• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾತ್ವಾಕಾಂಕ್ಷೆಯಿಂದ 2019 ಸ್ವಾಗತಿಸಿದ ಕೇರಳ ಟೂರಿಸಂ

|

ಬೆಂಗಳೂರು, ಫೆಬ್ರವರಿ 12 : ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭದಿಂದ ಕೇರಳ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯವೆನಿಸಿದೆ. ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ಕಣ್ಣೂರು ಪ್ರವಾಸಿಗಳ ಅಚ್ಚುಮೆಚ್ಚಿನ ತಾಣವಾಗಲು ಸಜ್ಜಾಗಿದೆ. ಸ್ವಾದಿಷ್ಟ ಮಾಪ್ಲಾ ಆಹಾರದ ತವರು, ಕೋಟೆಗಳು ಹಾಗೂ ಜಾನಪದ ಕಥೆಗಳ ತಾಣದಲ್ಲಿ ಹೊಸ ವಿಮಾನ ನಿಲ್ದಾಣ ಕೊಡಗು, ಕೊಯಮತ್ತೂರು ಮತ್ತು ಮೈಸೂರುಗಳ ಗಡಿಗಳನ್ನು ಹೊಂದಿರುವ ಮಲಬಾರ್ ದಕ್ಷಿಣ ಭಾರತದ ಹೊಸ ಪ್ರವಾಸೋದ್ಯಮ ಹೆದ್ದಾರಿಯಾಗುವ ಭರವಸೆ ಹೊಂದಿದೆ.

"ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಿಂದ ವಿಶ್ವ ಈಗ ಮಲಬಾರಿನ ವಿಸ್ಮಯಗಳಿಗೆ ಕಣ್ಣು ತೆರೆಯಬಹುದು. ಕೇರಳ ಪ್ರವಾಸೋದ್ಯಮ ಬೇಕಲ್ ಮತ್ತು ವಯನಾಡಿನಂತಹ ಉತ್ತರ ಕೇರಳದ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ್ದು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ 'ವಳಿಯಪರಂಬಾ ಹಿನ್ನೀರು, ಕುಪ್ಪಂ ಮತ್ತು ರಾಣಿಪುರಂ'ನಂತಹ ಸಣ್ಣ ಪ್ರದೇಶಗಳಿಗೆ ಈಗ ಆದ್ಯತೆ ನೀಡುತ್ತಿದೆ'' ಎಂದು ಕೇರಳದ ಮಾನ್ಯ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.

ಇಡೀ ವಿಶ್ವದ ಮೂಲೆ ಮೂಲೆಯ ಕಲೆ : ನಿಶಾಗಂಧಿ ನೃತ್ಯೋತ್ಸವ ಮತ್ತು ಜನಪ್ರಿಯ ಕೊಚ್ಚಿ ಮುಜಿóರಿಸ್ ಬೈಯೆನ್ನೇಲ್‍ನಂತಹ ಸಾಂಸ್ಕೃತಿಕ ಉತ್ಸವಗಳ ಮೂಲಕ ಕೇರಳ ಕಲಾಸಕ್ತರನ್ನು ಆಹ್ವಾನಿಸಲು ಸಜ್ಜಾಗಿದೆ. ಅತ್ಯಂತ ಜನಪ್ರಿಯ ಕೊಚ್ಚಿ ಮುಜಿರಿಸ್ ಬೈಯೆನ್ನೇಲ್‍ನ ಈ 5ನೇ ಆವೃತ್ತಿ ಕೊಚ್ಚಿಯಲ್ಲಿ ನಡೆಯಲಿದೆ. ಕೊಚ್ಚಿ ಕೋಟೆಯ ದಾರಿಗಳು ಮತ್ತು ಈ ಬೈಯೆನ್ನೇಲ್‍ನ ಯಾತ್ರೆ ಭಾರತದಲ್ಲಿ ಸಮಕಾಲೀನ ಕಲೆಯ ಸ್ವರೂಪವನ್ನೇ ಬದಲಾಯಿಸಿತು ಮತ್ತು ಕೊಚ್ಚಿಯನ್ನು ಭಾರತದ ಕಲಾ ರಾಜಧಾನಿಯಾಗಿಸಿತು. ಕೊಚ್ಚಿ ಮುಜಿರಿಸ್ ಬೈಯೆನ್ನೇಲ್ ಮಾರ್ಚ್ 29, 2019ರವರೆಗೆ ನಡೆಯಲಿದೆ.

ಪ್ರವಾಸಿಗರಿಗೆ ಶ್ರೀಮಂತ ಅನುಭವ

ಪ್ರವಾಸಿಗರಿಗೆ ಶ್ರೀಮಂತ ಅನುಭವ

"ಕೇರಳ ಪ್ರವಾಸಿಗರಿಗೆ ಶ್ರೀಮಂತ ಅನುಭವ ನೀಡುವ ಭರವಸೆ ನೀಡುತ್ತದೆ ಮತ್ತು ಕಲೆ ನಮ್ಮ ಪ್ರವಾಸೋದ್ಯಮ ಉಪಕ್ರಮಗಳ ಕೇಂದ್ರದಲ್ಲಿದೆ. ಕೇರಳವನ್ನು ಸ್ಫೂರ್ತಿದಾಯಕ ಪ್ರವಾಸದ ಅನುಭವವಾಗಿಸುವುದು ನಮ್ಮ ಧ್ಯೇಯವಾಗಿದೆ. ಈ ವರ್ಷವನ್ನು ನಿಶಾಗಂಧಿ ನೃತ್ಯೋತ್ಸವದಲ್ಲಿ ವಾರಪೂರ್ತಿ ನೃತ್ಯ ಮಾದರಿಗಳೊಂದಿಗೆ ಪ್ರಾರಂಭಿಸಿದ್ದು ರಾಜಧಾನಿಯಲ್ಲಿ ಕಳೆದ ವಾರವಷ್ಟೇ ಪೂರ್ಣಗೊಂಡಿದೆ ಮತ್ತು ಉಳಿದ ವರ್ಷದಲ್ಲಿ ನಿಶಾಗಂಧಿ ಮಾನ್ಸೂನ್ ಫೆಸ್ಟಿವಲ್ ಒಳಗೊಂಡು ಮತ್ತಿತರೆ ನೃತ್ಯೋತ್ಸವಗಳನ್ನು ಯೋಜಿಸಲಾಗಿದೆ'' ಎಂದು ಕೇರಳ ಸರ್ಕಾರದ ಕಾರ್ಯದರ್ಶಿ(ಪ್ರವಾಸೋದ್ಯಮ) ಶ್ರೀಮತಿ ರಾಣಿ ಜಾರ್ಜ್ ಹೇಳಿದರು.

ಪ್ರತಿಭೆಗಳ ಸಮ್ಮಿಶ್ರಣ

ಪ್ರತಿಭೆಗಳ ಸಮ್ಮಿಶ್ರಣ

ನಿಶಾಗಂಧಿ ಉತ್ಸವ ಪ್ರತಿವರ್ಷ ಜನವರಿಯಲ್ಲಿ ತಿರುವನಂತಪುರಂನ ಕನಕಕ್ಕುನ್ನು ಅರಮನೆ ಆವರಣದ ಹಸಿರು ಆವರಣದಲ್ಲಿ ನಡೆಸಲಾಗುತ್ತದೆ. ಇದು ವಿವಿಧ ಪ್ರಕಾರಗಳ ನೃತ್ಯಗಳ ಪ್ರದರ್ಶನ ಮತ್ತು ಭಾರತದ ಕಲಾಪ್ರೇಮಿಗಳಿಗೆ ಅತ್ಯುತ್ತಮ ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಕಾಣಲು ಮತ್ತು ಒಡಿಸ್ಸಿ, ಭರತನಾಟ್ಯಂ, ಮಣಿಪುರಿ, ಮೋಹಿನಿಯಾಟ್ಟಂ, ಛಾವು ಮತ್ತು ಕೂಚಿಪುಡಿಯ ಸಂಜೆಗಳನ್ನು ಕಳೆಯಲು ಅತ್ಯುತ್ತಮ ವೇದಿಕೆಯಾಗಿದೆ

