ಸಿಎಂ ಕುಮಾರಸ್ವಾಮಿ ದಿನಚರಿ ಬಗ್ಗೆ ಬಿಜೆಪಿಯಿಂದ ಟ್ವೀಟ್
ಬೆಂಗಳೂರು, ಜನವರಿ 14: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಪಕ್ಷಗಳ ಸಾಮಾಜಿಕ ಜಾಲ ತಾಣಗಳು ಸಕ್ರಿಯವಾಗಿ ಕೆಸರೆರಚಾಟದಲ್ಲಿ ತೊಡಗುವುದು ಮಾಮೂಲಿ. 2014ರಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸಕತ್ ಆಗಿ ಬಳಕೆ ಮಾಡಿಕೊಂಡಿದ್ದ ಬಿಜೆಪಿ, ಈಗಲೂ ತನ್ನ ಛಾಪು ಮೂಡಿಸಲು ಶ್ರಮಿಸುತ್ತಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲೂ ಸಾಮಾಜಿಕ ಜಾಲ ತಾಣಗಳ ಬಳಕೆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ ಎಂಬ ಮಾಹಿತಿಯಿದೆ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎಂಟು ತಿಂಗಳಾಗಿದ್ದರೂ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ.ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ತೋರಿಸಲು ಕರ್ನಾಟಕ ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಟ್ವಿಟ್ಟರ್ ಬಳಕೆ ಮಾಡುತ್ತಿದೆ.
ಕೇವಲ ಸುಳ್ಳು ಭರವಸೆಗಳಿಂದಲೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ದಿನಚರಿ ಬಗ್ಗೆ ಬಿಜೆಪಿ ವ್ಯಂಗ್ಯಭರಿತ ಟ್ವೀಟ್ ಮಾಡಿದೆ.
|
ವ್ಯಂಗ್ಯಭರಿತ ಟ್ವೀಟ್ ಹೀಗಿದೆ
ಬೆಳಗ್ಗೆ: ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಟಿ.ವಿ. ಚಾನಲ್ಗಳಲ್ಲಿ ಭರ್ಜರಿ ಪ್ರಚಾರ ಪಡೆಯುವುದು, ಬಳಿಕ ಬ್ರೇಕ್ ಫಾಸ್ಟ್ ಎಂಜಾಯ್ ಮಾಡುವುದು.
ಮಧ್ಯಾಹ್ನ: ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುವುದು.
ರಾತ್ರಿ: ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಆರಾಮವಾಗಿ ನಿದ್ರಿಸುವುದು.
ಮರುದಿನ- ಪುನರಾವರ್ತನೆ.
|
ಬಿಜೆಪಿಯ ನಿತ್ಯದ ಕೆಲಸ ಹೇಗೆ ಇರುತ್ತೆ?
ಚುನಾವಣೆಗೆ ಮೂರು ತಿಂಗಳು ಮುಂಚೆ: ನಿಮಗೆ ಉದ್ಯೋಗ ನೀಡುತ್ತೇವೆ.
ಚುನಾವಣೆಗೆ ಎರಡು ತಿಂಗಳುಗಳ ಮುಂಚೆ: ರಾಮ ಮಂದಿರ ನಿರ್ಮಿಸುತ್ತೇವೆ.
ಒಂದು ತಿಂಗಳು ಮುಂಚೆ: ರೈತರ ಸಾಲಮನ್ನ
ಚುನಾವಣೆ ಬಳಿಕ: ನಾವು ಈ ರೀತಿ ಆಶ್ವಾಸನೆ ನೀಡಲೇ ಇಲ್ಲ
|
17 ಜನ ಸಂಸದರು ಕಳೆದ 5 ವರ್ಷಗಳಲ್ಲಿ ಏನ್ಮಾಡಿದರು
ನಿಮ್ಮ 17 ಜನ ಸಂಸದರು ಕಳೆದ 5 ವರ್ಷಗಳಲ್ಲಿ ಏನ್ ಕಿತ್ತು ಗುಡ್ಡೆ ಹಾಕಿದ್ದೀರ? Vote ಕೇಳೋಕ್ಕೆ ಬಿಟ್ಟು ನಿಮ್ಮ ಮೋದಿ ಕರ್ನಾಟಕಕ್ಕೆ ಬೇರೆ ಯಾವುದಕ್ಕೆ ಬಂದಿದ್ದಾರೆ?(ಅನಂತ್ ಕುಮಾರ್ ಅಂತ್ಯಕ್ರಿಯೆ ಹೊರತುಪಡಿಸಿ) ಯಾಕೆ ಬರೀ vote ಬೇಕಾದವಾಗ ಮಾತ್ರ ಕರ್ನಾಟಕ ನೆನಪಾಗುತ್ತಾ?
|
ಸೋಲಿನ ಭೀತಿ ನಿಮ್ಮ ಮುಖದಲ್ಲಿ ಎದ್ದು ಕಾಣುತ್ತಿದೆ
ಸೋಲಿನ ಭೀತಿ ನಿಮ್ಮ ಮುಖದಲ್ಲಿ ಎದ್ದು ಕಾಣುತ್ತಿದೆ..ಅದು ನಿಮಗೆ ಕಳೆದ ಚುನಾವಣೆಯಲ್ಲಿ 30% ಸೀಟ್ ತಂದು ಕೊಟ್ಟು UPಅಲ್ಲಿ ಈ ಸಾರಿ 5% ಬರಲ್ಲ











Click it and Unblock the Notifications