Get Updates
Get notified of breaking news, exclusive insights, and must-see stories!

ಕನ್ನಡ ಅಂದರೆ ಏನ್‌ ಸುಮ್ನೇನಾ, ಎಲ್ಲೆಲ್ಲೂ ನಾವೇ !

ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಕನ್ನಡ ರಾಜ್ಯೋತ್ಸವ ಕನ್ನಡಾಭಿಮಾನ ಮೊಳಗುತ್ತಿದ್ದು, ಕನ್ನಡ ಬಾವುಟ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಶುರುವಾಗಿದೆ. ವಿದೇಶಿ ಹಾಗೂ ಭಾರತದ ಬಾವುಟದೊಂದಿಗೆ ಕನ್ನಡ ಬಾವುಟ ಕಾಣಿಸಿಕೊಂಡಿದ್ದು, ಕನ್ನಡಿಗರು ಪುಳಕಿತವಾಗುವಂತೆ ಮಾಡಿದೆ.

ಈ ಬಾರಿ ಕನ್ನಡ ರಾಜ್ಯೋತ್ಸವ ನವೆಂಬರ್‌ 1ಕ್ಕಿಂತ ಮೊದಲೇ ಪ್ರಾರಂಭವಾಗಿದೆ. ಈ ವರ್ಷ ಹಲವು ಕಾರಣಗಳಿಗೆ ಕನ್ನಡ ಭಾಷೆ, ಕನ್ನಡಾಭಿಮಾನ ಹಾಗೂ ಕನ್ನಡ ಬಳಕೆಯ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ. ಕನ್ನಡ ವಿರೋಧಿಗಳು ಹಾಗೂ ಹಿಂದಿ ಹೇರಿಕೆಯ ವಿಚಾರದಿಂದಲೂ ಕನ್ನಡಿಗರು ಕೆರಳಿದ್ದು ಇದೆ. ಇದೇ ಕಾರಣಕ್ಕೆ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದ ಬದಲಾಗಿ ಇಡೀ ವರ್ಷವೆಲ್ಲ ಕನ್ನಡ ರಾಜ್ಯೋತ್ಸವದ ವಾತಾವರಣವಿತ್ತು. ಇನ್ನು ಈಗ ರಾಜ್ಯೋತ್ಸವವೇ ಬಂದಿದೆ. ಈಗ ಕೇಳ್ಬೇಕಾ.

Kannadigas are everywhere post going viral on social media

ಕನ್ನಡ ರಾಜ್ಯೋತ್ಸವದ ಹೊಸ್ತಿನಲ್ಲಿರುವ ಕನ್ನಡಿಗರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿತ ಮಂಡಳಿಯು ಮುಂಚಿತವಾಗಿಯೇ ಸಿಹಿ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕೆಲಸಕ್ಕೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆಯೇ ಸುರಿದಿದೆ. ಅದೇನು ಅಂದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡದ ಬಾವುಟ ರಾರಾಜಿಸಿರುವುದು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್‌ ಮ್ಯಾಚ್‌ ನಡೆಯುತ್ತಿದೆ. ಈ ವೇಳೆ ಭಾರತ ಹಾಗೂ ನ್ಯೂಜಿಲ್ಯಾಂಡ್ ಬಾವುಟಗಳ ನಡುವೆ ಕನ್ನಡದ ಬಾವುಟವು ರಾರಾಜಿಸುತ್ತಿದ್ದು, ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ರೆಂಡ್‌ ಆಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಬಾವುಟಗಳ ನಡುವೆ ಕನ್ನಡದ ಬಾವುಟ ಎಂದು ಹಲವು ಕನ್ನಡಿಗರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ರವಿ ಆಲದಮರ ಎನ್ನುವ ಖಾತೆಯಿಂದ Can you see it,

Kannada flag. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡದ ಕುಡಿ ಎಂದು ಬರೆದುಕೊಳ್ಳಲಾಗಿದೆ. ಇನ್ನು ಕೆಲವರು ಕನ್ನಡದ ಬಾವುಟ ಕನ್ನಡಿಗರ ಏಕತೆಯ ಸಂಕೇತ ಎಂದು ಬರೆದುಕೊಂಡಿದ್ದಾರೆ.

ಕನ್ನಡಿಗರನ್ನು ವಿರೋಧಿಸುವವರೇ ನೋಡಿ: ಇನ್ನು ಕೆಲವರು ಇದೇ ವಿಷಯದ ಮೇಲೆ ಕನ್ನಡ ಹಾಗೂ ಕನ್ನಡಿಗರನ್ನು ವಿರೋಧಿಸುವವರಿಗೆ ಟಾಂಗ್‌ ಕೊಟ್ಟಿದ್ದಾರೆ. ಕನ್ನಡ ವಿರೋಧಿಗಳೇ ನೋಡಿ ಕನ್ನಡ ಬಾವುಟ ಆಕಾಶದೆತ್ತರ ಹಾರಾಡುತ್ತಿದೆ. ಹೀಗ ಏನು ಹೇಳ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್‌ಸಿಬಿ ಮ್ಯಾಚ್‌ನಲ್ಲೂ ಕನ್ನಡ ಬಾವುಟ: ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್‌ ಮ್ಯಾಚ್ ನಡೆಯುವಾಗ ಕನ್ನಡ ಬಾವುಟ ಹಾರಾಡುತ್ತಿರುವುದು ಸುದ್ದಿಯಾಗಿದೆ ನಿಜ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಬಾವುಟ ಹಾರಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಆರ್‌ಸಿಬಿ ಮ್ಯಾಚ್‌ ನಡೆದಾಗಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡದ ಬಾವುಟವನ್ನು ಹಾರಿಸಲಾಗಿದೆ. ಇದೀಗ ವಿದೇಶಿ ಹಾಗೂ ಭಾರತದ ಬಾವುಟದ ಪಕ್ಕದಲ್ಲೇ ಕನ್ನಡ ಬಾವುಟ ರಾರಾಜಿಸುತ್ತಿರುವುದು ಕನ್ನಡಿಗರನ್ನು ಪುಳಕಿತರನ್ನಾಗಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+