Darshan Thoogudeepa: ಇದುವರೆಗೂ ಜೈಲಿನಲ್ಲಿ ನಟ ದರ್ಶನ್ ಭೇಟಿಯಾದವರ ಪಟ್ಟಿ ಇಲ್ಲಿದೆ
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲುಪಾಲಾಗಿದೆ. ಇನ್ನು ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ, ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಇದೀಗ ಮತ್ತೊಂದು ಶಾಕಿಂಗ್ ಮಾಹಿತಿ ರಿವೀಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗಾಗಿ ಪತ್ನಿ ಇದೀಗ ಟೆಂಪಲ್ ರನ್ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೆ, ಜೈಲಿಗೆ ಹೋಗಿ ಭೇಟಿ ಮಾಡಿ ಪ್ರಸಾದ ನೀಡಿ ಬಂದಿದ್ದಾರೆ. ಅಷ್ಟೇ ಅಲ್ಲದೆ, ಇದುವರೆಗೂ ಯಾರೆಲ್ಲ ಎಷ್ಟು ಭಾರೀ ಭೇಟಿಯಾಗಿದ್ದಾರೆ ಹಾಗೂ ಎಷ್ಟು ಭಾರೀ ಭೇಟಿ ನೀಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಜೂನ್ 25 ರಿಂದ ಜುಲೈ 26ರ ಅವಧಿಯಲ್ಲಿ ಪತ್ನಿ ವಿಜಯಲಕ್ಷ್ಮೀ, ತಮ್ಮ ದಿನಕರ್ ಸೇರಿ ಒಟ್ಟು 30 ಮಂದಿ ನಟ ದರ್ಶನ್‌ನನ್ನು ಭೇಟಿ ಮಾಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇದುವರೆಗೂ ನಾಲ್ಕು ಬಾರಿ ಭೇಟಿ ಮಾಡಿದ್ದಾರೆ. ದರ್ಶನ್ ತಾಯಿ ಮೀನಾ ಜುಲೈ 1ರಂದು ಭೇಟಿ ಮಾಡಿದ್ದು, ದರ್ಶನ್ ತಮ್ಮ ದಿನಕರ್ 3 ಬಾರಿ ಭೇಟಿ ಮಾಡಿದ್ದಾರೆ.
ಯಾರೆಲ್ಲ ಯಾವ್ಯಾವಾಗ ಭೇಟಿ ಮಾಡಿದ್ದಾರೆ.?
* ಆರ್‌ಟಿಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಪಟ್ಟಿ ಬೆಳಕಿಗೆ ಬಂದಿದ್ದು, ಜೂನ್ 24ರಂದು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದರು.
* ಜೂನ್ 29ರಂದು ನಟಿ ರಕ್ಷಿತಾ ಭೇಟಿ, ಸ್ನೇಹಿತೆ ಎಂದು ನಮೂದಿಸಿ ಭೇಟಿ ಮಾಡಿದ್ದಾರೆ.
* ಜುಲೈ 1ರಂದು ದರ್ಶನ್ ತಾಯಿ ಹಾಗೂ ತಮ್ಮ ದಿನಕರ್ ಭೇಟಿ ಮಾಡಿದ್ದಾರೆ.
* ಜುಲೈ 2ರಂದು ಸಮತಾ ಭೇಟಿ, ಪುಸ್ತಕದಲ್ಲಿ ತಂಗಿ ಎಂದು ನಮೂದಿಸಿ ಸಮತಾ ಭೇಟಿ ಮಾಡಿದ್ದಾರೆ.
* ಜುಲೈ 10ರಂದು ಪತ್ನಿ ವಿಜಯಲಕ್ಷ್ಮಿ, ಮಗ, ಸುಶಾಂತ್, ಚಂದ್ರಶೇಖರ್ ಅಳಿಯ ಭೇಟಿ ಮಾಡಿದ್ದಾರೆ.
* ಜುಲೈ 11ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ ಭೇಟಿ.
* ಜುಲೈ15ರಂದು ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಅನುಶ್ ಶೆಟ್ಟಿ
* ಜುಲೈ19ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್
* ಜುಲೈ 22ರಂದು ವಿನೋದ್ ಪ್ರಭಾಕರ್ , ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ.
* ಜುಲೈ 25ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಸೇರಿ ಒಟ್ಟು 30 ಮಂದಿಯಿಂದ ಜೂನ್ 24 ರಿಂದ ಜುಲೈ 25ರ ಒಂದು ತಿಂಗಳ ಅವಧಿಯಲ್ಲಿ ದರ್ಶನ್ ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications