ಬೆಂಗಳೂರಿನಲ್ಲಿ 'ಉತ್ಕೃಷ್ಟತಾ ಕೇಂದ್ರ, R & D ಪ್ರಯೋಗಾಲಯ' ಸ್ಥಾಪನೆಗೆ ಪ್ರಸ್ತಾವನೆ
ಸ್ಯಾನ್ ಫ್ರಾನ್ಸಿಸ್ಕೋ, ಅಕ್ಟೋಬರ್ 06: ಕರ್ನಾಟಕಕ್ಕೆ ಹೂಡಿಕೆ ಸೆಳೆಯಲು ಅಮೆರಿಕ ಪ್ರವಾಸದಲ್ಲಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಅವರ ನೇತೃತ್ವದ ನಿಯೋಗವು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಉತ್ಕೃಷ್ಟತಾ ಕೇಂದ್ರ ಹಾಗೂ ಆರ್ ಆಂಡ್ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಪ್ರಯೋಗಾಲಯ ಸ್ಥಾಪಿಸುವ ಬಗ್ಗೆ ಚಿಪ್ ತಯಾರಿಕಾ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್ ಜೊತೆ ಬುಧವಾರ ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿಗಳು ಕರ್ನಾಟಕ ಸರ್ಕಾರದ ಬೆಂಬಲ ಕೋರಿದ್ದು, ಪ್ರಯೋಗಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪೂರ್ವಾನುಮತಿಗಳನ್ನು ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಭೇಟಿ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಸೆಮಿಕಂಡಕ್ಟರ್ ಉದ್ಯಮದಲ್ಲಿ ರಾಸಾಯನಿಕಗಳು ಮತ್ತು ಅನಿಲಗಳ ಪ್ರಾಮುಖ್ಯವನ್ನೂ ವಿವರಿಸಿದರು. ಕಂಪನಿಯ ಉನ್ನತಾಧಿಕಾರಿಗಳಾದ ಪ್ರಭು ಜಿ.ರಾಜ ಮತ್ತು ಶ್ರೀನಿವಾಸ ಸತ್ಯ ಅವರು ಉತ್ಕೃಷ್ಟತಾ ಕೇಂದ್ರದ ಬಗ್ಗೆ ವಿಚಾರ ಹಂಚಿಕೊಂಡರು.
4 ವರ್ಷದಲ್ಲಿ 3200 ಕೋಟಿ ರೂ.ಹೂಡಿಕೆ
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಸೆಂಟರ್ ಸ್ಥಾಪಿಸಲು ನಾಲ್ಕು ವರ್ಷಗಳ ಅವಧಿಯಲ್ಲಿ 3200 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಕಂಪನಿ ಕೆಲವು ದಿನಗಳ ಹಿಂದೆ ತಿಳಿಸಿತ್ತು. ಎಂ.ಬಿ ಪಾಟೀಲ ಮತ್ತು ನಿಯೋಗದ ಉಳಿದ ಸದಸ್ಯರು ಆಧುನಿಕ ಚಿಪ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಾಚರಣೆಯನ್ನು ವೀಕ್ಷಿಸಿದರು.
ಜುಪಿಟರ್ ನೆಟ್ವರ್ಕ್ಸ್ ಕಂಪನಿಯೊಂದಿಗೆ ನಡೆದ ಸಭೆಯಲ್ಲಿ ಆರ್ ಅಂಡ್ ಡಿ ವಿಸ್ತರಣೆ ಮತ್ತು ಹಾರ್ಡ್ವೇರ್ ತಯಾರಿಕ,

ಡಿಸೈನ್ ಮತ್ತು ವೈರ್ ಲೆಸ್ ಉತ್ಪನ್ನಗಳಿಗಾಗಿ 2024ರ ಮಾರ್ಚ್ ಹೊತ್ತಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವ ಬಗೆಗೂ ಸಭೆಯಲ್ಲಿ ಸಚಿವರು ಗಮನ ಸೆಳೆದರು.
ವಿವಿಧ ಅಭಿವೃದ್ಧಿ ಬಗೆಗೆ ಚರ್ಚೆ
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಯುವ ಜನತೆಗೆ ಡೇಟಾ ಸೈನ್ಸ್, ಕೃತಕ ಬುದ್ಧಿಮತ್ತೆ, ಐಒಟಿ ಮತ್ತು ಸೈಬರ್ ಸೆಕ್ಯುರಿಟಿ ವಿಷಯಗಳಲ್ಲಿ ಕೌಶಲ್ಯಗಳನ್ನು ಕಳಿಸಿ ತರಬೇತಿ, ಹಾರ್ಡ್ ಡಿಸ್ಕ್ ಡ್ರೈವ್ ಅಭಿವೃದ್ಧಿಗೆ ಹೆಸರಾದ ವೆಸ್ಟ್ರನ್ ಡಿಜಿಟಲ್ ಕಂಪನಿಯ ಪ್ರತಿನಿಧಿಗಳು ಕಷ್ಟಮ್ಸ್ ಗೆ ಸಂಬಂಧಿಸಿದ ವಿಚಾರಗಳ ಕುರಿತು ಮಾತುಕತೆ ನಡೆಯಿತು ಎಂದರು.
ಎಂಬಿ ಪಾಟೀಲ ನಿಯೋಗದಲ್ಲಿ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು. ಸಭೆ ಬಳಿಕಭಾರತೀಯ ಮೂಲದ ವಿವಿಧ ಕ್ಷೇತ್ರಗಳ ಗಣ್ಯರು ನೀಡಿದ ಔತಣಕೂಟದಲ್ಲಿ ಭಾಗಿಯಾಗಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.












Click it and Unblock the Notifications