KEA: ಪಿಜಿನೀಟ್ ಸೀಟು ಹಂಚಿಕೆ ಪಲಿತಾಂಶ ಬಿಡುಗಡೆ, ಕೆಸೆಟ್ ದಾಖಲೆ ಪರಿಶೀಲನೆ ಅಪ್ಡೇಟ್ಸ್
PGNEET 2025: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರ (NEET-PG 2025) ಅಭ್ಯರ್ಥಿಗಳ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಜೊತೆಗೆ ಕೆಸೆಟ್ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಆರಂಭಿಸಿದೆ.
ಪಿಜಿನೀಟ್ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ (https://cetonline.karnataka.gov.in/kea/karrec23) ನಲ್ಲಿ ಪರಿಶೀಲಿಸಬಹುದು. ಅಭ್ಯರ್ಥಿಗಳು ಆಯ್ಕೆ ದಾಖಲಿಸಲು ಡಿಸೆಂಬರ್ 2ರವರೆಗೆ ಅವಕಾಶ ನೀಡಲಾಗಿದೆ. ಇನ್ನೂ ಡಸೆಂಬರ್ 1 ಮತ್ತು 2ರೊಳಗೆ ದಾಖಲಿಸದವರು ಡಿಸೆಂಬರ್ 4ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಡಿಸೆಂಬರ್ 2ರಿಂದ 5ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಬೇಕು. ಮೂಲ ದಾಖಲೆ ಸಲ್ಲಿಸಿದ ನಂತರ ಡಿಸೆಂಬರ್ 6ರೊಳಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

PGNEET ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಆಗಿದ್ದು, ಒಂದು ವೇಳೆ ಅಭ್ಯರ್ಥಿಗಲು ಸೀಟು ರದ್ದು ಮಾಡಿಕೊಳ್ಳುವವರು ಯಾವ ಹಂತದಲ್ಲಿ ಎಷ್ಟೆಷ್ಟು ದಂಡ ಕಟ್ಟಬೇಕು ಎಂಬುದರ ಪಟ್ಟಿ ಇಲ್ಲಿದೆ. ಇದನ್ನು ಒಮ್ಮೆ ನೋಡಿ ದಂಡದಿಂದ ಪಾರಾಗಲು ಸೂಕ್ತ ಎಚ್ಚರಿಕೆ ವಹಿಸುವಂತೆ ಪ್ರಾಧಿಕಾರ ತಿಳಿಸಿದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನಡೆಸುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET 2025) ಪರೀಕ್ಷೆಯಲ್ಲಿ ಅರ್ಹರಾದವರ ದಾಖಲೆ ಪರಿಶೀಲನೆ & ಪ್ರಮಾಣ ಪತ್ರ ವಿತರಣೆ ಶನಿವಾರದಿಂದ KEA ಕಚೇರಿಯಲ್ಲಿ ಆರಂಭಿಸಲಾಗಿದೆ. ಮೊದಲ ದಿನ ಕನ್ನಡ ವಿಷಯದಲ್ಲಿ ಅರ್ಹರಾದವರ ದಾಖಲೆ ಪರಿಶೀಲನೆ ನಡೆಯಿತು. ಬಳಿಕ ಅಲ್ಲೇ ಪ್ರಮಾಣ ಪತ್ರ ನೀಡುವ ಅಚ್ಚುಕಟ್ಟಾದ ವ್ಯವಸ್ಥೆ ಕೂಡ ಮಾಡಲಾಗಿತ್ತು ಎಂದು ಪ್ರಾಧಿಕಾರ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಕೆ-ಸೆಟ್ ಅಧ್ಯಕ್ಷರಾದ ವಿಶ್ರಾಂತ ಕುಲಪತಿ ಪ್ರೊ ಬಿ.ತಿಮ್ಮೇಗೌಡ ಅವರೂ ಈ ಸಂದರ್ಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ, ಅಭ್ಯರ್ಥಿಗಳಿಗೆ ಶುಭ ಕೋರಿದರು. ಬೆಂಗಳೂರು ಮಹಾನಗರದ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದಲ್ಲಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿರುವ ಕೆ.ಬಿ.ಅರವಿಂದ ಎಂಬುವರು ಹಾಗೂ ಬಿಎಂಟಿಸಿ ನಿರ್ವಾಹಕಿ ಜಯಮ್ಮ ಅವರು ಈ ಬಾರಿಯ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವುದು ಸಂತಸದ ವಿಷಯ. ಅರ್ಹರ ದಾಖಲಾತಿ ಪರಿಶೀಲನೆ ಡಿಸೆಂಬರ್ 6ರವರೆಗೆ ನಡೆಸಲಿದೆ.
ತ್ಯಾಜ್ಯ ಸಂಸ್ಕರಣೆ ಘಟಕ ಸದಸ್ಯ, ಎಂಟಿಸಿ ನಿರ್ವಾಹಕಿ ಕೆಸೆಟ್ ಪಾಸ್
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಇವರು ಕೆಲಸ ಮಾಡಿಕೊಳ್ಳುತ್ತಲೇ ಸ್ನಾತಕೋತ್ತರ ಪದವಿ ಮಾಡಿ ಈಗ ಕನ್ನಡ ವಿಷಯದ ಕೆಸೆಟ್ ಪರೀಕ್ಷೆಯಲ್ಲೂ ಅರ್ಹತೆ ಪಡೆದಿದ್ದಾರೆ. ನಿತ್ಯ ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಕೆಲಸ ಮಾಡುವ ನನಗೆ ಸಹಾಯಕ ಪ್ರಾಧ್ಯಾಪಕರಾಗಬೇಕು ಎನ್ನುವ ಕನಸು ಇತ್ತು. ಆದರೆ ಅದು ಸಾಕಾರಗೊಳ್ಳಲು ಕೆಇಎ ನೆರವಾಗಿದ್ದು ಖುಷಿಯ ವಿಚಾರ. ನಮ್ಮಂತಹವರೂ ಇಂತಹ ಕ್ಲಿಷ್ಟ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇವತ್ತು ಪ್ರಮಾಣ ಪತ್ರ ಸ್ವೀಕರಿಸುತ್ತಿದ್ದೀನಿ ಅಂದ್ರೆ ಅದಕ್ಕೆ ಕೆಇಎ ಅಳವಡಿಸಿಕೊಂಡಿರುವ ಉತ್ಕೃಷ್ಟತೆ ಮಾನದಂಡಗಳೇ ಕಾರಣ ಎಂದು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಬಿಎಂಟಿಸಿ ನಿರ್ವಾಹಕಿ ಜಯಮ್ಮ ಅವರು ಸಹ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಬೆಂಗಳೂರಿನವರೇ ಆದ ಅವರು ಕನ್ನಡ ವಿಷಯದಲ್ಲಿ ಕೆಸೆಟ್ ಪರೀಕ್ಷೆ ತೆಗೆದುಕೊಂಡಿದ್ದಾರೆ. ನಮ್ಮಂತಹವರೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬಹುದು ಎನ್ನುವುದಕ್ಕೆ ಕೆಇಎ ಹಮ್ಮಿಕೊಂಡಿರುವ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯೇ ಕಾರಣ ಎಂದು ಜುಯಮ್ಮ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಷ್ಟೇ ಅಲ್ಲ, ಪ್ರಾಧಿಕಾರ ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಇದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಕೆಸೆಟ್ ಪರೀಕ್ಷೆಯಲ್ಲಿ ಒಟ್ಟು ಶೇಕಡಾ 06ರಷ್ಟು ಮಂದಿ ಅರ್ಹರಾಗಿದ್ದಾರೆ. ಅದರಲ್ಲಿ ಮಧ್ಯಮ ವರ್ಗದ ಹಾಗೂ ಪ್ರಾಧ್ಯಾಪಕರಾಗುವ ಕನಸು ಹೊತ್ತವರರೂ ಹಲವರಿದ್ದಾರೆ.












Click it and Unblock the Notifications