ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಟೆರರಿಸಂ ತನಿಖೆ: ಎನ್ಐಎನಿಂದ ವಿಳಂಬ ನೀತಿ?

By ವಿಕಾಸ್ ನಂಜಪ್ಪ
|
Google Oneindia Kannada News

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೇಕೋ ಕರ್ನಾಟಕದ ಪ್ರಕರಣಗಳ ಬಗ್ಗೆ ಅಸಡ್ಡೆ ಇದ್ದಂತೆ ತೋರುತ್ತಿದೆ. ಏನು ಕಾರಣವೋ ಏನೋ ನಮ್ಮಲ್ಲಿನ ಪ್ರಕರಣಗಳ ತನಿಖೆ ಚುರುಕುಗೊಳ್ಳುವುದೇ ಕಡಿಮೆ.

ಮಲ್ಲೇಶ್ವರಂ, ಚರ್ಚ್ ಸ್ಟ್ರೀಟ್ ಸ್ಫೋಟ, ಮೆಹದಿ ಪ್ರಕರಣ ಅಥವಾ ಭಟ್ಕಳದ ಭಯೋತ್ಪಾದನೆ ವಿಷಯ ಆಗಿರಬಹುದು ಎಲ್ಲವೂ ರಾಷ್ಟ್ರೀಯ ತನಿಖಾ ದಳದ ವಿಚಾರಣೆ ಹಂತದ ಕೇಸ್ ಗಳೇ ಆಗಿವೆ. ಮಲ್ಲೇಶ್ವರ ಹಾಗೂ ಚರ್ಚ್ ಸ್ಟ್ರೀಟ್ ಬಳಿ ಬಂದು ಮಾಹಿತಿ ಕಲೆ ಹಾಕಿಕೊಂಡು ಹೋದ ತನಿಖಾಧಿಕಾರಿಗಳು ಮತ್ತೆ ಸುಳಿದಿಲ್ಲ.

ಮಲ್ಲೇಶ್ವರ ಸ್ಫೋಟ ಪ್ರಕರಣ
ಅಸೆಂಬ್ಲಿ ಚುನಾವಣೆಗೂ ಮುನ್ನ ಬಿಜೆಪಿ ಕೇಂದ್ರ ಕಚೇರಿ ಸಮೀಪದಲ್ಲಿ ನಡೆದ ಸ್ಫೋಟದ ತನಿಖೆಯನ್ನು ಬೆಂಗಳೂರು ಪೊಲೀಸರು ಕೈಗೆತ್ತಿಕೊಂಡಿದ್ದರು. ಅದರೆ, ಎನ್ ಐಎ ತಂಡ ಕೂಡಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡು ದೆಹಲಿಗೆ ಹಿಂತಿರುಗಿತ್ತು.

ಘಟನೆಗೆ ಕಾರಣವಾದ ಸ್ಫೋಟಕಗಳ ಮಾಹಿತಿ ಸಂಗ್ರಹಿಸಿ ತನ್ನ ಡೇಟಾ ಬ್ಯಾಂಕಿಗೆ ಸೇರಿಸಿದ್ದು ಬಿಟ್ಟರೆ ಮತ್ತೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬರಲಿಲ್ಲ. ಎನ್ ಐಎ ನೆರವು ಬೇಕಾದರೆ ಕೇಳುವುದಾಗಿ ಕರ್ನಾಟಕ ಸರ್ಕಾರ ಅಂದೇ ಘೊಷಿಸಿತ್ತು. ಅದರೆ, ಎನ್ಐಎ ಮತ್ತೆ ತನಿಖೆಯಲ್ಲಿ ಹೆಚ್ಚಿನ ಉತ್ಸಾಹ ತೋರಿದ್ದು ಕಂಡು ಬರಲಿಲ್ಲ.

Karnataka terror- Why is the NIA always missing in action?

ಮೆಹ್ದಿ ಮಸ್ರೂರ್ ಪ್ರಕರಣ
ಐಎಸ್ಐಎಸ್ ಉಗ್ರ ಸಂಘಟನೆ ಪರ @shammiwitness ಎಂಬ ಖಾತೆ ಬಳಸಿ ಟ್ವೀಟ್ ಮಾಡುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಐಎಸ್ಐಎಸ್ ಕೊಂಡಿ ಇರುವ ಈ ಪ್ರಕರಣವನ್ನು ಎನ್ ಐಎ ತಂಡ ಕೈಗೆತ್ತಿಕೊಂಡಾಗ ಇರಾಕಿನಿಂದ ಆಗಷ್ಟೇ ಬಂದಿದ್ದ ಅರೀಫ್ ಮಾಜೀದ್ ಕೇಸ್ ವಿಚಾರಣೆ ನಡೆಸುತ್ತಿತ್ತು. ಮಾಜೀದ್ ಭಾರತವನ್ನು ಬಿಟ್ಟು ಐಎಸ್ ಐಎಸ್ ಸೇರಿದ್ದವನು ರಕ್ತ ಸಿಕ್ತವಾಗಿ ಮನೆಗೆ ಹಿಂತಿರುಗಿದ್ದ.

ಬೆಂಗಳೂರು ಪೊಲೀಸ್ ಹಾಗೂ ಎನ್ಐಎ ನಡುವಿನ ಗೊಂದಲದಿಂದಾಗಿ ಮೆಹ್ದಿ ಟ್ವೀಟ್ ಜಾಲ ಪತ್ತೆ ವಿಳಂಬವಾಯಿತು. ಎನ್ ಐಎ ತನಿಖೆಯಿಂದ ಹಿಂದೆ ಸರಿಯುವಂತೆ ಕಂಡಿತು.

ಸಾಮಾನ್ಯ ಕ್ರೈಂ ತನಿಖೆ ವಿಧಾನವನ್ನು ಅನುಸರಿಸದೆ ಬದಲಿ ಮಾರ್ಗ ಅನುಸರಿಸಿದ್ದು ತನಿಖಾಧಿಕಾರಿಗಳಿಗೆ ಕೈಕೊಟ್ಟಿತು. ಮೆಹ್ದಿ ನಮ್ಮ ವಶಕ್ಕೆ ಬೇಡ ಎಂದು ತನಿಖಾಧಿಕಾರಿಗಳು ಹೇಳಿದ್ದರಿಂದ ಈಗ ಮೆಹ್ದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

English summary
The National Investigating Agency is the premier agency of the country to investigate matters pertaining to terrorism. While it has taken over the probe in several states affected by terrorism for some strange reason it is missing in action when it comes to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X