Get Updates
Get notified of breaking news, exclusive insights, and must-see stories!

Breaking: ಬಿಬಿಎಂಪಿ ಮತದಾರರ ಪಟ್ಟಿ ತಯಾರಿಸಲು ಚುನಾವಣಾಧಿಕಾರಿಗಳ ನೇಮಕ

ಬೆಂಗಳೂರು ಜುಲೈ 22: ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್‌ಗಳನ್ನು 197ರಿಂದ 243 ವಾರ್ಡ್‌ಗಳಿಗೆ ಮರುವಿಂಗಡಿಸಿದ ಬೆನ್ನಲ್ಲೆ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಸರ್ಕಾರ ನಿಗಧಿತ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಸಲುವಾಗಿ ರಾಜ್ಯ ಚುನಾವಣಾ ಆಯೋಗವು ಸೂಚಿಸಿರುವ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರ ನೇಮಿಸಿರುವ ಅಧಿಕಾರಿಗಳು ಆಯಾ ವಿಧಾನಸಭಾಕ್ಷೇತ್ರ, ವಾರ್ಡ್‌ಗಳಲ್ಲಿ ಚುನಾವಣೆ ಸಿದ್ಧತೆ ಕುರಿತು ಕಾರ್ಯ ನಿರ್ವಹಿಸಲಿದ್ದಾರೆ.

ವಾರ್ಡಗಳ ಪ್ರದೇಶಕ್ಕೆ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳು ಎಂದು ಅಧಿಕಾರಿಗಳನ್ನು ನೇಮಕ ಮಾಡಿದೆ. ಅವರು ತಮ್ಮ ವ್ಯಾಪ್ತಿಯಲ್ಲಿಬರುವ ವಾರ್ಡವಾರು ಮತದಾರ ಪಟ್ಟಿ ತಯಾರಿಸಲು ಮತ್ತು ಚುನಾವಣೆ ಕಾರ್ಯ ವಿದ್ಯುಕ್ತವಾಗಿ ನೆರವೇರಿಸುವಂತೆ ಆದೇಶದ ಮೂಲಕ ಸರ್ಕಾರ ತಿಳಿಸಿದೆ.

Karnataka govt appointment of officers to prepare BBMP ward wise voter list

ಅಧಿಕಾರಿಗಳ ನೇಮಕಾತಿ ಹೀಗಿದೆ

ಆದೇಶದ ಪ್ರಕಾರ, ಬಿಬಿಎಂಪಿ ವಿಶೇಷ ಆಯುಕ್ತರ ವ್ಯಾಪ್ತಿಯಲ್ಲಿ ವಿಧಾನ ಸಭಾಕ್ಷೇತ್ರಗಳಾದ ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆಗಳು ಬರಲಿವೆ.

ಜಂಟಿ ಆಯುಕ್ತರು (ದಕ್ಷಿಣ) ವ್ಯಾಪ್ತಿಯಲ್ಲಿ ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬರುವಂತೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Karnataka govt appointment of officers to prepare BBMP ward wise voter list

ಇನ್ನು ಮಹಾದೇವಪುರ ವಲಯದ ಜಂಟಿ ಆಯುಕ್ತರ ಅಡಿಯಲ್ಲಿ ಕೆ.ಆರ್.ಪುರಂ, ಮಹಾಲಕ್ಷ್ಮೀ ಬಡಾವಣೆ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞ ನಗರ, ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಅದೇ ರೀತಿ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಕ್ಷೇತ್ರಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Recommended Video

      India vs West Indies: ಪಂದ್ಯದ ನಂತರ ಶಿಖರ ಧವನ್ ಮತ್ತು ನಿಕೋಲಸ್ ಪೂರನ್ ಏನ್ ಹೇಳಿದ್ರು? | *Cricket | OneIndia

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+