ದೇಶೀಯ ಪ್ರವಾಸಿಗರಿಗೆ ರೂಪಿಸಿದ ಹೊಸ ಉತ್ಪನ್ನಗಳು

ದೇಶೀಯ ಪ್ರವಾಸಿಗರಿಗೆ ರೂಪಿಸಿದ ಹೊಸ ಉತ್ಪನ್ನಗಳು

ಆನ್‍ಲೈನ್‍ನಲ್ಲಿ ಸುಸ್ಥಿರತೆಯ ವಿಸ್ತರಣೆ

ಈ ವರ್ಷ ಕೇರಳ ಟೂರಿಸಂ ಒಂಬತ್ತು ರಾಷ್ಟ್ರೀಯ ಪ್ರಶಸ್ತಿಗಳಲ್ಲಿ 4 ಗೆದ್ದಿತು, ಅದರಲ್ಲಿ ಒಂದು ಅತ್ಯಂತ ಜವಾಬ್ದಾರಿಯುತ ಪ್ರವಾಸೋದ್ಯಮ ಪ್ರಾಜೆಕ್ಟ್/ಉಪಕ್ರಮವೂ ಒಳಗೊಂಡಿತ್ತು. ದೇಶದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮದ ಮುಂಚೂಣಿಯಲ್ಲಿರುವ ಕೇರಳದ ಆರ್‍ಟಿ ಮಿಷನ್ ಹಲವು ಬಗೆಯ ಅನುಭವಪೂರ್ವಕ ಪ್ಯಾಕೇಜ್‍ಗಳನ್ನು ಪ್ರಕಟಿಸಿದ್ದು ಅಲ್ಲಿನ ನೈಜ ಪ್ರವಾಸದ ಅನುಭವ ನೀಡುವುದಲ್ಲದೆ ಸ್ಥಳೀಯರಂತೆ ಜೀವಿಸುವ ಅವಕಾಶ ಕಲ್ಪಿಸುತ್ತದೆ. ಮೊದಲಿಗೆ ಆರ್‍ಟಿ ಉಪಕ್ರಮಗಳನ್ನು ಆನ್‍ಲೈನ್‍ನಲ್ಲಿ ವಿಸ್ತರಿಸಲಾಗಿದೆ ಮತ್ತು ಪ್ರವಾಸಿಗರು ನೇರವಾಗಿ ಕೃಷಿ ಉತ್ಪನ್ನ, ಕರಕುಶಲ ಕಲೆಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ನೇರವಾಗಿ ಕೊಳ್ಳಬಹುದು ಮತ್ತು ಕುಶಲ ಕರ್ಮಿಗಳು ಮತ್ತು ಸಾಂಪ್ರದಾಯಿಕ ಕಲಾವಿದರನ್ನು ಸಂಪರ್ಕಿಸಬಹುದು.

ವಿಶ್ವದ ಅತ್ಯಂತ ದೊಡ್ಡ ಪಕ್ಷಿ ಶಿಲ್ಪ

ವಿಶ್ವದ ಅತ್ಯಂತ ದೊಡ್ಡ ಪಕ್ಷಿ ಶಿಲ್ಪ

ಸುಸ್ಥಿರ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಮತ್ತೊಂದು ಉದಾಹರಣೆ ಜಟಾಯು ಅರ್ಥ್ ಸೆಂಟರ್, ಇದನ್ನು ಆಗಸ್ಟ್ ತಿಂಗಳಲ್ಲಿ ಉದ್ಘಾಟಿಸಲಾಯಿತು ಮತ್ತು 65 ಎಕರೆಗಳ ವಿಸ್ತೀರ್ಣದಲ್ಲಿ ಹರಡಿದೆ. ಜಟಾಯುವಿನ ಬೃಹತ್ ವಿಗ್ರಹ 200 ಅಡಿ ಉದ್ದ, 150 ಅಡಿ ಅಗಲ ಮತ್ತು 70ಅಡಿ ಎತ್ತರವಿದ್ದು ವಿಶ್ವದ ಅತ್ಯಂತ ದೊಡ್ಡ ಪಕ್ಷಿ ಶಿಲ್ಪವೆನಿಸಿದೆ.ಈ ತಾಣವು ದಕ್ಷಿಣ ಕೇರಳದ ಪ್ರವಾಸೋದ್ಯಮ ತಾಣಗಳ ಕೇಂದ್ರದಲ್ಲಿದ್ದು ಸುಲಭವಾಗಿ ತಲುಪಬಹುದು.

ಭಾರತದ ಮೊದಲ ಪಕ್ಷಿ ಜೀವವೈವಿಧ್ಯತೆ ವಸ್ತು ಸಂಗ್ರಹಾಲಯ

ಭಾರತದ ಮೊದಲ ಪಕ್ಷಿ ಜೀವವೈವಿಧ್ಯತೆ ವಸ್ತು ಸಂಗ್ರಹಾಲಯ

ಕಳೆದ ಕೆಲ ತಿಂಗಳಲ್ಲಿ ರಾಜ್ಯವು ಹಲವಾರು ಪರಿಸರ ಹಾಗೂ ಪರಿಸರ ಸ್ನೇಹಿ ಉಪಕ್ರಮಗಳನ್ನು ತೆಗೆದುಕೊಂಡಿರುವುದು ಹೆಮ್ಮೆ ತಂದಿದೆ. ಭಾರತದ ಪ್ರಥಮ ಜೀವವೈವಿಧ್ಯತೆಯ ವಸ್ತು ಸಂಗ್ರಹಾಲಯ ತಿರುವನಂತಪುರಂನ ಹೊರವಲಯದಲ್ಲಿದೆ. ಈ ಮ್ಯೂಸಿಯಂ ಒಮ್ಮೆ ಬೋಟ್‍ಹೌಸ್ ಆಗಿದ್ದು ಈಗ ರಾಜ್ಯದ ಪ್ರಥಮ ಸೈನ್ಸ್ ಆನ್ ಸ್ಫಿಯರ್(ಎಸ್‍ಒಎಸ್) ಸಿಸ್ಟಂ ಆಗಿದೆ.

