರು ನೀಡಿದೆ.

ಚುನಾವಣಾ ಫಲಿತಾಂಶದ ಬಳಿಕ ಬಹುಮತ ಸಾಬೀತು ಪಡಿಸಿ ಅಧಿಕಾರ ಹಿಡಿಯಲು ಜೆಡಿಎಸ್ ಹಾಗೂ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯ ಈ ಎಲ್ಲ ಮುಖಂಡರು ಕೋಟ್ಯಂತರ ಹಣದ ಆಮೀಷ ಒಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ದೂರಿನ ಜೊತೆಗೆ ಬಿಜೆಪಿ ಮುಖಂಡರು ಆಮೀಷ ಒಡ್ಡಿದ ಆಡಿಯೋ ಕ್ಲಿಪ್‌ಗಳನ್ನು ಎನ್ನಲಾದ ಧ್ವನಿ ನಮೂನೆಗಳನ್ನು ದೂರಿನೊಂದಿಗೆ ಎಸಿಬಿಗೆ ಕಾಂಗ್ರೆಸ್ ಕಾನೂನು ವಿಭಾಗ ನೀಡಿದೆ.

KPCC law section gives complaint to ACB against BJP top leaders

ಬಿಜೆಪಿಯು ಅಧಿಕಾರ ಹಿಡಿಯಲು ಅಡ್ಡದಾರಿಯನ್ನು ತುಳಿದಿದ್ದು, ಕುದುರೆ ವ್ಯಾಪಾರಕ್ಕೆ ಇಳಿದಿತ್ತು, ಅದರ ದಾಖಲೆ ಸಹ ಇದ್ದು ಇದನ್ನು ಪರಿಗಣಿಸಿ ಬಿಜೆಪಿಯ ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ, ಮುರಳಿಧರ ರಾವ್, ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ ರಾಜ್ ಹೇಳಿದ್ದಾರೆ.

ಬಿಜೆಪಿ ವಿಶ್ವಾಸಮತ ಯಾಚನಗೆ ಕೆಲವು ದಿನಗಳಿದ್ದಂತೆ ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಅವರು ಯಡಿಯೂರಪ್ಪ ಅವರು ಬಿ.ಸಿ.ಪಾಟೀಲ್ ಅವರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್, ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್, ಶ್ರೀರಾಮುಲು ಹಾಗೂ ಮುರಳಿಧರ ರಾವ್ ಬಿ.ಸಿ.ಪಾಟೀಲ್ ಅವರೊಂದಿಗೆ ಮಾತನಾಡಿದ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+