ಬೆಂಗಳೂರಿನ ಕೇಬಲ್ ಅವಾಂತರಕ್ಕೆ 'ಸ್ಪೈಡರ್‌ಮ್ಯಾನ್' ಸಾಕ್ಷಿ! ಕಿರಣ್ ಮಜುಂದಾರ್ ಶಾ ಪೋಸ್ಟ್ ವೈರಲ್

ಬೆಂಗಳೂರು: ಬೆಂಗಳೂರಲ್ಲಿ ಟಿವಿ ಕೇಬಲ್‌ಗಳ ಹಾವಳಿಯಿಂದ ಈ ಹಿಂದೆಯು ಸಾಕಷ್ಟು ಸಮಸ್ಯೆ ಆಗಿದೆ. ಜೀವಗಳು ಬಲಿಯಾಗಿವೆ. ನಗರದ ನಾಗರಿಕರಿಗೆ ಟಿವಿ ಕೇಬಲ್‌ಗಳಿಂದ ಆಗುತ್ತಿದ್ದ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಇದನ್ನು ಟೀಕಿಸಿ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಮತ್ತು ಸಂಸ್ಥಾಕಪರಾದ ಕಿರಣ್ ಮಜುಂದಾರ್ ಶಾ ಅವರು 'ಸ್ಪೈಡರ್‌ ಮ್ಯಾನ್' ಪೋಟೋ ಹಂಚಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ.

ಹೌದು, ಬೆಂಗಳೂರು ರಸ್ತೆ, ಪಾದಾಚಾರಿ ಮಾರ್ಗ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಸಮಸ್ಯೆಗಳ ಕುರಿತು ಉದ್ಯಮಿ ಕಿರಣ್ ಮಂಜುಂದಾರ್ ಶಾ ಬೆಳಕು ಚೆಲ್ಲುತ್ತಾರೆ. ಅದಕ್ಕೆ ಸಂಬಂಧಿಸಿ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಸರ್ಕಾರಕ್ಕೆ 'ನೀವು ರಸ್ತೆ ನಿರ್ಮಿಸಲು ಆಗದಿದ್ದರೆ ನಾವೇ ನಿರ್ಮಿಸಿಕೊಳ್ಳುತ್ತೇವೆ' ಎಂದು ಗುಡುಗಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳ ಉಂಟಾಗಿದ್ದವು. ಆದರೆ ಈ ಬಾರಿ ಅವರು ಕೇಬಲ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ಪೈಡರ್ ಮ್ಯಾನ್ ಪೋಸ್ಟ್ ಹಂಚಿಕೊಂಡಿದ್ದು, ಅದು ಸಾಕಷ್ಟು ವೀಕ್ಷಣೆ ಪಡೆದಿದೆ. ಫೋಟೋ ಬೆಂಗಳೂರಿನ ಕೇಬಲ್ ವ್ಯವಸ್ಥೆಯ ನೈಜ ಚಿತ್ರಣವನ್ನು ಪ್ರತಿಬಿಂಬಿಸುವಂತಿದೆ.

Kiran Mazumdar-Shaw

ಪೋಸ್ಟ್‌ನಲ್ಲಿ ಏನಿದೆ?

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಕಿರಣ್ ಮಜುಂದಾರ್ ಶಾ ಅವರು, 'Spider-Man was warned not to come to Bengaluru!' (ಸ್ಪೈಡರ್ ಮ್ಯಾನ್ ಗೆ ಬೆಂಗಳೂರಿಗೆ ಬರದಂತೆ ಎಚ್ಚರಿಕೆ ನೀಡಲಾಗಿತ್ತು!) ಶಿರ್ಷಿಕೆ ಜೊತೆಗೆ ಇಳೆಬಿದ್ದ ಟಿವಿ ಕೇಬಲ್‌ಗಳಲ್ಲಿ ಸೈಡರ್ ಮ್ಯಾನ್ ಸಿಲುಕೊಂಡಂತೆ ಕಾಣಿಸುವ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಇದು ಎಐ ನಿಂದ ಮಾಡಿದ ಜನರೇಟೆಡ್ ಫೋಟೋ ಆಗಿದೆ. ಅಲ್ಲದೇ ಪೋಟೋದಲ್ಲಿ ಕೇಬಲ್‌ನ ಬಲೆಯಲ್ಲಿ ಸ್ಪೈಡರ್ ಮ್ಯಾನ್ ಸಿಲುಕಿರುವ ದೃಶ್ಯ ಕಾಣಿಸುತ್ತಿದೆ. ಆದರೆ ಫೋಟೋದಲ್ಲಿನ ಬೋರ್ಡ್‌ಗಳು ಕನ್ನಡದಲ್ಲಿ ಇಲ್ಲ. ಆದರೆ ಇದನ್ನು ಬೆಂಗಳೂರು ನಗರದ ತೀರಾ ಹಳೆಯ ಕೇಬಲ್ ಸಮಸ್ಯೆಗಳಿಗೆ ಹೋಲಿಕೆ ಮಾಡಿ ಶಾ ಟೀಕಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುವಕರನ್ನು ಉದ್ದೇಶಿಸಿ ಮಾತನಾಡುವಾಗ ಎಐ ಬಳಸುವಂತೆ ಪ್ರತಿಪಾದಿಸಿದ್ದರು. ಅದರ ಬೆನ್ನಲ್ಲೆ ಉದ್ಯಮಿಯ ಎಐ ಕ್ರಿಯೇಟೆಡ್ ಸ್ಪೈಡರ್ ಮ್ಯಾನ್ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಕೇಬಲ್‌ ಹಾವಳಿಗೆ ದುರಂತ ನಡೆದರೂ ಸಿಗದ ಪರಿಹಾರ!

