'ಕರ್ನಾಟಕ ಬಂದ್'ಗೆ ಬೆಂಬಲ ಕೋರಿ ಬೆಂಗಳೂರಿನಲ್ಲಿ 2ನೇ ದಿನದ 'ಅಭಿಯಾನ' ಆರಂಭ
ಬೆಂಗಳೂರು, ಸೆಪ್ಟಂಬರ್ 28: ಕಾವೇರಿ ವಿವಾದ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಲು ಕೆಲವೇ ಗಂಟೆಗಳು ಬಾಕಿ ಇದೆ. ಈಗಾಗಲೇ ನೂರಾರು ಸಂಘಟನೆಗಳು ಕರ್ನಾಟಕ ಬಂದ್ ಬೆಂಬಲಿಸಿವೆ ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬುಧವಾರದಿಂದ ಬೆಂಗಳೂರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. ತೆರದ ವಾಹನದಲ್ಲಿ ಸಂಚಾರ ಮಾಡುವ ಮೂಲಕ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ನಗರದ ವಿವಿಧ ಪ್ರಮುಖ ಬೀದಿ ಬೀದಿಗಳಲ್ಲಿ 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ'ದ ವತಿಯಿಂದ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಇಂದು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಅಭಿಯಾನ ಆರಂಭಿಸಲಾಗಿದೆ. ನಾಳಿನ ಸೆಪ್ಟಂಬರ್ 29ರ ಕರ್ನಾಟಕ ಬಂದ್‌ಗೆ ನಡೆಯಲಿದೆ. ಈ ಸಂಬಂಧ ಅಖಂಡ ಕರ್ನಾಟಕ ಬಂದ್ ಬೆಂಬಲಿಸುವಂತೆ ಅವರು ಕೋರಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಆರಂಭವಾಗಿದ್ದು, ಬೆಂಗಳೂರು ನಗರಾದ್ಯಂತ ಈ ತೆರೆದ ವಾಹನ ಸಂಚಾರ ನಡೆಸಲಿದೆ. ಒಕ್ಕೂಡದ ಮುಂಖಡರು, ಕನ್ನಡ ಚಳವಳಿ ವಾಟಾಳ್ ಪಕ್ಷದ ಸದಸ್ಯರು, ಕನ್ನಡಪರ ಕಾರ್ಯಕರ್ತರು, ಡಾ.ರಾಜಕುಮಾರ್ ಅಭಿಮಾನಿ ಸಂಘ ಅಧ್ಯಕ್ಷ ಡಾ.ಸಾ.ರಾ.ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಿವರಾಮೇಗೌಡ ಮತ್ತು ನಾರಾಯಣ ಗೌಡ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಅಭಿಯಾನದಲ್ಲಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೊಶ: ಬಂದ್ ಗೆ ಕರೆ
ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ ಸಹಿತ ತಮಿಳುನಾಡು ಕೋರ್ಟ್ ಮೂಲಕ ನೀರು ಹರಿಸಿಕೊಳ್ಳುತ್ತಿದೆ. ಇದಕ್ಕೆ ವಿರೋಧ ಒಡ್ಡಬೇಕಾದ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಹಳೇ ಮೈಸೂರು ಭಾಗದ ಜಿಲ್ಲೆಗಳು ಸೇರಿದಂತೆ ವಿವಿಧ ಭಾಗದ ರೈತರಿಗೆ ಕೃಷಿಗೆ ನೀರಿಲ್ಲದಂತಾಗಿದೆ.
ನೀರು ಬಿಡಲ್ಲ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೀರುಹರಿಸುತ್ತಲೇ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸಬಾರದು ಎಂಬ ಆಗ್ರಹ ಕೇಳಿ ಬಂದಿದೆ. ಆದರೆ ಇದಕ್ಕೆ ಸರ್ಕಾರ ಪ್ರತಿಕ್ರಿಯಿಸಿಲ್ಲ, ಕಾವೇರಿ ವಿಚಾರದಲ್ಲಿ ಸ್ಪಷ್ಟ ನಿಲುವು ಕೈಗೊಳ್ಳದ್ದನ್ನು ವಿರೋಧಿಸಿ ಬೆಂಗಳೂರು ಬಂದ್ ಬೆನ್ನಲ್ಲೆ ನಾಳೆ ಸೆಪ್ಟಂಬರ್ 29ರಂದು ಶುಕ್ರವಾರ ಕರ್ನಾಟಕ ಬಂದ್ ನಡೆಯಲಿದೆ.












Click it and Unblock the Notifications