ಬೆಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ
ಬೆಂಗಳೂರು, ಫೆಬ್ರವರಿ 28 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ರನ್ ವೇ ವಿಸ್ತರಣೆ ಕಾರ್ಯ ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ವಿಸ್ತರಣೆ ಕಾರ್ಯ ಆರಂಭವಾಗುತ್ತಿದ್ದಂತೆ ರನ್ ವೇ ಮೇಲಿನ ಕಾರ್ಯಾಚರಣೆ ರದ್ದುಗೊಳಿಸಲಾಗುತ್ತದೆ.
ಬಿಐಎಎಲ್ ರನ್ ವೇ ವಿಸ್ತರಣೆ, ಅಭಿವೃದ್ಧಿ ಕಾರ್ಯಕ್ಕಾಗಿ ಟೆಂಡರ್ ಕರೆದಿದೆ. ಪ್ರಸ್ತುತ ಇರುವ RWY 09L/27R ರನ್ ವೇಯನ್ನು CAT 1ನೇ ದರ್ಜೆಯಿಂದ CAT 3 ನೇ ದರ್ಜೆಗೆ ಅಭಿವೃದ್ಧಿ ಪಡಿಸಲಾಗುತ್ತದೆ. ಮಾರ್ಚ್ 26ರಿಂದ ನವೆಂಬರ್ 4ರ ತನಕ ಈ ಕಾಮಗಾರಿ ನಡೆಯುವ ನಿರೀಕ್ಷೆ ಇದೆ.
2008ರಿಂದ ಮೊದಲ ರನ್ ವೇನಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಯುತ್ತಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ವಿಮಾನಗಳ ಹಾರಾಟ ರನ್ ವೇನಲ್ಲಿ ಸ್ಥಗಿತಗೊಳ್ಳಲಿದೆ. ಈಗಾಗಲೇ 2ನೇ ರನ್ ವೇಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ.

ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ರನ್ ವೇ ವಿಸ್ತರಣೆ ಮತ್ತು ಅಭಿವೃದ್ಧಿ ಕೆಲಸ ನಡೆಯಲಿದೆ. ಈ ಸಮಯದಲ್ಲಿ ವಿಮಾನಗಳ ಹಾರಾಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.
ಮೊದಲ ರನ್ ವೇಯಲ್ಲಿ 2008ರಿಂದ ನಿರಂತವಾಗಿ ವಿಮಾನಗಳು ಕಾರ್ಯಾಚರಣೆ ಮಾಡುತ್ತಿವೆ. ಎರಡನೇ ರನ್ ವೇ ವಿಮಾನಗಳ ಹಾರಾಟಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಬಿಐಎಎಲ್ ಹೇಳಿದೆ.












Click it and Unblock the Notifications