ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ
ಬೆಂಗಳೂರು, ಆಗಸ್ಟ್ 08 : ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನು ಕಾಪಾಡಿ, ಡಿನೋಟಿಫಿಕೇಷನ್ ಭೂತದಿಂದ ಬೆಂಗಳೂರಿನಲ್ಲಿ ಸಾವಿನಂಚಿಗೆ ತಲುಪಿರುವ ಕೆರೆಗಳನ್ನು ಪಾರು ಮಾಡಿ ಎಂದು ಕನ್ನಡ ನಟ 'ಕಿಚ್ಚ' ಸುದೀಪ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಕಳಿಯಿಂದ ಮಂಗಳವಾರ ಪತ್ರ ಬರೆದಿದ್ದಾರೆ.
ಆ ಪತ್ರದ ಸಾರಾಂಶ ಇಲ್ಲಿದೆ.

ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ,
ಗೌರವಾನ್ವಿತ ಸಿಎಂ ಸರ್,
ನಮ್ಮ ಕೆರೆಗಳು ನಮ್ಮ ಜೀವನಾಡಿ. ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೇ ಜೀವ ತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಹಕ್ಕಿಗಳು, ಪ್ರಾಣಿಗಳು, ಮನುಷ್ಯರು... ಪ್ರತಿಯೊಂದೂ ಪ್ರಕೃತಿಯ ಭಾಗವೆ. ಕೆರೆಗಳನ್ನು ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನು ಹತ್ಯೆಗೈದಂತೆ.
ನಿಮಗೆ ಅತ್ಯಂತ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಒಣಗಿ ಹೋಗಿರುವ ಕೆರೆಗಳ ಡಿನೋಟಿಫಿಕೇಷನ್ ಮಾಡುವುದನ್ನು ಮರುಪರಿಶೀಲಿಸಬೇಕು. ಪ್ರಕೃತಿ ಮಾತೆ ಕೆರಳುವುದಕ್ಕೆ ನಾವು ಕಾರಣರಾಗುವುದನ್ನು ತಡೆಯಬೇಕಿದೆ. ನಾವೀಗ ಸಾಕಷ್ಟು ಕಳೆದುಕೊಂಡಿದ್ದೇವೆ. ಆದರೆ, ಉಳಿದಿರುವುದನ್ನಾದರೂ ನಾವು ಉಳಿಸಿಕೊಳ್ಳಬಹುದಲ್ಲವೆ?
ನಾನು ಒಬ್ಬ ನಟನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಈ ಪತ್ರವನ್ನು ಎಲ್ಲ ಶ್ರೀಸಾಮಾನ್ಯರ ಪರವಾಗಿ ಬರೆದಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ.
ಇಂತಿ ವಿಶ್ವಾಸಿ,
ಸುದೀಪ್
Namma @KicchaSudeep requesting @CMofKarnataka as a common man about reconsidering Denotifications of Lakes...#ConcernTowardsNature :) pic.twitter.com/kO2wUSFAr2
— KICCHASUDEEPFANS(A)® (@KSFA_Official) August 8, 2017
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications