ನಂದನ್ ಶುದ್ಧಹಸ್ತ, ಸಮರ್ಥ ಅಭ್ಯರ್ಥಿ : ಸಿದ್ದರಾಮಯ್ಯ

ಬೆಂಗಳೂರು,

ಮಾ.25:
ಮುಖ್ಯಮಂತ್ರಿ
ಸಿದ್ಧರಾಮಯ್ಯ
ಅವರು
ಬೆಂಗಳೂರು
ದಕ್ಷಿಣ
ಕ್ಷೇತ್ರದಿಂದ
ಸ್ಪರ್ಧಿಸಿರುವ
ತಮ್ಮ
ಪಕ್ಷದ
ಅಭ್ಯರ್ಥಿ
ನಂದನ್
ನಿಲೇಕಣಿ
ಅವರು
ಅತ್ಯಂತ
ಸಮರ್ಥ
ಹಾಗೂ
ಶುದ್ಧಹಸ್ತ
ಅಭ್ಯರ್ಥಿ
ಎಂದು
ಹಾಡಿ
ಹೊಗಳಿದ್ದಾರೆ.
ಜಯನಗರ,
ಬಸವನಗುಡಿ
ಪ್ರದೇಶದಲ್ಲಿ
ನಡೆದ
ಪ್ರಚಾರ
ಸಮಿತಿ
ಸಭೆಯ
ಅಧ್ಯಕ್ಷತೆ
ವಹಿಸಿಕೊಂಡು
ಸಿದ್ದರಾಮಯ್ಯ
ಅವರು
ಮಾತನಾಡಿದರು.

id="toptextpromo">
id='are-slot-1'
class='oiad
oi-axt
oiadv'>

'ಅನಂತ್

ಕುಮಾರ್
ಅವರಿಗೆ
ಹೋಲಿಸಿದರೆ
ತುಂಬ
ಶುದ್ಧಹಸ್ತದ,
ಸಚ್ಚಾರಿತ್ರ್ಯದ
ವ್ಯಕ್ತಿಯಾಗಿರುವ
ನಂದನ್
ಸಲ
ಖಂಡಿತಾ
ಗೆಲ್ಲುತ್ತಾರೆ.
ಐದು
ಸಲ
ಗೆದ್ದಿರುವ
ಅನಂತ್
ಕುಮಾರ್
ಸಲ
ಬರೀ
ಗುಜರಾತ್
ಅಭಿವೃದ್ಧಿ
ಬಗ್ಗೆ
ಹೇಳ್ತಾರೆ,
ಯಾಕಂದ್ರೆ
ಅವರಿಗೆ
ಹೇಳಿಕೊಳ್ಳಕ್ಕೆ
ಸ್ವಂತ
ಸಾಧನೆಯೇನೂ
ಇಲ್ಲ.
ಜೊತೆಗೆ
ಇನ್ನೂ
ಒಂದು
ವಿಚಾರ
ಅಂದರೆ
ಆದ್ರೆ
ಗುಜರಾತಿನ
ವಾಸ್ತವ
ಬೇರೆಯೇ
ಇದೆ.
2011ರಲ್ಲಿ
ಮಾನವ
ಅಭಿವೃದ್ಧಿ
ಸೂಚಕದಲ್ಲಿ
ಗುಜರಾತ್
6ನೇ
ಶ್ರೇಣಿಯಲ್ಲಿತ್ತು.
ಆದರೆ
ಮೋದಿಯವರ
ಆಡಳಿತಾವಧಿಯಲ್ಲಿ
9ನೇ
ಸ್ಥಾನಕ್ಕೆ
ಇಳಿದಿದೆ.
ಗುಜರಾತಿನ
ತಲಾದಾಯ
12ನೇ
ಸ್ಥಾನದಲ್ಲಿದೆ.
ಇದೆಲ್ಲ
ನೋಡಿದರೆ
ಅಲ್ಲಿ
ಬಿಜೆಪಿಯವರು
ಹೇಳುವಂತಹ
ಯಾವುದೇ
ಅಭಿವೃದ್ಧಿಯಾಗಿಲ್ಲ
ಎನ್ನೋದು
ಸುಸ್ಪಷ್ಟ'
ಎಂದು
ಹೇಳಿದರು.

id='are-slot-2'
class='oiad
oi-axt
oiadv'>

ಅನಂತ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಅನಂತ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹುಡ್ಕೋ ಸೇರಿದಂತೆ ವಿವಿಧ ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿಕೊಂಡಿರುವ ಈಗಿರುವ ಸಂಸದರನ್ನು ಕೈಬಿಟ್ಟು, ಈ ಸಲ ಯಾವುದೇ ಕಳಂಕವಿಲ್ಲದ ನಂದನ್ ನಿಲೇಕಣಿಯವರನ್ನು ಆರಿಸಬೇಕೆಂದು ಮತದಾರರನ್ನು ಕೋರಿದರು. ನಂದನ್ ಅವರಿಗಿಂತ ಉತ್ತಮ ಅಭ್ಯರ್ಥಿ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಚಿತ್ರದಲ್ಲಿ : ಬಸವನಗುಡಿಯ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಮಿತಿ ಸಭೆ

ನಂದನ್ ಹಣ ಮಾಡಲು ಇಲ್ಲಿಗೆ ಬಂದಿಲ್ಲ

ನಂದನ್ ಹಣ ಮಾಡಲು ಇಲ್ಲಿಗೆ ಬಂದಿಲ್ಲ

'ನಂದನ್ ನಿಲೇಕಣಿಯವರು ಏನೋ ಭಾರೀ ಹಣ ಮಾಡಬೇಕೆಂದು ರಾಜಕೀಯಕ್ಕೆ ಇಳಿದಿಲ್ಲ. ಅವರು ಸುಮ್ಮನೆ ಬಾಯಿ ತುದಿಯಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುವವರೂ ಅಲ್ಲ, ಅವರು ಪ್ರಾಮಾಣಿಕವಾಗಿ ಕೆಲಸ ಮಾಡುವವರು. ಬಿಎಟಿಎಫ್ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸ್ತಾ ಇರೋ ಬಗ್ಗೆ ನಮಗೆ ತುಂಬ ಅಭಿಮಾನವಿದೆ' ಎಂದ ಸಿದ್ದರಾಮಯ್ಯ. ಚಿತ್ರದಲ್ಲಿ: ಮಾರ್ನಿಂಗ್ ವಾಕ್ ಮಾಡುತ್ತಿರುವ ನಂದನ್ ನಿಲೇಕಣಿ

ಸೇಂಟ್ ಥಾಮಸ್ ಹಾಲ್ ನಲ್ಲಿ ನಂದನ್

ಸೇಂಟ್ ಥಾಮಸ್ ಹಾಲ್ ನಲ್ಲಿ ನಂದನ್

ಸೇಂಟ್ ಥಾಮಸ್ ಹಾಲ್ ನಲ್ಲಿ ನಂದನ್ ಅವರ ಬಗ್ಗೆ ಇದೇ ರೀತಿಯ ಅಭಿಮಾನದ ಮಾತುಗಳನ್ನಾಡಿ, ಬೆಂಬಲ ಸೂಚಿಸಿದವರಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಗೃಹ ಸಚಿವ ಕೆ ಜೆ ಜಾರ್ಜ್, ವಾರ್ತಾ ಮತ್ತು ಮಾಹಿತಿ ಸಚಿವ ರೋಶನ್ ಬೇಗ್, ಇನ್ನೂ ಇತರರು ಇದ್ದರು.

ಬೆಂಗಳೂರು ಅಭಿವೃದ್ಧಿಗಾಗಿ ಸ್ಪರ್ಧೆ

ಬೆಂಗಳೂರು ಅಭಿವೃದ್ಧಿಗಾಗಿ ಸ್ಪರ್ಧೆ

ನಾನು ಈ ಚುನಾವಣೆಯಲ್ಲಿ ಎರಡು ಕಾರಣಗಳಿಗಾಗಿ ಸ್ಪರ್ಧಿಸ್ತಾ ಇದ್ದೀನಿ. ಮೊದಲನೆಯದಾಗಿ ಬೆಂಗಳೂರು ಅಭಿವೃದ್ಧಿಗಾಗಿ, ಎರಡನೆಯದು ಬೆಂಗಳೂರಿನಲ್ಲಿ ಯುವ ತಲೆಮಾರಿಗೆ ಅವಕಾಶಗಳನ್ನು ಹುಟ್ಟುಹಾಕೋದು.' ಎಂದು ನಂದನ್ ನಿಲೇಕಣಿ ಅವರು ಇದೇ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+