ಕರ್ನಾಟಕದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್‌: ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆ

ಬೆಂಗಳೂರು, ಡಿಸೆಂಬರ್‌, 16: ಕರ್ನಾಟದಲ್ಲಿ ಇನ್ನೂ ಐವರಿಗೆ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಏರಿಕೆ ಆಗಿದೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್‌ ಮಾಹಿತಿ ನೀಡಿದ್ದಾರೆ, ಗುರುವಾರ ಟ್ವೀಟ್‌ ಮಾಡಿರುವ ಸುಧಾಕರ್‌, "ಕರ್ನಾಟಕದಲ್ಲಿ ಇಂದು ಇನ್ನೂ ಐದು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ," ಎಂದು ತಿಳಿಸಿದ್ದಾರೆ.

"ರಾಜ್ಯದಲ್ಲಿ ಇನ್ನೂ ಐವರಲ್ಲಿ ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಯುಕೆಯಿಂದ ವಾಪಾಸ್‌ ಬಂದ 19 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ವಾಪಾಸ್‌ ಬಂದ 36 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ಬಂದ 70 ವರ್ಷದ ಮಹಿಳೆಯಲ್ಲಿ, ನೈಜಿರಿಯಾದಿಂದ ಬಂದ 52 ವರ್ಷದ ವ್ಯಕ್ತಿಯಲ್ಲಿ, ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ," ಎಂದು ಕೆ ಸುಧಾಕರ್‌ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಓಮಿಕ್ರಾನ್‌ ಪ್ರಕರಣ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಂಡು ಬಂದಿದೆ. ಈ ಮೂಲಕ ದೇಶದಲ್ಲೇ ಮೊದಲು ಆತಂಕ ಸೃಷ್ಟಿಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಕಂಡು ಬಂದಿತ್ತು.

Karnataka Reports 5 More Cases of Omicron, State Tally Rises to 8

ದಕ್ಷಿಣ ಆಫ್ರಿಕಾದಿಂದ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದಿರುವ 66 ವರ್ಷದ ಓರ್ವ ವೃದ್ಧ ಹಾಗೂ 46 ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದಿತ್ತು. ಓಮಿಕ್ರಾನ್ ಪ್ರಕರಣ ಪತ್ತೆ ಹಚ್ಚಲು ಜಿನೋಮ್ ಪರೀಕ್ಷೆ ಸೇರಿದಂತೆ ಹೆಚ್ಚಿನ ತಪಾಸಣೆಗೆ ಸ್ಯಾಂಪಲ್ ಗಳನ್ನು ಕಳಿಸಲಾಗಿತ್ತು. ಇಂದು(ಡಿ.2) ಓಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ದೇಶದಲ್ಲಿ ಹೇಗಿದೆ ಓಮಿಕ್ರಾನ್‌ ಪರಿಸ್ಥಿತಿ?

ಇಂದು ಕರ್ನಾಟಕ, ದೆಹಲಿ ಮತ್ತು ಗುಜರಾತ್ ಒಟ್ಟಾಗಿ ಇಂದು 10 ಹೊಸ ಓಮಿಕ್ರಾನ್ ಪ್ರಕರಣ ದೇಶದಲ್ಲಿ ವರದಿ ಆಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಪ್ರಕಣಗಳ ಸಂಖ್ಯೆಯು 83 ಕ್ಕೆ ತಲುಪಿದೆ. ಕರ್ನಾಟಕದಲ್ಲಿ ಐವರಲ್ಲಿ, ದೆಹಲಿಯಲ್ಲಿ ನಾಲ್ವರಲ್ಲಿ ಹಾಗೂ ಗುಜರಾತ್‌ನಲ್ಲಿ ಒಬ್ಬರಲ್ಲಿ ಓಮಿಕ್ರಾನ್‌ ಪ್ರಕರಣ ಕಾಣಿಸಿಕೊಂಡಿದೆ. ಈ ಮೂಲದ ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ, ದೆಹಲಿಯಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಹತ್ತಕ್ಕೆ ಏರಿಕೆ ಆಗಿದೆ ಹಾಗೂ ಗುಜರಾತ್‌ನಲ್ಲಿ ಓಮಿಕ್ರಾನ್‌ ಪ್ರರಕಣಗಳ ಸಂಖ್ಯೆಯು ಐದಕ್ಕೆ ಏರಿಕೆ ಕಂಡಿದೆ.

ಮಹಾರಾಷ್ಟ್ರದಲ್ಲಿ ಇದುವರೆಗೆ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 32, ರಾಜಸ್ಥಾನದಲ್ಲಿ 17 ಪ್ರಕರಣಗಳು ವರದಿಯಾಗಿವೆ. ಕರ್ನಾಟಕ 8, ಗುಜರಾತ್ 5, ಕೇರಳ 5, ತೆಲಂಗಾಣ 2, ತಮಿಳುನಾಡು 1, ಪಶ್ಚಿಮ ಬಂಗಾಳ 1 ಪ್ರಕರಣ ವರದಿ ಆಗಿದೆ. ಆಂಧ್ರಪ್ರದೇಶ 1, ದೆಹಲಿ 10, ಮತ್ತು ಚಂಡೀಗಢ 1 ಓಮಿಕ್ರಾನ್‌ ಕಾಣಿಸಿಕೊಂಡಿದೆ.

ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಇದುವರೆಗೆ 10 ಜನರಲ್ಲಿ ಓಮಿಕ್ರಾನ್ ರೂಪಾಂತರವನ್ನು ಪತ್ತೆಹಚ್ಚಲಾಗಿದೆ ಮತ್ತು ಅವರಲ್ಲಿ ಯಾರೂ "ತೀವ್ರ" ರೋಗವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಅನೇಕ ಅಂತರಾಷ್ಟ್ರೀಯ ಪ್ರಯಾಣಿಕರು ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಎಂಟು ಮಂದಿಯನ್ನು ನಾವು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಗುಜರಾತ್‌ನಲ್ಲಿ, ಮೆಹ್ಸಾನಾ ಜಿಲ್ಲೆಯ ವಿಜಾಪುರ ತೆಹ್ಸಿಲ್‌ನ ಹಳ್ಳಿಯೊಂದರಲ್ಲಿ ಗುರುವಾರ 41 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+