ರಾಜ್ಯದಲ್ಲಿ ಮತ್ತೆ 9 ಹೊಸ ಕೇಸ್ ಪತ್ತೆ, ಕಲಬುರಗಿಯಲ್ಲೆ 8 ಸೋಂಕು

ಬೆಂಗಳೂರು, ಏಪ್ರಿಲ್ 29: ರಾಜ್ಯದಲ್ಲಿಂದು ಮತ್ತೆ 9 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಇಂದು ಮಧ್ಯಾಹ್ನ ಆರೋಗ್ಯ ಇಲಾಖೆ ಮಾಧ್ಯಮ ಪ್ರಕಟಣೆ ಮಾಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.

ಹೊಸ 9 ಪ್ರಕರಣಗಳ ಪೈಕಿ ಕಲಬುರಗಿಯಲ್ಲಿ 8 ಪ್ರಕರಣ ಪತ್ತೆಯಾಗಿದೆ. ಇನ್ನೊಂದು ಪ್ರಕರಣ ಬೆಳಗಾವಿಯಲ್ಲಿ ವರದಿಯಾಗಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ಈವರೆಗೆ 215 ಜನರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 20 ಜನರ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಕಲಬುರಗಿಯ 425ನೇ ರೋಗಿ ಸಂಪರ್ಕದಲ್ಲಿದ್ದ 4 ಜನರಿಗೆ ಇಂದು ಕೊವಿಡ್ ಸೋಂಕು ಖಚಿತವಾಗಿದೆ. ಈ ರೋಗಿಯ ಸಂಪರ್ಕದಲ್ಲಿದ್ದ ಆರು ಮಂದಿಗೆ ನಿನ್ನೆ ಸೋಂಕು ದೃಢವಾಗಿತ್ತು. ಕಲಬುರಗಿ ಪಾಲಿಗೆ 425ನೇ ರೋಗಿ ಅಪಾಯವಾಗಿ ಪರಿಣಮಿಸಿದ್ದಾರೆ.

Karnataka COVID19 Cases Rise To 532

ಸಿಲಿಕಾನ್ ಸಿಟಿ ಬೆಂಗಳೂರು ಪಾಲಿಗೆ ಇಂದು ಕೂಡ ರಿಲೀಫ್ ಸಿಕ್ಕಿದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ ಬೆಂಗಳೂರಿನಲ್ಲಿ ಯಾವುದೇ ಹೊಸ ಕೇಸ್ ವರದಿಯಾಗಿಲ್ಲ.

ಇನ್ನು ರಾಜ್ಯದಲ್ಲಿ ವಲಯವಾರು ಲಾಕ್‌ಡೌನ್‌ ಸಡಿಲಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ರೆಡ್‌ಜೋನ್‌ನಲ್ಲಿರುವ ಬೆಂಗಳೂರು, ಕಲಬುರಗಿಗೆ ಯಾವುದೇ ವಿನಾಯಿತಿ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+