ಐತಿಹಾಸಿಕ ಪ್ರಯಾಣ

ಮತ್ತೊಂದು ಯುಗಕ್ಕೆ ಚಲಿಸುವ ಬಯಕೆಯ ಇತಿಹಾಸದ ಆಸಕ್ತರಿಗೆ ಮುಜಿರಿಸ್ ಹೆರಿಟೇಜ್ ಪ್ರಾಜೆಕ್ಟ್ ಇದೆ. ಇದು ಅರಬ್ಬರು, ರೋಮನ್ನರು, ಈಜಿಪ್ಷಿಯನ್ನರು ಭೇಟಿ ನೀಡುತ್ತಿದ್ದ ಬಂದರು ಆಗಿದೆ. ಕ್ರಿ.ಪೂ.ಮೊದಲ ಶತಮಾನದಂತೆಯೇ 25 ಮ್ಯೂಸಿಯಂಗಳನ್ನು ಸಂಗ್ರಹಿಸಲಾಗಿದ್ದು ಭಾರತದ ಅತ್ಯಂತ ದೊಡ್ಡ ಪರಂಪರೆಯ ಸಂರಕ್ಷಣೆಯಾಗಿದೆ. ಈ ಐತಿಹಾಸಿಕ ವಲಯದಲ್ಲಿ ಮತ್ತೊಂದು ಕೊಡುಗೆ 2000ವರ್ಷ ಹಳೆಯ ಸಮುದ್ರದ ಸಂಪರ್ಕಗಳು ಹಾಗೂ ಸಾಂಸ್ಕೃತಿಕ ಮತ್ತು ಆಹಾರ ಪರಂಪರೆಯನ್ನು 30 ದೇಶಗಳೊಂದಿಗೆ ಹಂಚಿಕೊಂಡಿದೆ.

ನ್ಯಾಟ್ ಜಿಯೊ ಟ್ರಾವೆಲ್ಲರ್ ಪತ್ರಿಕೆಗಳಿಂದ ಪ್ರಶಂಸೆ

ನ್ಯಾಟ್ ಜಿಯೊ ಟ್ರಾವೆಲ್ಲರ್ ಪತ್ರಿಕೆಗಳಿಂದ ಪ್ರಶಂಸೆ

2017 ಕೇರಳ ಪ್ರವಾಸೋದ್ಯಮಕ್ಕೆ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆಯ ದೃಷ್ಟಿಯಿಂದ ಮೈಲಿಗಲ್ಲಿನ ವರ್ಷವಾಗಿದೆ. ದೇಶೀಯ ಪ್ರವಾಸಿಗರ ಸಂಖ್ಯೆ 1,46,73,520 ಇದ್ದು ವರ್ಷದಿಂದ ವರ್ಷಕ್ಕೆ ಶೇ.11.39ರಷ್ಟು ಪ್ರಗತಿಯಾಗಿದೆ 2017ರ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ 10,91,870 ಇದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.5.15ರಷ್ಟು ಹೆಚ್ಚಳವಾಗಿದೆ.

ಕೊಂಡೆ ನಾಸ್ಟ್ ಟ್ರಾವೆಲ್ಲರ್(ಬೆಸ್ಟ್ ಲೀಷರ್ ಡೆಸ್ಟಿನೇಷನ್), ನ್ಯಾಟ್ ಜಿಯೊ ಟ್ರಾವೆಲ್ಲರ್ ಪತ್ರಿಕೆಗಳಿಂದ ಪ್ರಶಂಸೆಗೆ ಒಳಗಾಗಿದ್ದಲ್ಲದೆ ಕೇರಳ 2016-17ರಲ್ಲಿ ನವದೆಹಲಿಯಲ್ಲಿ ಸೆಪ್ಟೆಂಬರ್ 27, 2018ರಂದು ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ.

