Bengaluru: ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ, ವಿಶೇಷತೆಗಳು
ಬೆಂಗಳೂರು, ಜನವರಿ 27: ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಸೋಮವಾರ (ಜನವರಿ 27) ನಾಡದೇವತೆ ಕನ್ನಡಾಂಬೆ ಭುವನೇಶ್ವರಿ ತಾಯಿಯ 25 ಅಡಿ ಎತ್ತರ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ವಿಶಿಷ್ಟ ಪ್ರತಿಮೆಯನ್ನ ಅನಾವರಣ ಮಾಡಲಿದ್ದಾರೆ.
ಇಂದು ವಿಧಾನಸೌಧ ಆವರಣದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದಕ್ಕು ಮೊದಲು ನಗರದ ನಾಲ್ಕು ದಿಕ್ಕುಗಳಿಂದ ವಿವಿಧ ಕಲಾತಂಡಗಳ ಸಮೇತವಾಗಿ ಮೆರವಣಿಗೆ ನಡೆಯಲಿದೆ. ಅಲ್ಲಿಂದ ಮೆರವಣಿಗೆ ಮೂಲಕ ಕಲಾತಂಡಗಳುಮಧ್ಯಾಹ್ನ 12ಕ್ಕೆ ಮೆರವಣಿಗೆ ಆರಂಭಿಸಲಿದ್ದಾರೆ. ಬಳಿಕ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.

ಇಂದಿರಾಗಾಂಧಿ (ಪೂರ್ವ ದಿಕ್ಕು), ಕೆಂಗೇರಿ-ಉಪನಗರ (ಪಶ್ಚಿಮ ದಿಕ್ಕು), ಹೆಬ್ಬಾಳ (ಉತ್ತರ ದಿಕ್ಕು) ಹಾಗೂ ಬಸವನಗುಡಿ (ದಕ್ಷಿಣ ದಿಕ್ಕು) ಕಲಾತಂಡಗಳು, ಕನ್ನಡ ಪರ ಸಂಘಟನೆಗಳು ಸದಸ್ಯರು, ಕಾರ್ಯಕರ್ತರು ನಾಡಿನ ಗಣ್ಯರಾದ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಧಕರ ಭಾವಚಿತ್ರಗಳು, ವಿವಿಧ ಸಾಮ್ರಾಜ್ಯಗಳ ಪ್ರತಿಕೃತಿ, ಪಲ್ಲಕಿ ಸಮೇತ ಮೆರವಣಿಗೆ ವಿಧಾನಸೌಧದತ್ತ ಬರಲಿದೆ.
ವಿಧಾನಸೌಧ ಸುತ್ತಮುತ್ತ, ಮೆರವಣಿಗೆ ದಾರಿಯುದ್ಧಕ್ಕೆ ಕನ್ನಡ ಭಾವುಟ ರಾರಾಜಿಸಲಿವೆ. ಅನೇಕ ಕಲಾತಂಡಗಳು ಡೊಳ್ಳು, ವಾಧ್ಯಗಳ ಸಮೇತರಾಗಿದ್ದ ಪಾಲ್ಗೊಳ್ಳಲಿದ್ದಾರೆ. ವಿಧಾನಸೌದಕ್ಕೆ ಸಂಜೆ ಬಂದು ಸೇರುತ್ತಿದ್ದಂತೆ 06 ಗಂಟೆಗೆ ವೇದಿಕೆ ಕಾರ್ಯಕ್ರಮ ಶುರುವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ವೇದಿಕೆಯಲ್ಲಿ ಹೊನ್ನ ಬಿತ್ತೆವು ನೃತ್ಯ ರೂಪಕ, ಕನ್ನಡ ಗೀತೆಗಳು ಮೊಳಗಲಿವೆ. ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿಮೆ ವೈಶಿಷ್ಟ್ಯತೆ
ಕಂಚಿನ ಪ್ರತಿಮೆಯ ವೈಶಿಷ್ಟ್ಯ ತೆ, ವಿವರ
* ನೆಲಮಟ್ಟದಿಂದ ಪ್ರತಿಮೆಯು 43.6 ಅಡಿ ಎತ್ತರವಿದೆ.
* ಪ್ರತಿಮೆಯ ಲೋಹದ ಒಟ್ಟು ತೂಕ - 31.50 ಟನ್
* ಭುವನೇಶ್ವರಿ ಪ್ರತಿಮೆ - 20 ಟನ್
* ಕರ್ನಾಟಕ ನಕ್ಷೆ - 11.50 ಟನ್
* ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ) 4500 ಚ.ಮೀ
* ಕಲ್ಲು ಕಟ್ಟಡದ ಪೀಠದ ವಿವರ - ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲಾಗಿದೆ.
* ಕಾಮಗಾರಿಯ ಅಂದಾಜು ವೆಚ್ಚ : 21.24 ಕೋಟಿ
* ಕಾಮಗಾರಿ ನಿರ್ವಹಣೆ: ಲೋಕೋಪಯೋಗಿ ಇಲಾಖೆ
ಕಾರ್ಯಕ್ರಮದ ಅತಿಥಿಗಳು
ಭುವನೇಶ್ವರಿ ಪ್ರತಿಮೆ ಲೋಕಾರ್ಪಣೆ ಕಾಯಕ್ರಮದಲ್ಲಿ ಉಪಮುಖ್ಯ ಡಿಕೆ ಶಿವಕುಮಾರ್, ಕೇಂದ್ರ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ಸಭಾಪತಿಗಳಾದ ಬಸವರಾಜ ಹೊರಟ್ಟಿ, ಯು.ಟಿ.ಖಾದರ್, ಸಚಿವರಾದ ಶಿವರಾಜ್ ತಂಗಡಿ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ರಿಜ್ವಾನ್ ಅರ್ಷದ್ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications