ಕೆಸಿ ವ್ಯಾಲಿ ಕಲುಷಿತ ನೀರು: ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಆಗಸ್ಟ್ 16: ಕೆಸಿ ವ್ಯಾಲಿ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಸೆಪ್ಟೆಂಬರ್ 11ರವರೆಗೆ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸದಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ನೀರಿನ ಗುಣಮಟ್ಟ ಕುರಿತ ತಜ್ಞರ ಸಮಗ್ರ ವರದಿ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಿ, ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ. ಒಂದೊಮ್ಮೆ ಕೆಸಿ ವ್ಯಾಲಿ ಯೋಜನೆಯನ್ನೇ ಕೈಬಿಡುವುದಾದರೆ ಅದಕ್ಕಾಗಿ ಬಳಕೆ ಮಾಡಿರುವ 1300 ಕೋಟಿ ರೂ. ಸಾರ್ವಜನಿಕರ ಹಣದ ಕತೆ ಏನು? ಯಾರ ಮೇಲೆ ಅದರ ಜವಾಬ್ದಾರಿ ಹೊರಿಸಬಹುದು ಎಂಬುದರ ಬಗ್ಗೆಯೂ ಚಿಂತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.

ಈ ಬಗ್ಗೆ ವಿವರವಾದ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ, ಅಲ್ಲಿಯವರೆಗೆ ನೀರು ಹರಿಸದಂತೆ ಮಧ್ಯಂತರ ಆದೇಶ ಮುಂದುವರೆಸಿದೆ. ನರಸಾಪುರ ಗ್ರಾಮ ಪಂಚಾಯ್ತಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಅರ್ಜಿದಾರರ ಪರ ವಕೀಲರಿಂದ ಕರಪತ್ರದ ಪ್ರಸ್ತಾಪ ಮಾಡಿದರು. ಅಷ್ಟೇ ಅಲ್ಲದೆ ಸೆ.11ರಂದು ಕೆಸಿ ವ್ಯಾಲಿ ನೀರಿನ ಶುದ್ಧತೆ, ಗುಣಮಟ್ಟದ ಕುರಿತು ದಾಖಲೆ ನೀಡಿ ಇಲ್ಲವಾದರೆ ದಂಡ ಕಟ್ಟಲು ಸಿದ್ಧರಾಗಿ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.












Click it and Unblock the Notifications