ಕರ್ನಾಟಕ ರಕ್ಷಣಾ ವೇದಿಕೆಯ ಭಿತ್ತಿಪತ್ರ ಚಳವಳಿಯ ಉದ್ದೇಶ

ಬೆಂಗಳೂರು, ಡಿಸೆಂಬರ್ 31: ಕರ್ನಾಟಕ ರಕ್ಷಣಾ ವೇದಿಕೆಯ ಭಿತ್ತಿಪತ್ರ ಚಳವಳಿ ಬಗ್ಗೆ ಉದ್ದೇಶವೇನು, ಯಾವ ಕಾರಣಕ್ಕಾಗಿ ಚಳವಳಿಯನ್ನು ಹಮ್ಮಿಕೊಂಡಿದ್ದಾರೆ ಎಂದು ಸಾಕಷ್ಟು ಮಂದಿಗೆ ಇನ್ನೂ ತಿಳಿದಿಲ್ಲ.

ಈ ಚಳುವಳಿಗೆ ಅನೇಕರು ಕರವೇ ಪರ ಕೈ ಜೋಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿಯೂ ಕನ್ನಡ ಉಳಿಸಿ ಎಂಬ ದೊಡ್ಡ ಅಭಿಯಾನ ನಡೆಯಿತು.

ಇದಕ್ಕೆ ಅನೇಕ ಗಣ್ಯರು ಬೆಂಬಲವನ್ನು ವ್ಯಕ್ತಪಡಿಸಿದರು. ಹಂಪಿ ವಿಶ್ವವಿದ್ಯಾಲಯದ ಎಲ್ಲರಿಗೂ ಗೊತ್ತು ಆದರೆ ಈಗಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಅರಿವಿದೆ, ಪ್ರಪಂಚದಲ್ಲಿ ಇರುವ ಒಂದೇ ಒಂದು ಕನ್ನಡ ವಿವಿ ಎಂದರೆ ಅದು ಹಂಪಿ ವಿಶ್ವವಿದ್ಯಾಲಯ. ಇತಿಹಾಸದಲ್ಲಿ ಹಂಪಿಯ ವಿಜಯನಗರ ಶ್ರೀಕೃಷ್ಣದೇವರಾಯಾರು ಇದ್ದಂತಹ ಶ್ರೀಮಂತ ಸಾಮ್ರಾಜ್ಯದಲ್ಲಿ ಇಂದು ನಮ್ಮ ನಾಡ ಭಾಷೆ ಕನ್ನಡ ವಿವಿಯನ್ನು ಉಳಿಸಲು ಹೋರಾಟ ಮಾಡುವ ಸಂದರ್ಭ ಬಂದಿದೆ ಎನ್ನುವುದು ಬಹಳ ದುಃಖದ ವಿಷಯ.

Karnataka Rakshana Vedike Poster Movement Objectives

ಕೆಲವು ಮೂಡ ಜನರು ಕರವೇಯು ಸರ್ಕಾರದ ವಿರುದ್ಧ ಚಳುವಳಿ ಮಾಡುತ್ತಿದೆ ಎಂಬ ತಪ್ಪು ಕಲ್ಪನೆಯಲ್ಲಿ ಇದ್ದಾರೆ. ಆದರೆ ಕರವೇ ಯು ಹೋರಾಡುತ್ತಿರುವುದು ಕನ್ನಡವನ್ನು ಉಳಿಸುವುದಕ್ಕಾಗಿ ಮತ್ತು ಅಲ್ಲಿನ ಸಂಶೋಧನಾ ವಿಧ್ಯಾರ್ಥಿಗಳಿಗೆ ಹಾಗೂ ವೇತನೆ ಸಿಗದೆ ಪರದಾಡುತ್ತಿರುವ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಂದು ಜನರು ಅರ್ಥ ಮಾಡಿಕೊಳ್ಳಬೇಕು.

ಈಗಾಗಲೇ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಕೋರಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗು ಹಂಪಿ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ಕರವೇ ತಂಡ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಸಚಿವರ ಆಶ್ವಾಸನೆ ಪ್ರಕಾರ ಇನ್ನು ಯಾವ ಕೆಲಸವೂ ಆಗಿಲ್ಲ. ಸಚಿವರು ಕೇಳಿದ ಸಮಯ ಅನುದಾನ ಕೊಡಲಿಲ್ಲ ಅಂದರೆ ಕನ್ನಡಿಗರಿಂದ ಹೋರಾಟ ಅನಿವಾರ್ಯ.

Recommended Video

      ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದ Umesh Yadaw ಸರಣಿಯಿಂದ ಹೊರಕ್ಕೆ | Oneindia Kannada

      ಈ ಭಿತ್ತಿಪತ್ರ ಚಳುವಳಿಯು 2020ರ ಡಿಸೆಂಬರ್ 22ರಂದು ನಾಡಿನ ಖ್ಯಾತ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪನವರ ಮಾತಿನೊಂದಿಗೆ ಅಭಿಯಾನ ಆರಂಭವಾಯಿತು.
      ನಾಡಿನ ಹೆಸರಾಂತ ಸಾಹಿತಿಗಳು, ಗಣ್ಯರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಹೀಗೆ ನಮ್ಮ ಏಕೈಕ ಕನ್ನಡ ವಿವಿಯನ್ನು ಎಲ್ಲರೂ ಒಂದಾಗಿ ಹೋರಾಡಿ ಉಳಿಸೋಣ ಕನ್ನಡವನ್ನು ಬೆಳೆಸೋಣ. ದಿವ್ಯಶ್ರೀ, ಬೆಂಗಳೂರು

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+