KSDL: ಸೋಪ್-ಡಿಟರ್ಜೆಂಟ್ಸ್ ಮಾರಾಟದಲ್ಲಿ 40 ವರ್ಷಗಳ ದಾಖಲೆ ಉಡೀಸ್
ಬೆಂಗಳೂರು, ಜೂನ್ 10: ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್‌ನ ತಯಾರಕ ಕಂಪನಿ 'ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಈ ವರ್ಷ ಅತ್ಯಧಿಕ ಸೋಪುಗಳ ಮಾರಾಟ ಮಾಡುವ ಮುಖೇನ ತನ್ನ 40 ವರ್ಷಗಳ ಗರಿಷ್ಠ ಮಾರಾಟದ ವಹೀವಾಟು ಅನ್ನು ಮೀರಿಸಿ ದಾಖಲೆ ಬರಿದಿದೆ.
ಇದೇ 2024ರ ಮಾರ್ಚ್ ಹೊತ್ತಿಗೆ 1,500 ಕೋಟಿ ರೂ.ಗೂ ಹೆಚ್ಚು ವಹೀವಾಟು ಮಾಡಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಅತ್ಯಧಿಕ ಏರಿಕೆ ಆಗಿದೆ. ಒಟ್ಟು ಈ ವರ್ಷ ಕೆಎಸ್‌ಡಿಎಲ್ ತನ್ನ ವಹೀವಾಟನ್ನು 195 ಕೋಟಿ ರೂ. ಹೆಚ್ಚಿಸಿಕೊಳ್ಳುವ ಮೂಲಕ ಪ್ರಸಕ್ತ ಸಾಲಿನಲ್ಲಿ ಕಂಪನಿ ಶೇಕಡಾ 14.25 ರಷ್ಟು ಬೆಳವಣಿಗೆ ಸಾಧಿಸಿದೆ.

KSDL ಮೈಸೂರು ಸ್ಯಾಂಡಲ್ ವೇವ್ ಡಿಯೋ ಸೋಪ್, ಶವರ್ ಜೆಲ್‌ಗಳು, ಗ್ಲಿಸರಿನ್ ಆಧಾರಿತ ಪಾರದರ್ಶಕ ಸ್ನಾನದ ಬಾರ್ ಮತ್ತು ಸೂಪರ್ ಪ್ರೀಮಿಯಂ ಬಾತ್ ಸೋಪ್ ಸೇರಿದಂತೆ 21 ಹೊಸ ಉತ್ಪನ್ನಗಳ ಬಿಡುಗಡೆ ಮಾಡಿ ಮಾರಾಟ ಮಾಡಿದೆ. ಇದು ವಹೀವಾಟು ಪ್ರಗತಿಗೆ ಹೆಚ್ಚು ಸಹಕಾರಿಯಾಗಿದೆ.
ಬೇಡಿಕೆ ಆದ್ಯತೆಗೆ ತಕ್ಕಂತೆ ಉತ್ಪಾದನೆ
100 ಗ್ರಾಂನ ಮೈಸೂರು ಸ್ಯಾಂಡಲ್ ಮಿಲೇನಿಯಂ ಗೋಲ್ಡ್‌ಗೆ 1,000 ರೂಪಾಯಿ ಇದೆ. ಸಾಬೂನುಗಳಲ್ಲಿ ಶುದ್ಧ ಶ್ರೀಗಂಧದ ಎಣ್ಣೆಯನ್ನು ಬಳಸುವುದಕ್ಕೆ ಕಂಪನಿ ಹೆಸರುವಾಸಿಯಾಗಿದೆ. ಯುವಕರ ಬೇಡಿಕೆ ಹಾಗೂ ಆದ್ಯತೆಗಳ ಪೂರೈಕೆ ನಿಟ್ಟಿನಲ್ಲಿ ಅತ್ಯಧಿಕ ಉತ್ಪಾದನೆ ಮಾಡಲಾಗಿದೆ ಎಂದು TNIE ವರದಿ ಮಾಡಿದೆ.

ಕಂಪನಿಯು ಗ್ಲಿಸರಿನ್ ಆಧಾರಿತ ಉತ್ಪನ್ನಗಳದ್ದೆ ಪ್ರತ್ಯೇಕ ಸೋಪ್ ಬೇಸ್ ಸಿದ್ಧಪಡಿಸುತ್ತಿದೆ. ಇನ್ನೂ ಕಂಪನಿಯು ಅದರ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಲು ಯಂತ್ರೋಪಕರಣಗಳನ್ನು ಬಳಸುತ್ತಿದೆ. ಹೀಗೆ ಯಂತ್ರೋಪಕರಣಗಳ ಬಳಕೆ ಮೂಲಕ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ.
KSDL ವ್ಯವಸ್ಥಾಪಕ ಪ್ರತಿಕ್ರಿಯೆ
ಕಂಪನಿ ಪ್ರಗತಿ ಕುರಿತು ಮಾತನಾಡಿದ KSDL ಎಂಡಿ ಡಾ.ಪ್ರಶಾಂತ್ ಪಿಕೆಎಂ ಅವರು, ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಉತ್ತಮ ಯಂತ್ರೋಪಕರಣಗಳು ಬಳಸಲಾಗುವುದು. ಅದಕ್ಕಾಗಿ ಜಾಗ ಹುಡುಕುತ್ತಿದ್ದು, ಹೊಸ ಘಟಕ ಸ್ಥಾಪಿಸುವ ಚಿಂತನೆ ಇದೆ ಎಂದರು.
ಸೋಪುಗಳ ಇನ್ನಿತರ ಮಾರಾಟ ಮಾರುಕಟ್ಟೆಯಲ್ಲಿ ಕೆಎಸ್‌ಡಿಎಲ್ ಕೇವಲ 2.5ರಷ್ಟು ಪಾಲು ಹೊಂದಿದೆ. ಹೀಗಾಗಿ ಭವಿಷ್ಯದಲ್ಲಿ ತನ್ನ ವ್ಯಾಪಾರ ವಿಸ್ತರಣೆ ದೃಷ್ಟಿಯಿಂದ ಉತ್ತರ ಭಾರತದ ರಾಜ್ಯಗಳ ಮೇಲೆ ಕೇಂದ್ರೀಕರಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಆಯ್ಕೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೆಎಸ್‌ಡಿಎಲ್‌ನ ಹೆಚ್ಚಿನ ಮಾರಾಟವು ಪ್ರಸ್ತುತ ದಕ್ಷಿಣದ ರಾಜ್ಯಗಳಲ್ಲಿ ಶೇಕಡಾ 81ರಷ್ಟಿದೆ. ಮೈಸೂರು ಸ್ಯಾಂಡಲ್ ವೇವ್ ಅರಿಶಿನ ಸೋಪ್ ಅನ್ನು ಉತ್ತಮ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತು ನೈಸರ್ಗಿಕ ಅರಿಶಿನದಿಂದ ರಚಿಸಲಾಗಿದೆ. ಇದು ಪುದೀನ ಸುಗಂಧ ಹೊಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications