Get Updates
Get notified of breaking news, exclusive insights, and must-see stories!

ರಾಜ್ಯಾದ್ಯಂತ ಡಾ ರಾಜ್ ಜನ್ಮದಿನಾಚರಣೆ: ಸಿದ್ದರಾಮಯ್ಯ

ಮುಂದಿನ ವರ್ಷದಿಂದ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ರಾಜಕುಮಾರ್ ಅವರ ಜನ್ಮ ದಿನಾಚರಣೆ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಘೋಷಿಸಿದರು.

ಬೆಂಗಳೂರು, ಏಪ್ರಿಲ್ 24: ಮುಂದಿನ ವರ್ಷದಿಂದ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ರಾಜಕುಮಾರ್ ಅವರ ಜನ್ಮ ದಿನಾಚರಣೆ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಘೋಷಿಸಿದರು.

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ ರಾಜ್ ಕುಮಾರ್ ಅವರ ಛಾಯಾಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಪುನೀತ್ ರಾಜ್ ಕುಮಾರ್, ಹಿರಿಯ ನಟಿ ಜಯಂತಿ, ಜೀವಿತಾವಧಿ ಸಾಧನೆ ಮಾಡಿರುವ ಹಿರಿಯ ನಟಿ ಆದವಾನಿ ಲಕ್ಷ್ಮಿದೇವಿ, ಅವರು ಕೂಡಾ ಪುಷ್ಪನಮನ ಸಲ್ಲಿಸಿದರು.

Karnataka Government to observe Dr. Raj Jayanti : Siddaramaiah

ಗುಣಮಟ್ಟದ ಚಿತ್ರಗಳು ಬರಲಿ: ಕನ್ನಡ ಚಲನಚಿತ್ರ ರಂಗದಲ್ಲಿ ಇನ್ನೊಬ್ಬ ರಾಜ್ ಕುಮಾರ್ ಹುಟ್ಟಲು ಸಾಧ್ಯವಿಲ್ಲ.ಅಂತಹ ಮೇರು ನಟರಾಗಿದ್ದರು ಡಾ ರಾಜ್ ಕುಮಾರ್. ಚಲನಚಿತ್ರಗಳಲ್ಲಿ ಸಾಮಾಜಿಕ ಕಳಕಲಿ ಇರಬೇಕು.

ಒಳ್ಳೆ ಚಿತ್ರ, ಗುಣಮಟ್ಟದ ಚಿತ್ರಗಳು ಬಂದಾಗ ಸಮಾಜದಲ್ಲಿ ಅವು ಬದಲಾವಣೆಗಳನ್ನು ಸಾಮಾಜಿಕ ಕಳಕಳಿ ಉಂಟುಮಾಡುತ್ತದೆ.ಕನ್ನಡ ಚಲನಚಿತ್ರದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಎಲ್ಲ ತರಹದ ಸಹಾಯ ಮಾಡಲು ತಯಾರಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಚಿವರಾದ ಕೆ ಜೆ ಜಾರ್ಜ್,ಉಮಾಶ್ರೀ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+