ಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಜುಲೈ 2: ರೋಗಲಕ್ಷಣ ರಹಿತ ಹಾಗೂ ಕಡಿಮೆ ರೋಗಲಕ್ಷಣ ಹೊಂದಿದ ಕೊರೊನಾ ವೈರಸ್ ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಪ್ರಕಟಿಸಿದೆ.

Recommended Video

      ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

      ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಪ್ರಕಾರ, ತೀವ್ರ ಸೋಂಕಿನಿಂದ ಬಳುತ್ತಿರುವ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಅನಿವಾರ್ಯವೆನಿಸುವಂತಹ ವ್ಯಕ್ತಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

      -ರೋಗಲಕ್ಷಣ ರಹಿತ ಹಾಗೂ ಕಡಿಮೆ ರೋಗ ಲಕ್ಷಣ ಹೊಂದಿರುವವರು ಹೋಮ್ ಐಸೋಲೇಶನ್‌ಗೆ ಒಳಪಡುತ್ತಾರೆ.

      Karnataka Govt Released Guidelines To Home Isolation For Asymptomatic Patients

      - ಇವರು ಮನೆಯಲ್ಲಿ ಉಳಿದುಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಬೇಕು.

      - ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿಯ ಆರೋಗ್ಯ ತಂಡವು ಮನೆಗೆ ಭೇಟಿ ನೀಡಿ ಅದರ ಮೌಲ್ಯಮಾಪನ ಮಾಡಬೇಕು. ಮನೆಯ ಪ್ರತ್ಯೇಕತೆಗೆ ಸೂಕ್ತತೆ ಮತ್ತು ರೋಗಿಯ ಚಿಕಿತ್ಸೆಯ ಸರದಿ ನಿರ್ಧಾರ ಮಾಡಬೇಕು.

      - ರೋಗಿಯ ದೈನಂದಿನ ವಿವರಗಳಿಗಾಗಿ ಟೆಲಿ ಸಮಾಲೋಚನೆ ಲಿಂಕ್ ಬಳಸಲಾಗುವುದು.

      - ರೋಗಿಯು ತಮ್ಮ ಪ್ರತಿದಿನದ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯ / ಆರೋಗ್ಯ ಅಧಿಕಾರಿಗಳಿಗೆ ವರದಿ ನೀಡಬೇಕು.

      - ಮನೆಯ ಪ್ರತ್ಯೇಕತೆಯ ಸಮಯದಲ್ಲಿ ರೋಗಿಯು ನಾಡಿ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಮತ್ತು ಪಿಪಿಇ ಕಿಟ್‌ (ಮಾಸ್ಕ್, ಗ್ಲೌಸ್) ಬಳಸಬೇಕು.

      - ಹೋಮ್ ಐಸೋಲೇಷನ್‌ನಿಂದ ರೋಗಿಯನ್ನು ಬಿಡುಗಡೆಗೊಳಿಸುವ ವೇಳೆ ಡಿಸ್ಚಾರ್ಜ್ ಪ್ರೋಟೋಕಾಲ್ ಅನುಸರಿಸಬೇಕು.

      - 17 ದಿನಗಳ ಮನೆಯಲ್ಲಿ ಐಸೋಲೇಷನ್ ಕಡ್ಡಾಯ

      - ರೋಗಿಯ ಕುಟುಂಬ, ನೆರೆಹೊರೆಯ ಬಗ್ಗೆಯೂ ಆರೋಗ್ಯ ಅಧಿಕಾರಿಗಳು ಕಾಳಜಿ ಹೊಂದಿರಬೇಕು

      - 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೋಮ್ ಐಸೋಲೇಷನ್ ಮಾಡಬಹುದು.

      - ಕೊರೊನಾ ಜೊತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಇದಕ್ಕೆ ಒಳಪಡಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+