ದೇಶೀಯ ಮಾರುಕಟ್ಟೆಗೆ ತಲುಪಲು ಭುವನೇಶ್ವರ, ವಿಜಯವಾಡ, ಅಹಮದಾಬಾದ್, ವಡೋದರ, ಸೂರತ್, ಲಖನೌ, ಇಂದೋರ್, ನಾಗ್ಪುರ್, ಪುಣೆ ಮತ್ತು ಮುಂಬೈಗಳಲ್ಲಿ ಜುಲೈ ತಿಂಗಳಿಂದ ಅಕ್ಟೋಬರ್ 2018ರವರೆಗೆ ಹಲವು ಪಾಲುದಾರಿಕೆ ಸಭೆಗಳನ್ನು ನಡೆಸಲಾಗಿದೆ.

ಮಹತ್ವಾಕಾಂಕ್ಷೆಯ ಮಾರ್ಕೆಟಿಂಗ್ ಅಭಿಯಾನ

ಮಹತ್ವಾಕಾಂಕ್ಷೆಯ ಮಾರ್ಕೆಟಿಂಗ್ ಅಭಿಯಾನ

ಕೇರಳ ಟೂರಿಸಂ ಈಗ 2019ರಲ್ಲಿ ಮತ್ತೊಂದು ಮಹತ್ವಾಕಾಂಕ್ಷೆಯ ಮಾರ್ಕೆಟಿಂಗ್ ಅಭಿಯಾನ ಪ್ರಾರಂಭಿಸಿದ್ದು ಭಾರತದಾದ್ಯಂತ 10 ನಗರಗಳಲ್ಲಿ ಪಾಲುದಾರಿಕೆ ಸಭೆಗಳ ಸರಣಿ ಆಯೋಜಿಸಿದೆ. ಲೂಧಿಯಾನ, ಚಂಡೀಗಢ, ದೆಹಲಿ ಮತ್ತು ಜೈಪುರದಲ್ಲಿ ಗಮನಾರ್ಹ ಭಾಗವಹಿಸುವಿಕೆ ಕಂಡ ನಂತರ ಕೇರಳ ಪ್ರವಾಸೋದ್ಯಮ ಅಧಿಕಾರಿಗಳು ಬೆಂಗಳೂರಿನಲ್ಲಿ ಪಾಲುದಾರಿಕೆ ಸಭೆಗಳಲ್ಲಿ ಭಾಗವಹಿಸಲು ಸಂತೋಷ ಪಡುತ್ತಾರೆ. ಫೆಬ್ರವರಿ ತಿಂಗಳಲ್ಲಿ ಹೈದರಾಬಾದ್, ಕೊಲ್ಕತಾ, ವಿಶಾಖಪಟ್ಟಣ, ಚೆನ್ನೈ ಮತ್ತು ಮದುರೈಗಳಲ್ಲಿ ಈ ಸಭೆಗಳು ನಡೆಯಲಿವೆ.

ಪ್ರವಾಸೋದ್ಯಮ ಉತ್ಪನ್ನಗಳ ಸಂಯೋಜನೆ

ಪ್ರವಾಸೋದ್ಯಮ ಉತ್ಪನ್ನಗಳ ಸಂಯೋಜನೆ

ಕೇರಳದ ಸಾಂಪ್ರದಾಯಿಕ ಕಲಾ ವಿಧಾನಗಳ ಸಾಂಸ್ಕೃತಿಕ ವೈಶಿಷ್ಟ್ಯ ಮತ್ತು ಅದರ ಆಕರ್ಷಕ ಪ್ರವಾಸೋದ್ಯಮ ಉತ್ಪನ್ನಗಳ ಸಂಯೋಜನೆಯ ಈ ಪಾಲುದಾರಿಕೆ ಸಭೆಗಳು ಆಯಾ ನಗರಗಳಲ್ಲಿ ಪ್ರವಾಸೋದ್ಯಮ ವಹಿವಾಟಿಗೆ ಕೇರಳದ 40 ಟೂರಿಸಂ ಉದ್ಯಮದ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ. ಈ ಪಾಲುದಾರಿಕೆ ಸಭೆ 30 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮ ಹೊಂದಿದ್ದು ಕೇರಳದ ಕಲಾಪ್ರಕಾರಗಳ ದೃಶ್ಯ ನಿರೂಪಣೆ, ಅಲ್ಲಿನ ಗ್ರಾಮಜೀವನ ಹಾಗೂ ಜಾನಪದವನ್ನು ಬಿಂಬಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the inauguration of the Kannur International airport, Kerala is the only state in India to have four international airports. Flanked by the Arabian Sea and shielded by the Western Ghats, Kannur is now gearing up to become a favourite in tourist itineraries.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more