ಸೂಪರ್ ಸ್ಟಾರ್ ಉಪ್ಪಿಗೆ ನಗು ತರಿಸಿದ್ದೇಕೆ ಉಪ ಚುನಾವಣೆ?
Recommended Video
ಬೆಂಗಳೂರು, ನವೆಂಬರ್.21: ರಾಜ್ಯದಲ್ಲಿ ಉಪ ಚುನಾವಣೆಯದ್ದೇ ಸದ್ದು. ಎಲ್ಲಿ ನೋಡಿದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಅನರ್ಹ ಶಾಸಕರ ಬಗ್ಗೆಯೇ ಮಾತು. ಇದರಿಂದ ಜನರಷ್ಟೇ ಬೇಸತ್ತು ಹೋಗಿಲ್ಲ. ಬದಲಿಗೆ ಸ್ಯಾಂಡಲ್ ವುಡ್ ಸ್ಟಾರ್ ಒಬ್ಬರು ಟ್ವೀಟ್ ಏಟು ಕೊಟ್ಟಿದ್ದಾರೆ.
ಬೆಳಗ್ಗೆ ಎಂದ್ರೆ ಎಲೆಕ್ಷನ್, ಸಂಜೆಯಾದ್ರೆ ಎಲೆಕ್ಷನ್. ರಾಜ್ಯದಲ್ಲಿ ಈಗ ಬೈ ಎಲೆಕ್ಷನ್ ನದ್ದೇ ಮಾತು. ಅನರ್ಹ ಶಾಸಕರನ್ನು ಕಂಡರೆ ಇವರಿಗೆ ಆಗಲ್ಲ. ಅವರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ದಿನನಿತ್ಯ ನಾಯಕರ ವಾಗ್ಯುದ್ಧಕ್ಕೆ ಕರ್ನಾಟಕದ ಜನರಷ್ಟೇ ಅಲ್ಲ. ಸೂಪರ್ ಸ್ಟಾರ್ ಉಪೇಂದ್ರ ಕೂಡಾ ರೋಸಿ ಹೋಗಿದ್ದಾರಂತೆ.
ರಾಜ್ಯದಲ್ಲಿ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಉಪ್ಪಿದಾದಾ ತಮ್ಮದೇ ಡಿಫರೆಂಟ್ ಸ್ಟೈಲ್ ನಲ್ಲಿ ಹೇಳಿದ್ದಾರೆ. ರಾಜ್ಯದ ಜನರು ಇನ್ನಾದರೂ ಜಾಗೃತರಾಗಿ ಎಂಬ ಸಂದೇಶವನ್ನು ತಮ್ಮ ಟ್ವೀಟ್ ಮೂಲಕ ನೀಡಿದ್ದಾರೆ.

ನಗೆ ಬರುತ್ತಿದೆ ಎನಗೇ ನಗೆ ಬರುತ್ತಿದೆ
ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ,
ಎಲ್ಲ ಕಡೆಯಲ್ಲೂ ಈ ಚುನಾವಣೆಯಲ್ಲಿ ಯಾರು ಗೆಲ್ತಾರೆ ?
ಅವರ್ ಗೆಲ್ತಾರಾ ? ಇವರ್ ಗೆಲ್ತಾರಾ ? ಆ ಪಕ್ಷ ಗೆಲ್ಲತ್ತಾ ? ಈ ಪಕ್ಷ ಗೆಲ್ಲುತ್ತಾ
ಅಂತ ಹಗರಣ ಮಾಡುವುದನ್ನು ಕಂಡು, ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜನಗಳು ಗೆಲ್ಲಲು ಏನು ಮಾಡಬೇಕು..? ಯಾರಾದರೂ ಹೇಳಬಲ್ಲಿರಾ ??
ಹೀಗೆ ಉಪ ಚುನಾವಣೆಯಲ್ಲಿ ಅವರು ಇವರ ಬಗ್ಗೆ, ಇವರು ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಜನರ ಬಗ್ಗೆ ಮಾತನಾಡುವವರೇ ಇಲ್ಲ. ಗೆಲುವಿನ ಲೆಕ್ಕಾಚಾರದಲ್ಲಿ ನಾಯಕರು ಹಾಗೂ ರಾಜಕೀಯ ಪಕ್ಷಗಳು ಇವೆ. ಇಲ್ಲಿ ನಾಯಕರು ಗೆಲ್ಲುವ ಬಗ್ಗೆ ಚರ್ಚೆ ನಡೆಯುತ್ತಿದೆಯೇ ವಿನಃ, ಮತ ನೀಡುವ ಜನರನ್ನು ಗೆಲ್ಲಿಸುವ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ಇದನ್ನು ಕಂಡು ನನಗೆ ನಗು ಬರುತ್ತಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದಾರೆ.












Click it and Unblock the Notifications