ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಿದ್ವಾಯಿ ಸಂಸ್ಥೆ ದೇಣಿಗೆ

ಬೆಂಗಳೂರು, ಜೂನ್ 3: ಕೊರೊನಾ ವಿರುದ್ಧ ಹೋರಾಟ ಮಾಡಲು ಅನೇಕರು ಸರ್ಕಾರಕ್ಕೆ ದೇಣಿಗೆ ನೀಡುತ್ತಿದ್ದಾರೆ. ಮಠಗಳಿಂದ ಹಿಡಿದು, ಸಾರಿಗೆ ಇಲಾಖೆ, ಅಧಿಕಾರಿಗಳು, ವಿದ್ಯಾರ್ಥಿಗಳು ಹೀಗೆ ಸಾಕಷ್ಟು ಮಂದಿ ತಮ್ಮ ಕೈಲಾದ ನೆರವು ನೀಡಿದ್ದಾರೆ.

ಕಲಬುರ್ಗಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದೆ. ನೌಕರರು ತಮ್ಮ ವೇತನದ ಒಂದು ದಿನದ ಮೊತ್ತವನ್ನು ಕೊರೊನಾ ತಡೆಗೆ ನೀಡಿದ್ದಾರೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ನೌಕರರ ಒಂದು ವೇತನವಾಗಿರುವ 19,39,983 ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ''ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, ಕಲಬುರ್ಗಿಯ ನೌಕರರು ತಮ್ಮ ವೇತನದ ಒಂದು ದಿನದ ಮೊತ್ತವಾಗಿರುವ 19,39,983 ರೂ.ಗಳನ್ನು ದೇಣಿಗೆ ನೀಡಿದ್ದು, ಇಂದು ಸಂಸ್ಥೆ ನಿರ್ದೇಶಕ ಡಾII ಸಿ.ರಾಮಚಂದ್ರ ಅವರಿಂದ ಚೆಕ್ ಅನ್ನು ಸ್ವೀಕರಿಸಿದ್ದೇನೆ.'' ಎಂದು ತಿಳಿಸಿದ್ದಾರೆ.

Kidwai Institute Handover A Cheque To Yediyurappa For Covid Relief Fund

ಅಂದಹಾಗೆ, ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ 267 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢವಾಗಿವೆ. ಆಸ್ಪತ್ರೆಯಿಂದ ಒಟ್ಟು 1514 ಜನರು ಬಿಡುಗಡೆಯಾಗಿದ್ದಾರೆ. 53 ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+