ಗ್ರೇಟರ್ ಬೆಂಗಳೂರ ಪ್ರಾಧಿಕಾರ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಟಿವಿ ಕೇಬಲ್ ಎಳೆಯಲಾಗುತ್ತದೆ. ಅಲ್ಲದೇ ಕೇಬಲ್‌ಗಳ ಗೊಂಚಲು ಬಿಲ್ಡಿಂಗ್‌ ಗಳ ನಡುವೆ ಕಾಣಿಸುತ್ತವೆ. ಅದೆಷ್ಟೋ ಬಾರಿ ನಾನಾ ಕಡೆಗಳಲ್ಲಿ ಇವುಗಳು ಜೋತು ಬಿದ್ದು ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಮಾಡಿವೆ. ಈ ಹಿಂದೆ ಸಾವಿನ ದುರಂತಗಳು ಸಂಭವಿಸಿದ್ದವು. ಆಗ ಮಾತ್ರವೇ ನಗರಾಡಳಿತ ಸಂಸ್ಥೆಗಳು, ಸರ್ಕಾರ ಕ್ರಮ ಕೈಗೊಂಡಂತೆ ಕೆಲಸ ಮಾಡಿ, ನಂತರ ಸುಮ್ಮನಾಗಿದೆ. ಈ ಕಾರಣದಿಂದ ಇಂದಿಗೂ ನಗರದಲ್ಲಿ ಕೇಬಲ್ ಸಮಸ್ಯೆ ಜೀವಂತವಾಗಿದೆ. ಇನ್ನಷ್ಟು ಜನರಿಗೆ ಸಮಸ್ಯೆ ಆಗುವ ಮುನ್ನ ಕೇಬಲ್ ಆಪರೇಟರ್, ಏಜೆನ್ಸಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ ಸಮಸ್ಯೆ ಸರಿಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ಕನ್ನಡ ಬೋರ್ಡ್ ಇರುವ AI ಫೊಟೋ ಬಳಸಿ: ನೆಟ್ಟಿಗರು

ಇನ್ನೂ ಈ ಪೊಸ್ಟ್ ಅಪ್ಲೋಡ್ ಆದ ಬಳಿಕ ಈವರೆಗೆ ಸುಮಾರು ಒಂದೂವರೆ ಲಕ್ಷದಷ್ಟು ಜನ ವೀಕ್ಷಿಸಿದ್ದಾರೆ. ನೂರಾರು ಬಾರಿ ರಿಪೋಸ್ಟ್ ಆಗಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು 'ಕನ್ನಡ ಬೋರ್ಡ್ ಇರುವ ಫೋಟೋ ಬಳಸುವಂತೆ' ಕೋರಿದ್ದಾರೆ. ಈ ಪೊಸ್ಟ್ ನೋಡಿ 'ನಾನು ಇದೆಲ್ಲೋ ದೆಹಲಿಯ ಚಾಂದ್ನಿ ಚೌಕ್ ಪ್ರವೇಶ ಇರಬೇಕು ಎಂದುಕೊಂಡೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಚೆನ್ನೈ, ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಇಂಥಹ ಸಮಸ್ಯೆ ಇದ್ದೇ ಇದೆ' ಎಂದು ಮೂರನೇ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+